Breaking News

ಪೆರುವಾಜೆ : ಭಾವೈಕ್ಯ ಯುವಕ ಮಂಡಲದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Advt_Headding_Middle

 

 

ಭಾವೈಕ್ಯ ಯುವಕ ಮಂಡಲ ಪೆರುವಾಜೆ ಇದರ ವತಿಯಿಂದ ” ಶ್ರೀ ಕೃಷ್ಣಜನ್ಮಾಷ್ಟಮಿ” ಕಾರ್ಯಕ್ರಮ ಆ.29 ರಂದು ಪೆರುವಾಜೆಯ ಯುವಕ ಮಂಡಲದ ವೇದಿಕೆಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.
ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಕೆಲವು ಸ್ಪರ್ಧೆಯನ್ನು ಆನ್‌ಲೈನ್ ಮುಖಾಂತರ ನಡೆಸಲಾಯಿತು . ಕಾರ್ಯಕ್ರಮವನ್ನು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಯೋಧರಾದ ಕ್ಯಾ| ಸುದನಾಂದ ಮಣಿಯಾನಿ , ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಹಾಗೂ ಯುವಕ ಮಂಡಲದ ಗೌರವಧ್ಯಕ್ಷರಾದ ಜಯಪ್ರಕಾಶ್ ರೈ ಪೆರುವಾಜೆ ಮತ್ತು ಯುವಕ ಮಂಡಲದ ಅಧ್ಯಕ್ಷರಾದ ವಾಸುದೇವ ಪೆರುವಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಜನೀಶ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು, ರಕ್ಷಿತ್ ಪೆರುವಾಜೆ ಸ್ವಾಗತಿಸಿ, ಸನತ್ ಪೆರುವಾಜೆ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಯುವಕ ಮಂಡಲದ ಪದಾಧಿಕಾರಿಗಳು ,ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.