ಸುಳ್ಯ: ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Advt_Headding_Middle

ಸುಳ್ಯದ ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ವಿದ್ಯಾರ್ಥಿಗಳಲ್ಲಿ ಇಂಟರ್ನ್ಶಿಪ್ ಅನುಭವವನ್ನು ಇಂಡಸ್ಟ್ರಿ ಮತ್ತು ಸಂಶೋಧನ ವಿಭಾಗಗಳಲ್ಲಿ ಪಡೆಯುವುದಕ್ಕಾಗಿ ಕಾಲೇಜಿನಲ್ಲಿ “ಶೀಟ್ ಮೆಟಲ್ ಪ್ರಾಡಕ್ಟ್ ಡಿಸೈನ್” ಎಂಬ ವಿಷಯದಲ್ಲಿ ಐದು ದಿನಗಳ ಕಾರ್ಯಾಗಾರವನ್ನು ವಿಭಾಗದ ಸಿ.ಎ.ಇ.ಡಿ ಸೆಂಟರ್ ನಲ್ಲಿ ಆ. 17ರಿಂದ ಆ. 24ರ ತನಕ ನಡೆಸಲಾಯಿತು. ಈ ಕಾರ್ಯಾಗಾರವು ಮುಂದಿನ ಒಂದು ತಿಂಗಳ ಕಾಲ ಪ್ರಾಯೋಗಿಕ ತರಗತಿಗಳೊಂದಿಗೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಪ್ರಸ್ತುತ ‘ವರ್ಕ್ ಫ್ರಮ್ ಹೋಮ್’ ನಂತಹ ಅನುಭವವನ್ನು ನೀಡುವುದರ ಜೊತೆಗೆ ಕ್ರಿಯಾಶೀಲತೆ ಮತ್ತು ಆವಿಷ್ಕಾರಗಳನ್ನು ಹುಟ್ಟು ಹಾಕಲಿದೆ ಎಂದು ವಿಭಾಗದ ಮುಖ್ಯಸ್ಥರಾದ ಡಾ| ಉಮಾಶಂಕರ್ ಕೆ. ಎಸ್. ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಯಾಗಿ ಪ್ರೋ. ಭರತ್. ಪಿ. ಯವರು ನಡೆಸಿಕೊಟ್ಟರು. ಇಂಡಸ್ಟ್ರಿಯಲ್ಲಿ 8 ವರ್ಷಗಳ ಅನುಭವದೊಂದಿಗೆ ಮುಂದಿನ ದಿನಗಳಲ್ಲಿ ಮೆಕ್ಯಾನಿಕಲ್ ವಿಧ್ಯಾರ್ಥಿಗಳು ಯಾವ ರೀತಿ ತಯಾರಾಗಬೇಕೆಂಬುವುದನ್ನು ಬೌದ್ಧಿಕ ಮತ್ತು ಪ್ರಯೋಗಿಕವಾಗಿ ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಶೀಟ್ ಮೆಟಲ್ ಎಂಬುವುದು ಎಲ್ಲಾ ಪ್ರೋಡಕ್ಟಗಳ ಅವಿಭಾಜ್ಯ ಅಂಗವಾಗಿರುವುದರಿಂದ ಅದರ ಡಿಸೈನ್ ಮತ್ತು ಮಾರ್ಪಡಿಸುವಿಕೆಯಲ್ಲಿ ಅನುಸರಿಸಬೇಕಾದ ವಿಧಾನಗಳು ಮತ್ತು ಪ್ರಾಯೋಗಿಕವಾಗಿ ನಡೆದಾಗ ಆಗಬಹುದಾದ ಬದಲಾವಣೆ ಮತ್ತು ಗುಣವಿಶೇಷತೆಗಳನ್ನು, ಕಂಪ್ಯೂಟರ್ ಸಿಮ್ಯುಲೇಷನ್ ಮೂಲಕ ಹೇಗೆ ಕಂಡುಕೊಳ್ಳಬಹುದು ಮತ್ತು ಯಾವ ರೀತಿಯ ಗುಣವಿಶೇಷತೆಗಳನ್ನು ಡಿಸೈನ್ ಮತ್ತು ಮಾರ್ಪಡಿಸುವ ವಿಧಾನಗಳಲ್ಲಿ ಅಳವಡಿಸಬಹುದು ಎಂಬುವುದು ಕಾರ್ಯಕ್ರಮದ ಉದ್ದೇಶವಾಗಿದ್ದು, ಭಾಗವಹಿಸಿದ ವಿಧ್ಯಾರ್ಥಿಗಳಲ್ಲಿ ಈ ಅನುಭವವು ದೊರಕಿತು. ಅಟೊಮೊಬೈಲ್, ಮೊಬೈಲ್ ಫೋನ್, ಕಂಪ್ಯೂಟರ್ ಮುಂತಾದ ಹಲವು ವಸ್ತುಗಳು ಶೀಟ್ ಮೆಟಲ್‌ನಿಂದ ಮಾಡಲ್ಪಟ್ಟಿದ್ದು ವಿದ್ಯಾರ್ಥಿಗಳಲ್ಲಿ ಇಂಡಸ್ಟ್ರಿ ರೀಡ್ ಎಂಬ ವಿಶೇಷತೆಯು ದೊರಕಲಿದೆ. ಕಾರ್ಯಾಗಾರವನ್ನು ವಿದ್ಯಾರ್ಥಿಗಳ ಅಸೋಷಿಯೆಷನ್ ಆದ “ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಷಿಯೆಷನ್ (ಎಂ.ಇ.ಎ.) ಆಯೋಜಿಸಿತ್ತು. ಈ ಕಾರ್ಯಾಗಾರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ 50 ವಿದ್ಯಾರ್ಥಿಗಳು ಭಾಗವಹಿಸಿ ನೈಪುಣ್ಯತೆಯನ್ನು ಪಡೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.