Breaking News

ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ

Advt_Headding_Middle

 

ಪಂಜ ಲಯನ್ಸ್ ಕ್ಲಬ್ ಇದರ ಆಶ್ರಯದಲ್ಲಿ ವನಮಹೋತ್ಸವ ಪ್ರಯುಕ್ತ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ಮತ್ತು ಶಾಲೆಗೆ ಗಿಡಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಆಗಸ್ಟ್ 30 ರಂದು ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಜಾಕೆ ವಹಿಸಿದ್ದರು ಮುಖ್ಯಅತಿಥಿಯಾಗಿ ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ್ ರವರು ಭಾಗವಹಿಸಿ ಗಿಡನೆಟ್ಟು ಪೋಷಣೆ ಅತ್ಯಗತ್ಯ ಪ್ರಕೃತಿಯಲ್ಲಿ ಗಿಡ ಮರಗಳಿದ್ದರೆ ಗಾಳಿ ಇರುತ್ತದೆ ಗಾಳಿ ಇದ್ದರೆ ನಾವು ಇರುತ್ತೇವೆ. ನಾವೆಲ್ಲ ಗಿಡಗಳ ಪೋಷಣೆ ಮಾಡಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕಿ ಶೀತಲ್ ಯು.ಕೆ.ಯವರಿಗೆ ಮತ್ತು ಶಾಲಾ ಕಾರ್ಯಾಧ್ಯಕ್ಷ ರಘುನಾಥ ಶೆಟ್ಟಿಯವರಿಗೆ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಜಾಕೆ ಹಣ್ಣಿನ ಗಿಡಗಳನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವಾಧ್ಯಕ್ಷ ಕುಮಾರಸ್ವಾಮಿಯವರು ಲಯನ್ಸ್ ಪ್ರಾರ್ಥನೆ ಮಾಡಿದ ಬಳಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂತೋಷ್ ಜಾಕೆಯವರು ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು. ಕ್ಲಬ್ ನಲ್ಲಿ 27ಸದಸ್ಯರಿದ್ದು 27 ಗಿಡಗಳನ್ನು ನೀಡಲಾಯಿತು. ಖಜಾಂಜಿ ಬಾಲಿಶ ಪಳಂಗಾಯ ವೇದಿಕೆಯಲ್ಲಿದ್ದರು. ಮಾಜಿ ಅಧ್ಯಕ್ಷ ಸುರೇಶ್ ನಡ್ಕ ವೇದಿಕೆಗೆ ಅತಿಥಿಗಳನ್ನು ಬರಮಾಡಿಕೊಂಡರು. .
ಬಳಿಕ ಸ್ಥಳೀಯವರಾದ ಸಂಕಪ್ಪ ಸಾಲಿಯಾನ್ ಅವರಿಗೆ ಸುಚಿನ್ನ ಕಾಣಿಕೆಯವರು ಗಿಡ ನೀಡಿದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಜಾಕೆ ಮಾಧವ ಗೌಡ, ಶ್ರೇಯಾಂಸ್ ಕುಮಾರ್, ತುಕರಾಂ ಏನೆಕಲ್, ಬಾಲಕೃಷ್ಣಗೌಡ ಮೂಲೆಮನೆ, ಪುರುಷೋತ್ತಮ ದಂಬೆಕೋಡಿ, ಶಾಲಾ ಎಸ್ ಡಿಎಂಸಿ ಸದಸ್ಯ ಪದ್ಮನಾಭ ಪೂದೆ, ಶಿಕ್ಷಕರಾದ ರಾಮಚಂದ್ರ ಗೌಡ ಪಿ.ಎನ್., ಶ್ರೀಮತಿ ದಿವ್ಯಾ ಎಂ.ಕೆ., ಶ್ರೀಮತಿ ಸಾವಿತ್ರಿ ಕೆ., ಶ್ರೀಮತಿ ರಮ್ಯಾ ಕೆ., ಶ್ರೀಮತಿ ಉಷಾ ಕೆ. ಎಸ್., ಲಿಂಗಪ್ಪ ಬೆಳ್ಳಾರೆ, ಸುಮಿತ್ರ ಕೆ. ಹಾಗೂ ಅಡುಗೆ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂತೋಷ್ ಜಾಕೆ ಸ್ವಾಗತಿಸಿ, ಡ್ರಾಯಿಂಗ್ ಮಾಸ್ಟರ್ ಮೋಹನ ಗೌಡ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.