Breaking News

ದರ್ಖಾಸ್ತು : ಬೆಳ್ಳಾರೆ ಸೇವಾ ಭಾರತಿ ವತಿಯಿಂದ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

Advt_Headding_Middle

 

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸೇವಾಭಾರತಿ ಬೆಳ್ಳಾರೆ ವತಿಯಿಂದ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವು ಆ.29 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಖಾಸಿನಲ್ಲಿ ನಡೆಯಿತು.
ಶಿಬಿರವನ್ನುದ್ದೇಶಿಸಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಎಸ್. ಅಂಗಾರವರು ಮಾತನಾಡಿ ಪ್ರತಿಯೊಬ್ಬರಿಗೂ ಕಣ್ಣಿನ ಚಿಕಿತ್ಸೆ ಬಹಳ ಅಮೂಲ್ಯ ಎಲ್ಲಾ ವರ್ಗದವರಿಗೂ ಈ ಅವಕಾಶ ದೊರೆಯುವಂತಾಗಲಿ ಎಂದು ಹೇಳಿದರು.
ಈ ವ್ಯವಸ್ಥೆಯನ್ನು ಬೆಳ್ಳಾರೆ ಸೇವಾಭಾರತಿ,ಗ್ರಾಂ ಪಂ ಬೆಳ್ಳಾರೆ,ಸರಕಾರಿ ಆಸ್ಪತ್ರೆ ಬೆಳ್ಳಾರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಚಿಕಿತ್ಸೆ ಮಂಗಳೂರು ನಡೆಸಿ ಕೊಟ್ಟಿದ್ದಾರೆ.
ಶಿಬಿರದಲ್ಲಿ 203 ಜನ ಸಾರ್ವಜನಿಕರು ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. 110 ಜನರಿಗೆ ಕಣ್ಣಿನ ಕನ್ನಡಕದ ಅವಶ್ಯಕತೆ ಇತ್ತು.
22 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇತ್ತು.

ಸಚಿವರಿಗೆ ಸನ್ಮಾನ

ಈ ಕಾರ್ಯಕ್ರಮದಲ್ಲಿ
ಸಚಿವ ಎಸ್.ಅಂಗಾರರವನ್ನು ದರ್ಖಾಸ್ತು ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಮತ್ತು ದರ್ಖಾಸ್ತು ಶಾಲೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಪನ್ನೆ, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಲ್ಲವಿ, ಮುತ್ತು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ನಟರಾಜ್ ,ಎಸ್ ಡಿಎಂಸಿ ಅಧ್ಯಕ್ಷ ಹರೀಶ್ ,ಗ್ರಾಮ ಸ್ವರಾಜ್ಯ ತಂಡದ ಪ್ರಮುಖರಾದ ಆರ್.ಕೆ.ಭಟ್ ಕುರುಂಬುಡೇಲು,ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸೇವಾಭಾರತಿ ಸದಸ್ಯರಾದ ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ ಬೆಳ್ಳಾರೆ, ಶ್ರೀಮತಿ ಗೀತಾ ಪ್ರೇಮ್, ಶಾರದಾ ,ಜಗನ್ನಾಥ ಚೀಮುಳ್ಳು , ವೀರನಾಥ, ಪಂಚಾಯತ್ ಸದಸ್ಯೆ ಭವ್ಯ, ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ನೆಟ್ಟಾರು,ಶ್ರೀನಾಥ್ ಬಾಳಿಲ,ಭಾಗ್ಯರಾಜ್ ದರ್ಕಾಸ್, ಗಣಪ ದರ್ಕಾಸು,ಶಿವ ಸೂರ್ಯ ದರ್ಕಾಸು, ಸುಶಾಂತ್ ದರ್ಕಾಸು,ಮುತ್ತು ಮಾರಿಯಮ್ಮ ದೇವಸ್ಥಾನದ ಸದಸ್ಯರು ಉಪಸ್ಥಿತರಿದ್ದರು. ಕನ್ನದಾಸ್ ಸ್ವಾಗತಿಸಿ, ನಟರಾಜ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.