ಲಯನ್ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಜಯರಾಂ ದೇರಪ್ಪಜ್ಜನಮನೆ ಪದಗ್ರಹಣ

Advt_Headding_Middle

 

ನಾಲ್ಕು ಕಂದಾಯ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡಗಳ ವ್ಯಾಪ್ತಿಯನ್ನೊಳಗೊಂಡ ಲಯನ್ ಜಿಲ್ಲೆ 317-ಡಿ ಯ 2021-22ನೇ ಸಾಲಿನ ಸಂಪುಟ ಸದಸ್ಯರ ಪದಗ್ರಹಣ ಸಮಾರಂಭವು ಬಂಟ್ವಾಳದ ಬಂಟರ ಭವನದಲಿ ಜಿಲ್ಲಾ ರಾಜ್ಯಪಾಲ ವಸಂತಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಆ. 29 ರಂದು ಜರಗಿತು.

ಲಯನ್ ಜಿಲ್ಲೆಯ ಪ್ರಥಮ ಮಹಿಳೆ ಡಾ ದಿವ್ಯಾ ವಸಂತ್ ಶೆಟ್ಟಿಯವರು ಉದ್ಘಾಟಿಸಿ ಶುಭಹಾರೈಸಿದರು.
ಜಿಲ್ಲಾ ರಾಜ್ಯಪಾಲ ವಸಂತಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಂತರರಾಷ್ಟ್ರೀಯ ಲಯನ್ಸ್ ಒಕ್ಕೂಟದ ನಿರ್ದೇಶಕರಾದ ವಂಶೀಧರ್ ಬಾಬುರವರು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಜಯರಾಂ ದೇರಪ್ಪಜ್ಜನಮನೆ ಸೇರಿದಂತೆ ಮೈಕ್ರೋ ಕ್ಯಾಬಿನೆಟ್ ಸದಸ್ಯರು, ಕೋರ್ ಕಮಿಟಿ ಸದಸ್ಯರು, ಎಲ್ಲಾ ಜಿಲ್ಲಾ ಸಂಯೋಜಕರು, ಚೆಯರ್‌ಪರ್ಸನ್ಸ್ ಹಾಗೂ ಜಿಲ್ಲಾ ಲಿಯೋ ತಂಡದ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋಧಿಸಿದರು.


ಮಾಜಿ ಅಂತರರಾಷ್ಟ್ರೀಯ ಲಯನ್ಸ್ ನಿರ್ದೇಶಕ ವಿ ವಿ ಕೃಷ್ಣಾ ರೆಡ್ಡಿ, ಮಲ್ಟಿಪಲ್ ಜಿಲ್ಲೆ ಮುಖ್ಯಸ್ಥ ಸಿ ವಿ ಭಾನುಮೂರ್ತಿ ರೆಡ್ಡಿರವರು ಗೌರವ ಉಪಸ್ಥಿತರಿದ್ದು ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಆಯೋಜನಾ ಸಮಿತಿ ಆಧ್ಯಕ್ಷ ಮೋಹನ್‌ದಾಸ್ ಕಿಲ್ಲೆ ಸ್ವಾಗತಿಸಿ, ಅನಿಲಕುಮಾರ್ ಧನ್ಯವಾದವಿತ್ತರು.
ಖ್ಯಾತ ಟಿ ವಿ ನಿರೂಪಕಿ ಸೌಜನ್ಯ ಹೆಗ್ಡೆ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಲಯನ್ಸ್ ಕ್ಲಬ್‌ನಿಂದ ಅಧ್ಯಕ್ಷ ಆನಂದಪೂಜಾರಿಯವರ ನೇತೃತ್ವದಲ್ಲಿ ಮಾಜಿ ಉಪರಾಜ್ಯಪಾಲ ಎಂ ಬಿ ಸದಾಶಿವರ ಸಹಿತ ಒಟ್ಟು 19 ಮಂದಿ ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.