Breaking News

ಪೊಲೀಸ್ ಇಲಾಖೆ ಪರಿಚಯಿಸಿದ “ಗೋಲ್ಡನ್ ಅವರ್” ಸೌಲಭ್ಯ ಬಳಿಸಿದರೆ ಸೈಬರ್ ವಂಚಕರ ಜಾಲದಿಂದ ಕಳೆದುಕೊಂಡ ಹಣವನ್ನು ವಾಪಸು ಪಡೆಯಬಹುದು!

Advt_Headding_Middle

112 ಗೆ ಕರೆ ಮಾಡಿ ಮಾಹಿತಿ ನೀಡಲು ಪೊಲೀಸ್ ಇಲಾಖೆ ಮನವಿ

ಪೊಲೀಸ್ ಇಲಾಖೆ ವರ್ಷದ ಹಿಂದೆ ಪರಿಚಯಿಸಿದ “ಗೋಲ್ಡನ್ ಅವರ್” ಸೌಲಭ್ಯ ಬಳಿಸಿಕೊಂಡು ಸಾವಿರಾರು ಜನರು ಸೈಬರ್ ವಂಚಕ ಜಾಲದಿಂದ ಕಳೆದುಕೊಂಡಿದ್ದ ೪೮ ಕೋಟಿ ರೂ. ಹಣ ಮರಳಿ ವಾಪಸು ಪಡೆದಿದ್ದಾರೆ.
ಸಾಮಾನ್ಯವಾಗಿ ಒಂದು ಖಾತೆಯಿಂದ ಹಣ ವರ್ಗಾವಣೆಯಾದರೆ ಅದನ್ನು ಮರಳಿ ವಾಪಸು ಪಡೆಯಲು ಸಾಧ್ಯವಿಲ್ಲ. ಆದರೆ, ಸೈಬರ್ ವಂಚಕರ ಜಾಲಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಸರ್ಕಾರಿ ಸಾಮ್ಯದ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ಸಂಶಯಾಸ್ಪದ ಟ್ರಾಂಜಕ್ಷನ್ ಒಂದು ತಾಸು ತಡೆ ಹಿಡಿಯಲು ಅವಕಾಶ ಮಾಡಲಾಗಿದೆ. ಅಂದರೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಕರೆ ಮಾಡಿ ಸಂಶಯಾಸ್ಪದ ಬ್ಯಾಂಕ್ ಖಾತೆಯ ಬಗ್ಗೆ ದೂರು ನೀಡಿದ ಕೂಡಲೇ ಆ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗುತ್ತದೆ. ಜಪ್ತಿ ಮಾಡಬೇಕಾದರೆ ದೂರುದಾರರು ೧೧೨ ಗೆ ಕರೆ ಮಾಡಿ ವಿವರ ನೀಡಿರಬೇಕು. ಆನಂತರ ಸಂಬಂಧಪಟ್ಟ ಪೊಲಿಸ್ ಠಾಣೆಗೆ ದೂರು ಸಲ್ಲಿಸಬೇಕು. ಒಂದು ವೇಳೆ ಹಣ ಕಳೆದುಕೊಂಡು ಒಂದು ತಾಸಿನ ನಂತರ ದೂರು ಸಲ್ಲಿಸಿದರೆ, ಅಷ್ಟರಲ್ಲಿ ವಂಚಕರ ಜಾಲದ ಖಾತೆಗೆ ವರ್ಗಾವಣೆಯಾದ ಹಣವನ್ನು ಡ್ರಾ ಮಾಡಿರುತ್ತಾರೆ. ಹೀಗಾಗಿ ಆ ಹಣ ವಾಪಸು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ನೀವು ಸೈಬರ್ ವಂಚಕರ ಜಾಲದಿಂದ ಹಣ ಕಳೆದುಕೊಂಡ ತಕ್ಷಣ 112 ಗೆ ಕರೆ ಮಾಡಿ ಹಣವನ್ನು ವಾಪಸು ಪಡೆಯುವ ಗೋಲ್ಡನ್ ಅವರ್ ಸೌಲಭ್ಯ ಪಡೆಯಬಹುದು. ತಡವಾದರೆ ಹಣ ವಾಪಸು ಬರುವುದು ಅನುಮಾನ.

 

ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಇಲಾಖೆಗೆ ತಂತ್ರಜ್ಞಾನ ಅಭಿವೃದ್ಧಿ ಪಡಿಸುವಲ್ಲಿ ನಿಪುಣತೆಯುಳ್ಳವರು. ಸಂಚಾರ ವಿಭಾಗದ ಪೊಲೀಸ್ ಆಯುಕ್ತರಾಗಿದ್ದಾಗಲೂ ತಂತ್ರಜ್ಞಾನವನ್ನು ಅತಿ ಜಾಣ್ಮೆಯಿಂದ ಬಳಿಸಿಕೊಂಡು ಸಂಚಾರ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಿದ್ದರು. ಆನ್‌ಲೈನ್ ಪೋಗ್ರಾಮಿಂಗ್ ಅಭಿವೃದ್ಧಿ ಪಡಿಸಿ ‘ಗೋಲ್ಡನ್ ಅವರ್ ‘ ಮೂಲಕ ಸೈಬರ್ ವಂಚಕರಿಂದ ಕಳೆದುಕೊಳ್ಳುವ ಹಣವನ್ನು ರಕ್ಷಣೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಚಯಿಸಿದ್ದಾರೆ. ಇದನ್ನು ಹಂತಹಂತವಾಗಿ ರಾಜ್ಯದೆಲ್ಲೆಡೆ ವಿಸ್ತರಣೆ ಮಾಡಲು ಚಿಂತನೆ ನಡೆಸಿದ್ದಾರೆ. ಸಾಮಾನ್ಯ ಅಪರಾಧಗಳಿಗೆ ಹೋಲಿಸಿದರೆ, ಸೈಬರ್ ಅಪರಾಧ ಕೃತ್ಯಗಳು ವಂಚನೆಗಳು ಹೆಜ್ಜಾಗುತ್ತಿವೆ. ಈ ವಂಚಕ ಜಾಲದಿಂದ ಕಳೆದುಕೊಂಡ ಹಣ ಪಡೆಯಲು ರೂಪಿಸಿರುವ ಗೋಲ್ಡನ್ ಅವರ್ ಯೋಜನೆ ಡಿಜಿಪಿ ಪ್ರವೀಣ್ ಸೂದ್ ಅವರ ಕನಸಿನ ಕೂಸಾಗಿದೆ.

ಇಂದು ಆನ್ ಲೈನ್, ನೆಟ್ ಬ್ಯಾಂಕಿಂಗ್ ಜತೆಗೆ ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಜನರು ಜಾಸ್ತಿ ಬಳಕೆ ಮಾಡುತ್ತಿದ್ದಾರೆ. ಇದನ್ನೇ ಬಳಸಿಕೊಂಡು ಸೈಬರ್ ವಂಚಕರು ಕೂಡ ಮೋಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ಜಾಸ್ತಿ ಬೆಳಕಿಗೆ ಬರುತ್ತಿದ್ದವು. ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆನ್‌ಲೈನ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದೇವೆ. ಯಾರೇ ಆಗಲಿ ಆನ್‌ಲೈನ್‌ನಲ್ಲಿ ಹಣ ಕಳೆದುಕೊಂಡರೆ ಒಂದು ತಾಸಿನ ಒಳಗೆ 112 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ತಕ್ಷಣ ಆ ಹಣವನ್ನು ಉಳಿಸುವ ಪ್ರಯತ್ನ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಕಾರ್ಯ ಪ್ರವೃತ್ತವಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಕಂಟ್ರೋಲ್ ರೂಮ್ ಸೌಲಭ್ಯ ಮಾಡಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.