ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರಾಜೀವಿ ಎಂ. ಸ್ವಯಂ ನಿವೃತ್ತಿ

Advt_Headding_Middle

ಅಮರಪಡ್ನೂರು ಗ್ರಾಮದ ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರಾಜೀವಿ ಎಂ.ರವರು ಆ.‌ 31ರಂದು ಸ್ವಯಂ ನಿವೃತ್ತಿ ಪಡೆದರು. 1985ರಿಂದ ನಿವೃತ್ತಿಯ. ತನಕ ಸುಮಾರು 36 ವರ್ಷಗಳ ಕಾಲ ಇವರು ಒಂದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವುದು ಇವರ ವಿಶೇಷತೆಯಾಗಿದೆ.
ಬಾಳಿಲ ಗ್ರಾಮದ ಮೊರೆಂಗಲ ಉಕ್ಕಣ್ಣ ಗೌಡ ಮತ್ತು ತಿಮ್ಮಕ್ಕ ದಂಪತಿಯ ಪುತ್ರಿಯಾಗಿ 1962ರ ಜು. 22ರಂದು ಜನಿಸಿದ ಶ್ರೀಮತಿ ರಾಜೀವಿ ಎಂ.ರವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಪೂರೈಸಿ ಸಿ.ಪಿ.ಎಡ್.ತರಬೇತಿಯನ್ನು ಬೆಂಗಳೂರಿನ ವೈ.ಎಂ.ಸಿ.ಎ. ತರಬೇತಿ ಕೇಂದ್ರದಲ್ಲಿ ಪಡೆದು 1985ರ ಸೆಪ್ಟೆಂಬರ್ 13ರಂದು ಸ.ಹಿ.ಪ್ರಾ.ಶಾಲೆ ಕುಕ್ಕುಜಡ್ಕದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸರಕಾರಿ ಸೇವೆಗೆ ಸೇರ್ಪಡೆಗೊಂಡರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ತ್ರೋಬಾಲ್, ವಾಲಿಬಾಲ್ ಬ್ಯಾಡ್ಮಿಂಟನ್, ಚಕ್ರೆಎಸೆತ, ಗುಂಡೆಸೆತ‌ ಮೊದಲಾದ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದ ಇವರು ಶಿಕ್ಷಕಿಯಾಗಿಯೂ ಬ್ಯಾಡ್ಮಿಂಟನ್, ವಾಲಿಬಾಲ್, ತಂಡಗಳನ್ನು ಹಾಗೂ ಗುಂಡೆಸತ, ಚಕ್ರೆಎಸೆತಗಳಲ್ಲಿ ತಮ್ಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಸ್ಥಾನ ಪಡೆಯುವಲ್ಲಿ ಶ್ರಮಿಸಿದ್ದರು. ಇವರ ಪುತ್ರಿ ಡಾ. ಚೈತ್ರಾ ಮಡಪ್ಪಾಡಿ ಚಕ್ರ ಎಸೆತದಲ್ಲಿ ಎರಡು ಬಾರಿ ರಾಷ್ಟಮಟ್ಟದಲ್ಲಿ ಭಾಗವಹಿಸಿರುತ್ತಾರೆ. ಪುತ್ರ ಚೇತನ್ ಮಡಪ್ಪಾಡಿ ಕೃಷಿಯಲ್ಲಿ ತೊಡಗಿಕೊಂಡರೆ,
ಸೊಸೆ ಶ್ವೇತಾ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಅಳಿಯ ಅವಿನಾಶ್ ಕುರುಂಜಿ ಕೃಷಿಕರಾಗಿದ್ದಾರೆ.
ಪತಿ ಶಿವರಾಮ ಮಡಪ್ಪಾಡಿ ಬಿ.ಎಸ್.ಎನ್.ಎಲ್.ನಲ್ಲಿ ಕಿರಿಯ ಅಭಿಯಂತರರಾಗಿ ನಿವೃತ್ತಿ ಹೊಂದಿರುತ್ತಾರೆ. ಇವರಿಗೆ ವಾಗ್ಮಿ ಮಡಪ್ಪಾಡಿ, ಹೃತ್ವಿ ಮಡಪ್ಪಾಡಿ ಎಂಬ ಇಬ್ಬರು ಮೊಮ್ಮಕ್ಕಳಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.