ಸುಳ್ಯ ಗೃಹರಕ್ಷಕ ದಳದ ನೂತನ ಕಚೇರಿ ಉದ್ಘಾಟನೆ

Advt_Headding_Middle

ಕರ್ನಾಟಕ ಗೃಹರಕ್ಷಕ ದಳ ಸುಳ್ಯ ಘಟಕದ ನೂತನ ಕಛೇರಿ ಉದ್ಘಾಟನೆಯು ಆ. 29ರಂದು ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ನಡೆಯಿತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸುಳ್ಯ ಶಾಸಕರಾದ ಎಸ್. ಅಂಗಾರ ಕಚೇರಿಯನ್ನು ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಹಾಗೂ ಪೌರ ರಕ್ಷಣಾ ಪಡೆಯ ಮುಖ್ಯ ಪಾಲಕ ಡಾ. ಮುರಲಿ ಮೋಹನ್ ಚೂಂತಾರು ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಪದ್ಮಶ್ರೀ ಪುರಸ್ಕೃತ, ನಿವೃತ್ತ ಕಂಪನಿ ಘಟಕಾಧಿಕಾರಿ ಗಿರೀಶ್ ಭಾರದ್ವಾಜ್ ಅತಿಥಿಗಳಾಗಿ ಭಾಗವಹಿಸಿದ್ದರು. ನಿವೃತ್ತ ಘಟಕಾಧಿಕಾರಿಗಳಾದ ರಾಮಕೃಷ್ಣ ಮತ್ತು ಉಮ್ಮರ್ ಎ.ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ಮನ್ವಿತಾ ಪ್ರಾರ್ಥಿಸಿದರು.


ಗೃಹರಕ್ಷಕ ದಳದ ದ.ಕ. ಮತ್ತು ಉಡುಪಿ ಜಿಲ್ಲಾ ಉಪಸಮಾದೇಷ್ಟ ರಮೇಶ್ ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗೃಹರಕ್ಷಕ ದಳ ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್ ಶೆಟ್ಟಿ ಬನ್ನಂಜೆ ವಂದಿಸಿದರು. ಶಿಕ್ಷಕ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ಸಚಿವ ಎಸ್. ಅಂಗಾರ, ಡಾ. ಮುರಲಿಮೋಹನ್ ಚೂಂತಾರು, ಭವಾನಿಶಂಕರ, ಗಿರೀಶ್ ಭಾರದ್ವಾಜ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸುಳ್ಯ ಮತ್ತು ಸುಬ್ರಹ್ಮಣ್ಯ ಘಟಕಕ್ಕೆ ಕಂಪ್ಯೂಟರ್ ನ್ನು ಕೊಡುಗೆಯಾಗಿ ನೀಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.