ಬೆಳ್ಳಾರೆ: ಕ್ಷಯ ಮುಕ್ತ ಭಾರತ ಕಿರುಚಿತ್ರ ತರಬೇತಿ ಕೇಂದ್ರದಲ್ಲಿ ಸಂವಾದ

Advt_Headding_Middle

ಜೇಸಿಐ ಬೆಳ್ಳಾರೆ, ಜೂನಿಯರ್ ಜೆಸಿ ವಿಭಾಗ ಬೆಳ್ಳಾರೆ, ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ- ಸುಳ್ಯ ಇದರ ನೇತೃತ್ವದಲ್ಲಿ ಬೆಳ್ಳಾರೆ ಜೇಸಿ ಭವನದಲ್ಲಿ ನಡೆಯುತ್ತಿರುವ ಕ್ಷಯ ಮುಕ್ತ ಭಾರತ ಕಿರುಚಿತ್ರದ 6 ನೇ ರಂಗ ತರಬೇತಿ ಶಿಬಿರಕ್ಕೆ ಬೆಳ್ತಂಗಡಿ ತಾಲೂಕು ಆಹಾರ ನಿರೀಕ್ಷಕರಾದ ವಿಶ್ವ ಕೆ ಹರಿಹರಪಲ್ಲತ್ತಡ್ಕ, ಸುಳ್ಯ ಸುದ್ದಿ ಪತ್ರಿಕೆ ವರದಿಗಾರ ಈಶ್ವರ ವಾರಣಾಶಿ, ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಆರಿಫ್ ಬೆಳ್ಳಾರೆ, ರಂಗ ಕಲಾವಿದ ಶಿವರಾಮ್ ಕಲ್ಮಡ್ಕ, ಜೂನಿಯರ್ ಜೇಸಿ ಪೂರ್ವಾಧ್ಯಕ್ಷರಾದ ಶರತ್ ಕುಮಾರ್ ಮತ್ತು ಮಹೇಶ್ ಭೇಟಿ ನೀಡಿ ಕಲಾ ತಂಡದೊಂದಿ ಸಂವಾದ ನಡೆಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜೇಸಿ ಅಧ್ಯಕ್ಷರಾದ ಪದ್ಮನಾಭ ಕಲಾಸುಮ ಸ್ವಾಗತಿಸಿ, ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಲೋಕೇಶ್ ತಂಟೆಪ್ಪಾಡಿ ವಂದಿಸಿದರು. ರಂಗಕರ್ಮಿ ಕೃಷ್ಣಪ್ಪ ಬಂಬಿಲ, ನಾಟಕಕಾರರಾದ ಸತೀಶ್ ಕಕ್ಕೆಪದವು, ಜೇಸಿ ಕಾರ್ಯದರ್ಶಿ ಜಗದೀಶ್ ರೈ ಪೆರುವಾಜೆ, ಖಜಾಂಜಿ ಜೇಸಿ ನಿರ್ಮಲಾ ಜಯರಾಮ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಲೋಕೇಶ್ ತಂಟೆಪ್ಪಾಡಿ ಮತ್ತು ಚೈತ್ರಾ ಲೋಕೇಶ್ ದಂಪತಿಗಳ ಪುತ್ರಿ ಅವನಿ ತಂಟೆಪ್ಪಾಡಿ ಕೃಷ್ಣವೇಷಧಾರಿಯಾಗಿ ಎಲ್ಲರ ಗಮನ ಸೆಳೆದಳು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.