ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಶೇ.100 ಫಲಿತಾಂಶ

Advt_Headding_Middle

ಭಾರತ್ ಸೇವಕ್ ಸಮಾಜದ ವತಿಯಿಂದ ಸುಳ್ಯ ಮತ್ತು ಬೆಳ್ಳಾರೆಯಲ್ಲಿ ನಡೆಸಲ್ಪಡುತ್ತಿರುವ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ 2020-21 ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ (ಡಿಎಂಇಡಿ)ಯ ಫಲಿತಾಂಶ ಪ್ರಕಟಗೊಂಡಿದ್ದು, ನಾಲ್ಕನೇ ವರ್ಷದ ಬ್ಯಾಚ್‌ನ ಎಲ್ಲಾ 15 ವಿದ್ಯಾರ್ಥಿ ಶಿಕ್ಷಕಿಯರು ಉತ್ತೀರ್ಣರಾಗುವ ಮೂಲಕ ಶೇ.1೦೦ ಫಲಿತಾಂಶ ದಾಖಲಾಗಿದೆ. ೮ ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 7 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
2020-21 ನೇ ಸಾಲಿನಲ್ಲಿ 15 ವಿದ್ಯಾರ್ಥಿಗಳು ಮೊಂಟೆಸ್ಸರಿ ಶಾಲಾ ಶಿಕ್ಷಕಿಯರ ತರಬೇತಿಯ ಪರೀಕ್ಷೆ ಬರೆದಿದ್ದರು. ಹರ್ಷಿತಾ ಪಿ. ಆರ್ (1085), ಧನ್ಯಶ್ರೀ ಬಿ.ಎಂ (1067), ಪೃಥ್ವಿ ಯು.ಆರ್(1083), ಸ್ವಾತಿ ಕೆ .ಜೆ(1027), ಶರಣ್ಯ ಕೆ (1021), ಆಶ್ವಿನಿ ಪಿ (990), ನಿರ್ಮಲಾ ವಿ(982), ಶಾಂತಿ ಡಿ’ಸೋಜ ಬಿ(೯೭೪)ಅಂಕಗಳೋಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಚನಾ ಸಿವಿ, ಡೈಲನ್ ಜ್ಯೋತಿ, ವಿದ್ಯಾ ಎ.ಜಿ, ಮೇರಿ ಡಿ’ಸೋಜ ಎನ್, ಸಿಂಚನಾ ಸಿ.ವಿ, ರಮ್ಯಾ ಕೆ.ಪಿ, ಮೀನಾಕ್ಷಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸತತ ನಾಲ್ಕು ವರ್ಷಗಳಿಂದ ಸಂಸ್ಥೆಯು ಶೇ.1೦೦ ಫಲಿತಾಂಶ ದಾಖಲಿಸಿದೆ. ಸಂಸ್ಥೆಯಲ್ಲಿ 2021-22 ನೇ ಸಾಲಿನ ನರ್ಸರಿ ಶಿಕ್ಷಕಿಯರ ತರಬೇತಿಯ ಪ್ರವೇಶಾತಿ ಹಾಗೂ ಆನ್‌ಲೈನ್/ಆಫ್‌ಲೈನ್ ತರಗತಿಗಳು ಆರಂಭಗೊಂಡಿದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.