ಸುದ್ದಿ ಆಶಯದ ಮಹಾತ್ಮಾ ಗಾಂಧೀಜಿಯ ಗ್ರಾಮ ಸ್ವರಾಜ್ಯದ ರಾಮ ರಾಜ್ಯದ ಸ್ವಾತಂತ್ರ್ಯ ರಥಕ್ಕೆ ಚಾಲನೆ

Advt_Headding_Middle

ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಅ. 2ರಂದು ಗಾಂಧಿ ಜಯಂತಿಯನ್ನು ವಿಭಿನ್ನವಾಗಿ, ವಿಶೇಷವಾಗಿ ಆಚರಿಸುವ ಹಿನ್ನಲೆಯಲ್ಲಿ ಮಹಾತ್ಮಾಗಾಂಧೀಜಿಯ ಗ್ರಾಮ ಸ್ವರಾಜ್ಯದ ರಥವು ತಾಲೂಕಿನಾದ್ಯಂತ ಸಂಚರಿಸಲಿದ್ದು, ಈ ಗಾಂಧಿ ಜಯಂತಿ ರಥಕ್ಕೆ ಸೆ. 17 ರಂದು ಸುಳ್ಯ ನಗರ ಪಂಚಾಯತ್ ಆವರಣದದಲ್ಲಿ ಚಾಲನೆ ನೀಡಲಾಯಿತು. ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಸೋಮಶೇಖರ್ ಹಾಗೂ ಕಿರಿಯ ನ್ಯಾಯಾಧೀಶರರಾದ ಯಶ್ವಂತ್‌ಕುಮಾರ್‌ರವರು ಸ್ವಾತಂತ್ರ್ಯ ಘೋಷಣೆಯ ಧ್ವನಿಮುದ್ರಿಕೆಗೆ ಚಾಲನೆ ನೀಡಿದರು. ಹಿರಿಯ ಉದ್ಯಮಿ ಕೃಷ್ಣ ಕಾಮತ್‌ರವರು ತೆಂಗಿನಕಾಯಿ ಒಡೆದು ಗಾಂಧಿ ರಥಯಾತ್ರೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ನ.ಪಂ. ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಐಪಿಪಿ ಜನಾರ್ದನ, ಎಚ್‌ಡಿಎಫ್‌ಸಿ ಶಾಖಾಧಿಕಾರಿ ವಿಶ್ವನಾಥ ನಿಡ್ಯಮಲೆ, ಜಿಲ್ಲಾ ಅಂಬೇಡ್ಕರ್ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸುಂದರ ಪಾಟಾಜೆ, ಹರಿರಾಯ ಕಾಮತ್, ನ.ಪಂ. ಸದಸ್ಯ ರಿಯಾಝ್ ಕಟ್ಟೆಕ್ಕಾರ್, ನ.ಪಂ. ನೌಕರರು, ಸುದ್ದಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿದರು. ಸುದ್ದಿ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.