ಬೊಳುಬೈಲು ನವಚೇತನ ಯುವಕ ಮಂಡಲ ವತಿಯಿಂದ ೨೭ ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ

Advt_Headding_Middle

ನವಚೇತನ ಯುವಕ ಮಂಡಲ ಬೊಳುಬೈಲು ಇದರ ವತಿಯಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಕೆ. ವಿ. ಜಿ. ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ |ಮನೋಜ್ ಅಡ್ಡಂತಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಧಾರ್ಮಿಕ ಪ್ರವಚನ ನೀಡಿದರು.


. ಜಾಲ್ಸುರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಂ.ಬಾಬು ಶುಭಹಾರೈಸಿ ಯುವಕ ಮಂಡಲದ ನೂತನ ಯೋಜನೆ ಸ್ಥಳೀಯ ಶಾಲಾ ಅತಿಥಿ ಶಿಕ್ಷಕರಿಗೆ ಮಾಸಿಕ ಸಾವಿರ ರೂಪಾಯಿ ಗೌರವಧನ ನೀಡುವ ಅಕ್ಷರ ಬೀಜ ಯೋಜನೆಗೆ ಚಾಲನೆ ನೀಡಿದರು.
ಈ ಸಂದರ್ಭ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕರಾದ ಶ್ರೀಮತಿ ಕೋಮಲರಿಗೆ ಗೌರವರ್ಪಣೆ ಮಾಡಲಾಯಿತು. ಪದ್ಮನಾಭ ನೆಕ್ರಾಜೆ ಅಭಿನಂದನಾ ಪತ್ರವನ್ನು ವಾಚಿಸಿದರು. ಯುವಕ ಮಂಡಲ ಅಧ್ಯಕ್ಷರಾದ ಸುಧೀರ್ ನೆಕ್ರಾಜೆ ಸಭಾಧ್ಯಕ್ಷತೆ ವಹಿಸಿದ್ದರು. ಜಯಂತ್ ಕುಂಬರ್ಚೋಡು ಸ್ವಾಗತಿಸಿ, ಪ್ರಸಾದ್ ಕಾಟೂರು ವಂದಿಸಿದರು. ಹೇಮಕರ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.