ಮಿಸೆಸ್ ಕರ್ನಾಟಕ – ದ.ಕ. ವಿನ್ನರ್ ಆಗಿ ಪೂರ್ಣಿಮಾ ಕೃಷ್ಣರಾಜ್

Advt_Headding_Middle

ಮಿಸೆಸ್ ಇಂಡಿಯಾ ಕರ್ನಾಟಕ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಪ್ರಥಮ ಬಾರಿಗೆ ಮಿಸೆಸ್ ಇಂಡಿಯಾ ಕರ್ನಾಟಕ- 2021 ದಕ್ಷಿಣ ಕನ್ನಡ ವಿನ್ನರ್ ಆಗಿ ವಿ.ಕ. ಜೋಡಿ ತಾರೆ ಗಾಯಕಿ ಶ್ರೀಮತಿ ಪೂರ್ಣಿಮಾ ಕೃಷ್ಣರಾಜ್ ಹೊರಹೊಮ್ಮಿದ್ದಾರೆ. ಅಲ್ಲದೆ ಮಿಸೆಸ್ ಇಂಡಿಯಾ ಕರ್ನಾಟಕ 2021  ಕಂಜೇನಿಯಾಲಿಟಿ ಸಬ್ ಟೈಟಲನ್ನು ಕೂಡ ಅವರು ಗೆದ್ದುಕೊಂಡಿದ್ದಾರೆ.
ಬೆಂಗಳೂರಿನ ರಮಡ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ನಾಲ್ಕು ದಿನಗಳ ಈ ಸ್ಪರ್ಧೆಯನ್ನು ವಿ.ಕ. ಪ್ರಿಂಟ್ ಸಹಭಾಗಿತ್ವದಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಇದರ ನಿರ್ದೇಶಕಿ ಯಾಗಿರುವ ಪ್ರತಿಭಾ ಸೌಂಶಿಮಠ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಐ ಯಾಮ್ ಎ ವುಮನ್ ಥೀಮ್ ಅಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ ದ.ಕ ಜಿಲ್ಲೆಯಿಂದ ಆಯ್ಕೆಯಾದ ಪೂರ್ಣಿಮಾ ಕೃಷ್ಣರಾಜ್ ರವರು ರಾಜ್ಯಮಟ್ಟದಲ್ಲಿ ೩೬ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿದ್ದರು.
ಪೂರ್ಣಿಮಾ ರವರು ಸುಳ್ಯ ನ್ಯಾಯಾಲಯದ ಎ.ಪಿ.ಪಿ. ಕಚೇರಿಯಲ್ಲಿ ಬೆರಳಚ್ಚುಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ ಹಾಗೂ ಗಾಯಕ ಕೃಷ್ಣರಾಜ ಕೇರ್ಪಳರವರ ಪತ್ನಿ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.