ಹೊಸಹೆಜ್ಜೆಯ ಹೊಸ ಉತ್ಸಾಹದಲ್ಲಿ ರಂಗ ಮಯೂರಿ ಕಲಾಶಾಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಪುನರಾರಂಭ

Advt_Headding_Middle

 

ಸುಳ್ಯದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಸಜ್ಜಾಗಿದೆ. ಎಲ್ಲಾ ಕಲಾಭಿಮಾನಿಗಳು, ಕಲಾಪ್ರತಿಭೆಗಳು ಕಾತುರದಿಂದ ಕಾಯುತ್ತಿದ್ದ ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ತರಗತಿಗಳು ಪ್ರಾರಂಭವಾಗಿದೆ.

ವಿದ್ಯಾರ್ಥಿಗಳಿಗೆ ಅದರಲ್ಲೂ ಆಸಕ್ತ ಪ್ರತಿಭೆಗಳಿಗೆ ಹತ್ತಿರದಲ್ಲೇ ಅವಕಾಶಗಳು ಸಿಗಬೇಕು ಹಾಗೂ ಆ ಅವಕಾಶದಿಂದ ಎಲ್ಲರಿಗೂ ಮುಕ್ತ ವೇದಿಕೆ ತಯಾರಾಗಬೇಕೆಂಬ ನಿಟ್ಟಿನಲ್ಲಿ ಕಲಾಶಾಲೆ ಹೊಸ ಹುರುಪಿನೊಂದಿಗೆ ಎದುರು ನೋಡುತ್ತಿದೆ.

ಒಂದೇ ವೇದಿಕೆಯಲ್ಲಿ ವಿಭಿನ್ನ ಕಲಿಕೆಯ ಜೊತೆಗೆ ಉತ್ತಮ ಮಾರ್ಗದರ್ಶನ, ಆಸಕ್ತಿದಾಯಕ ಕಲಿಕಾ ವಿಧಾನ, ಪೋಷಕರ ಪ್ರೋತ್ಸಾಹದೊಂದಿಗೆ ಹೊಸಹೆಜ್ಜೆಯಿಡುತ್ತಿರುವ ರಂಗಮಯೂರಿ ಕಲಾಶಾಲೆಯಲ್ಲಿ ವಾರಪೂರ್ತಿ ನಡೆಯುವ ತರಗತಿಗಳ ವಿವರ;

ತರಗತಿ ಹಾಗೂ ತರಗತಿ ಸಮಯ ;

ಡಾ. ಕಿರಣ್‍ಕುಮಾರ್ “ಗಾನಸಿರಿ”ರವರಿಂದ “ಸುಗಮ ಸಂಗೀತ” : ಶುಕ್ರವಾರ ಸಂಜೆ,
ಮಹಾಬಲೇಶ್ವರ ಬಿರ್ಮಕಜೆರವರಿಂದ “ಶಾಸ್ತ್ರೀಯ ಸಂಗೀತ” : ಬುಧವಾರ ಸಂಜೆ , ಹಾಗೂ
ಮೈಸೂರಿನ ಪ್ರತಿಷ್ಠಿತ ಸಿಗ್ನೇಚರ್ ಡ್ಯಾನ್ಸ್ ಕಂಪೆನಿಯ ಸಹಯೋಗದಲ್ಲಿ ಇಂಡಿಯನ್ ಹಾಗೂ ಇಂಟರ್‍ನ್ಯಾಷ್‍ನಲ್ ಡ್ಯಾನ್ಸ್ ಸ್ಟೈಲ್ ತರಗತಿ ಪ್ರಾರಂಭವಾಗಿದೆ. ನೃತ್ಯ ನಿರ್ದೇಶನ, ಸಿಗ್ನೇಚರ್ ಡ್ಯಾನ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ವಿನೋದ್ ಕರ್ಕೆರರವರ ನೇತೃತ್ವದಲ್ಲಿ, ರಾಷ್ಟ್ರಮಟ್ಟದ ಹಿಪ್ ಹಾಪ್ ಡ್ಯಾನ್ಸ್ ಚಿನ್ನದ ಪದಕ ವಿಜೇತ ಪೃಥ್ವಿ ನಾಯಕ್ ನಡೆಸಿಕೊಡುತ್ತಾರೆ. ತರಗತಿ ಪ್ರತೀ ಭಾನುವಾರ ಬೆಳಗ್ಗೆ . ಇದರೊಂದಿಗೆ,
ರಂಗಮಯೂರಿ ಕಲಾಶಾಲೆಯಲ್ಲಿ ನಾಟಕ ತರಬೇತಿ, ರಂಗ ಪ್ರಯೋಗ ತರಗತಿ ಗಳುನಡೆಯುತ್ತದೆ.
ಅಂತರಾಷ್ಟ್ರೀಯ ಯೋಗಪಟು, ಯೋಗ ತೀರ್ಪುಗಾರರು, ಯೋಗ ಶಿಕ್ಷಕರು ನವೀನ್‍ಕುಮಾರ್ ಬಿ. ಕೆಯ್ಯೂರುರವರಿಂದ “ಯೋಗಾಭ್ಯಾಸ ಮತ್ತು ಯೋಗ ತರಬೇತಿ” : ಶನಿವಾರ ಮತ್ತು ಭಾನುವಾರ ಬೆಳಗ್ಗೆ 6.30ಗೆ,
ವಾಸುದೇವ ರೈ ಬೆಳ್ಳಾರೆರವರಿಂದ ಯಕ್ಷಗಾನ ತರಗತಿ ,
ಚಂದ್ರಶೇಖರ್ ಕನಕಮಜಲುರವರಿಂದ ಕರಾಟೆ ತರಬೇತಿ,
ಸುಳ್ಯ ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್.. ಪ್ರಸನ್ನ ಐವರ್ನಾಡುರವರ “ಆರ್ಟ್ ಮತ್ತು ಕ್ರಾಪ್ಟ್” ತರಗತಿಯ ಜೊತೆಗೆ
ವಿಶೇಷವಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿ ಗಳು ಶಶಿಕಾಂತ್ ಮಿತ್ತೂರುರವರ ನೇತೃತ್ವದಲ್ಲಿ ನಡೆಯಲಿದೆ.
ಇವೆಲ್ಲದರ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೂ ವಿದ್ಯಾರ್ಥಿಗಳನ್ನು ಸಜ್ಜು ಮಾಡಲಾಗುವುದು. ಸಂಗೀತ ಸುಧೆ, ನೃತ್ಯ ವೈಭವಗಳೊಂದಿಗೆ ಅನೇಕಾನೇಕ ವೇದಿಕೆಗಳನ್ನು ಪ್ರತೀ ಪ್ರತಿಭೆಗೂ ತಲುಪುವಂತೆ ಮಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.