ಗುತ್ತಿಗಾರು ಗ್ರಾಮವನ್ನು ವನ್ಯದಾಮಕ್ಕೆ ಸೇರಿಸುವ ಹುನ್ನಾರ

Advt_Headding_Middle

 

ಗುತ್ತಿಗಾರು ಜನಜಾಗೃತಿ ಸಭೆಯಲ್ಲಿ ಅಕ್ರೋಶ

ಗಣಿಗಾರಿಕೆ ವಿಚಾರವಾಗಿ ಹೈಕೋರ್ಟ್ ಮೊರೆ ಹೋಗಿ ಗುತ್ತಿಗಾರು ಗ್ರಾಮವನ್ನು ವನ್ಯದಾಮ ವ್ಯಾಪ್ತಿಯ ಹೆಸರಿನೊಂದಿಗೆ ತಳಕು ಹಾಕಿದ ವಿಚಾರವಾಗಿ ಗುತ್ತಿಗಾರಿನ ಮುತ್ತಪ್ಪ ದೈವಸ್ಥಾನದ ವಠಾರದಲ್ಲಿ ಜನಜಾಗೃತಿ ಸಭೆ ನಡೆಯಿತು.
ಸಾಮಾಜಿಕ ಕಾರ್ಯಕರ್ತನ ನೆಲೆಯಲ್ಲಿ ಭೋಜಪ್ಪ ನಾಯ್ಕ ಎಂಬವರು ಪುಷ್ಪಗಿರಿ ವನ್ಯದಾಮ ಪ್ರದೇಶವಾದ ಗುತ್ತಿಗಾರಿನಲ್ಲಿ ಗಣಿಗಾರಿಕೆ ನಡೆಯುತ್ತಿರುವುದಾಗಿ ಕೋರ್ಟು ಮೊರೆ ಹೋಗಿದ್ದರು. ಇದಕ್ಕೆ ಈ ಸಭೆಯಲ್ಲಿ ಖಂಡನೆ ವ್ಯಕ್ತವಾಯಿತು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ ಮಾತನಾಡಿ,
ಈ ಗ್ರಾಮಕ್ಕೆ ಸಂಬಂಧಪಡದ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೋಗಿ ಪುಷ್ಪಗಿರಿ ವನ್ಯಧಾಮದೊಳಗೆ ಗಣಿಗಾರಿಕೆ ನಡೆಯುತ್ತಿರುವುದಾಗಿ ದಾವೆ ಹೂಡಿದ್ದಾರೆ. ಮುಂದೊಂದು ದಿನ ಗುತ್ತಿಗಾರು ಗ್ರಾಮಕ್ಕೆ ಇದು ಕಂಟಕವಾಗಲಿದೆ. ಒಂದೊಮ್ಮೆ ವನ್ಯಧಾಮಕ್ಕೆ ಈ ಗ್ರಾಮ ಸೇರಿಬಿಟ್ಟರೆ ಕೃಷಿಕರು ನೆಮ್ಮದಿಯ ಬದುಕು ಕಳೆದುಕೊಳ್ಳುತ್ತಾರೆ. ಫಾರೆಸ್ಟ್ ಆಕ್ಟ್ ಏನಾದ್ರೂ ಬಂದರೆ ಮುಂದಿನ ದಿನಗಳಲ್ಲಿ ನಮ್ಮ ತೋಟಕ್ಕೆ ಮದ್ದು ಬಿಡಲು ಆಗದಂಥ ಪರಿಸ್ಥಿತಿ ಬರುತ್ತದೆ. ಕುದುರೆಮುಖದಲ್ಲಿರುವಂತೆ ಇಲ್ಲಿ ಗೇಟ್ ಅಳವಡಿಸಿ ನಮ್ಮನ್ನು ಒಳಗೆ ಮತ್ತು ಹೊರಗೆ ಬಿಡುವಂತಗ ವ್ಯವಸ್ಥೆ ಬರಬಹುದು. ಇಂತಹ ಊರಿಗೆ ಮಾರಿಯಾಗಿರುವ ವ್ಯವಸ್ಥೆ ಬರದಂತಾಗಲು ನಾವು ಪಕ್ಷ ಬಿಟ್ಟು ಒಗ್ಗಟ್ಟಾಗಬೇಕಾಗಿದೆ. ಇಲ್ಲಿ ವೈಯಕ್ತಿಕ ದ್ವೇಷವನ್ನು ಇಟ್ಟುಕೊಂಡು ಊರಿಗೆ ತೊಂದರೆ ನೀಡುವ ವ್ಯವಸ್ಥೆಯಾಗಿದೆ. ಆದಕಾರಣ ನಾವೆಲ್ಲರೂ ಒಂದಾಗಬೇಕಾಗಿದೆ ಎಂದರು.
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಿ.ಕೆ.ಬೆಳ್ಯಪ್ಪ ಗೌಡ, ಯುವ ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ, ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಕೊಂಬೊಟ್ಟು, ವರ್ತಕರ ಸಂಘದ ಅಧ್ಯಕ್ಷರಾದ ವೆಂಕಟ್ರಮಣ ಕೆಂಬ್ರೋಳಿ, ಊರಿನ ಪ್ರಮುಖರಾದ ಶ್ಯಾಂ ಭಟ್ ಗೊರ್ಗೊಡಿ ಅನಿಸಿಕೆ ವ್ಯಕ್ತಪಡಿದರು. ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಮೂಕಮಲೆ ಧನ್ಯವಾದ ಸಮರ್ಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.