Breaking News

ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ರೈ ಬಿರ್ಕಿ, ಕೇನ್ಯ ನಿವೃತ್ತಿ

Advt_Headding_Middle


ಕಡಬ ತಾಲೂಕಿನ ಕೋಡಿಂಬಾಳ ಬಳಿಯ ಓಂತ್ರಡ್ಕ ಸ.ಉ.ಹಿ.ಪ್ರಾ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ರೈ ಬಿರ್ಕಿ, ಕೇನ್ಯ ಇವರು ಆ. 31 ನಿವೃತ್ತಿ ಹೊಂದಲಿದ್ದಾರೆ.
ಕಡಬ ತಾಲೂಕಿನ ಕೇನ್ಯ ಗ್ರಾಮದ ಬಿರ್ಕಿ ಎಂಬಲ್ಲಿಯ ಕುದ್ರಿಯಗುತ್ತು ಭಂಡಾರಿ ರೈ ಮತ್ತು ಮುನಿಯೂರುಗುತ್ತು ಶ್ರೀಮತಿ ಸೀತಮ್ಮ ರೈಯವರ ಮಗನಾಗಿ 1961 ಆ. 27ರಂದು ಜನಿಸಿದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ.ಹಿ.ಪ್ರಾ. ಶಾಲೆ ಕೇನ್ಯದಲ್ಲಿ ಮತ್ತು ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು ಪಂಜದಲ್ಲಿ ಪೂರೈಸಿದ ಬಳಿಕ ದೈಹಿಕ ಶಿಕ್ಷಣ ತರಬೇತಿಯನ್ನು ಮೂಡಬಿದಿರೆಯ ಎಂ.ಕೆ. ಅನಂತ ರಾವ್ ದೈಹಿಕ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಪಡೆದು ರ್ಯಾಂಕ್ ನೊಂದಿಗೆ ಉತ್ತೀರ್ಣರಾದರು.
1984ರಲ್ಲಿ ಕಾರ್ಕಳ ತಾಲೂಕಿನ ನೆಲ್ಲಿಕಾರು ಸ.ಹಿ.ಪ್ರಾ. ಶಾಲೆಯಲ್ಲಿ ನೇರ ನೇಮಕಾತಿ ಮೂಲಕ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸರಕಾರಿ ಸೇವೆಗೆ ನಿಯೋಜನೆಗೊಂಡರು. ಬಳಿಕ 1998 ರಲ್ಲಿ ಕೆಯ್ಯೂರು ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡು ನಂತರ 2006ರಲ್ಲಿ ಕೋಡಿಂಬಾಳದ ಓಂತ್ರಡ್ಕ ಸ.ಉ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡು ಸುಮಾರು 27 ವರ್ಷಗಳ ಸರಕಾರಿ ಸೇವೆಯಿಂದ ಆ. 31ರಂದು ನಿವೃತ್ತಿ ಹೊಂದಲಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಶಾಲೆಯಿಂದ ತರಬೇತಿ ನೀಡಿದ ಅಥ್ಲೆಟಿಕ್, ವಾಲಿಬಾಲ್ ಮತ್ತು ಕಬಡ್ಡಿ ತಂಡಗಳು ರಾಷ್ಟ ಮಟ್ಟದಲ್ಲಿ ಸಾಧನೆ ಮಾಡಿರುತ್ತಾರೆ. ಕಬಡ್ಡಿ ಮತ್ತು ವಾಲಿಬಾಲ್ ಕ್ರೀಡೆಗಳ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ರಾಷ್ಟ್ರ ಮಟ್ಟದ ಅಥ್ಲೆಟಿಕ್ ನಲ್ಲಿ ಎರಡು ಬಾರಿ ಎತ್ತರ ಜಿಗಿತ ಮತ್ತು ಈಟಿ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದಲ್ಲದೆ ತಮ್ಮ ಶಾಲಾ ದಿನಗಳಲ್ಲಿ ಕಬಡ್ಡಿ, ವಾಲಿಬಾಲ್, ಕ್ರಾಸ್ ಕಂಟ್ರಿ ಓಟಗಾರರಾಗಿ ಅಥ್ಲೆಟಿಕ್ಸ್‌ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಕರಾಟೆಯಲ್ಲಿ 1990ಎಲ್ಲಿ ಗ್ರೀನ್ ಬೆಲ್ಟ್ ಮಾಸ್ಟರ್ ಗ್ರೇಡ್ ಪಡೆದಿದ್ದ ಇವರಿಗೆ ಸಿ.ಪಿ.ಎಡ್ ಪದವಿಯಲ್ಲಿ ಯೋಗ್ಯತಾವ್ಯಕ್ತಿ ಪ್ರಶಸ್ತಿ, 2012ರಲ್ಲಿ ಪುತ್ತೂರು ತಾಲೂಕಿನ ರಂಗ ಸ್ಪರ್ಶದಿಂದ ಉತ್ತಮ ಶಿಕ್ಷಕ ಪ್ರಶಸ್ತಿ, ಬಳ್ಪ ಗ್ರಾಮ ವಿಕಾಸ ಪ್ರತಿಷ್ಠಾನದಿಂದ ಆಯೋಜಿಸಿದ್ದ ಗ್ರಾಮೋತ್ಸವದಲ್ಲಿ ಸನ್ಮಾನ ಸೇರಿದಂತೆ ವಿವಿಧ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಕೃಷಿ ಕ್ಷೇತ್ರದಲ್ಲೂ ಪ್ರಗತಿಪರ ಕೃಷಿಕರಾಗಿ, ಹೈನುಗಾರಿಕೆ, ತರಕಾರಿ ಕೃಷಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೆ ಶಾಲೆಯಲ್ಲಿ ತರಕಾರಿ ತೋಟವನ್ನು ನಿರ್ಮಿಸಿ ಇಲಾಖೆ ಹಾಗೂ ಊರವರ ಪ್ರಶಂಸೆಗೆ ಪಾತ್ರಾರಾಗಿರುವ ಇವರು ಬಳ್ಪ ಗ್ರಾಮದ ಕುಂಜತ್ತಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, 2018ರಲ್ಲಿ ಪುತ್ತೂರು ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ದುರ್ಗಾಸೇವಾ ಸಂಘ -ಕೇನ್ಯ ಇದರ ಸದಸ್ಯರಾಗಿದ್ದಾರೆ. ಇವರ ಪತ್ನಿ ಶ್ರೀಮತಿ ತಾರಾ ಬಿ. ರೈಯವರು ಬಳ್ಪ ಗ್ರಾ.ಪಂ.ನ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುತ್ತಾರೆ. ಪುತ್ರಿ ಕು. ಶಮ್ಯಾ ಬಿ. ರೈ ಅಗ್ರಿಕಲ್ಚರ್ ಬಿ.ಎಸ್.ಸಿ. ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.