ಸುಳ್ಯ : ವೈಟ್ ಬೋರ್ಡ್ ಹೊಂದಿರುವ ವಾಹನಗಳಿಗೆ ದಂಡ

Advt_Headding_Middle

ವೈಟ್ ಬೋರ್ಡ್ ಹೊಂದಿರುವ ವಾಹನ ಮಾಲಕರು ಇನ್ನು ಮುಂದೆ ಬಾಡಿಗೆ ನಡೆಸುವಾಗ ಎಚ್ಚರ ವಹಿಸಬೇಕಾಗಿದೆ. ಯಾಕೆಂದರೆ ಪೊಲೀಸ್ ಇಲಾಖೆಗಳು ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದು, ದಂಡ ವಸೂಲಾತಿ ಮಾಡುತ್ತಿರುವುದಾಗಿ ವರದಿಯಾಗಿದೆ. ಸುಬ್ರಹ್ಮಣ್ಯದಿಂದ ಶೃಂಗೇರಿಗೆ ಬಾಡಿಗೆಗೆ ತೆರಳಿದ ವೈಟ್ ಬೋರ್ಡ್ ನ ವಾಹನವೊಂದಕ್ಕೆ ಅಲ್ಲಿನ ಪೊಲೀಸರು ದಂಡ ಹಾಕಿದದಾಗಿ ತಿಳಿದು ಬಂದಿದೆ.
ಅದೇ ರೀತಿ ಸೆ.12 ರಂದು ಸುಳ್ಯದಲ್ಲೂ ಮಡಿಕೇರಿ ಕಡೆಯಿಂದ ಬಾಡಿಗೆ ನೆಲೆಯಲ್ಲಿ ಬಂದ 4 ವೈಟ್ ಬೋರ್ಡ್ ವಾಹನಗಳ ಮೇಲೆ ದಂಡ ಹಾಕಲಾಗಿದೆ . ಸೆ.೧೪ ರಂದು ಮರ್ಕಂಜದಿಂದ ಬಾಡಿಗೆ ನೆಲೆಯಲ್ಲಿ ಬಂದ ವಾಹನವೊಂದಕ್ಕೆ ಸುಬ್ರಹ್ಮಣ್ಯದಲ್ಲಿ ಆರ್ ಟಿ ಒ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ವೈಟ್ ಬೋರ್ಡ್ ಹೊಂದಿರುವ ವಾಹನ ಅಪಘಾತವಾದರೂ ಅದರಲ್ಲಿ ಇರುವ ಪ್ರಯಾಣಿಕರಿಗೆ ಇನ್ಸೂರೆನ್ಸ್ ಕ್ಲೈಮ್ ಕೂಡ ಸಾಧ್ಯವಾಗುವುದಿಲ್ಲ. ಈ ಬಗ್ಗೆ ವಾಹನಗಳ ಮಾಲಕರು, ಪ್ರಯಾಣಿಕರು ಎಚ್ಚರವಹಿಸಬೇಕಾಗಿದೆ ಎಂದು ಟ್ಯಾಕ್ಸಿ ಯೂನಿಯನ್‌ನವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.