ಸುಣ್ಣಮೂಲೆ: ಕಾರು – ಪಿಕಪ್ ಢಿಕ್ಕಿ ಓರ್ವ ಗಂಭೀರ ಮಂಗಳೂರಿನ ಆಸ್ಪತ್ರೆಗೆ ದಾಖಲು

Advt_Headding_Middle

 

ಸ್ವಿಪ್ಟ್ ಡಿಸೈರ್ ಕಾರು ಹಾಗೂ ಪಿಕಪ್ ಮಧ್ಯೆ ಪರಸ್ಪರ ಢಿಕ್ಕಿ ಸಂಭವಿಸಿದ ಪರಿಣಾಮವಾಗಿ ಕಾರಿನಲ್ಲಿದ್ದ ಓರ್ವ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಸೆ.21ರಂದು ಅಪರಾಹ್ನ ಸಂಭವಿಸಿದೆ.
ಸುಳ್ಯದಿಂದ ಪುತ್ತೂರಿಗೆ ತೆರಳುತ್ತಿದ್ದ ದೊಡ್ಡತೋಟದ ಪದ್ಮನಾಭ ಗೌಡ ಹಾಗೂ ಅವರ ಪುತ್ರ ಶ್ರೇಯಸ್ ಅವರು ಚಲಾಯಿಸುತ್ತಿದ್ದ ಸ್ವಿಪ್ಟ್ ಕಾರಿಗೆ ಮಂಗಳೂರಿನಿಂದ ಮೈಸೂರಿಗೆ ಕೋಳಿಮರಿ ಸಾಗಾಟ ಮಾಡುತ್ತಿದ್ದ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗದಲ್ಲಿ ಕುಳಿತಿದ್ದ ಪದ್ಮನಾಭ ಗೌಡರ ಕಣ್ಣಿನ ಭಾಗ ಹಾಗೂ ತಲೆ ಗಂಭೀರವಾಗಿ ಗಾಯಗೊಂಡರು. ಕಾರು ಚಲಾಯಿಸುತ್ತಿದ್ದ ಶ್ರೇಯಸ್ ಅವರ ಕೈಗೆ ಸಣ್ಣಪುಟ್ಟ ಗಾಯವಾಗಿದ್ದು, ತಕ್ಷಣ ಅವರನ್ನು ಸುಣ್ಣಮೂಲೆಯ ಹಸನ್ ಗೌಸಿಯ ಅವರ ಕಾರಿನಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಪದ್ಮನಾಭ ಗೌಡರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಸಣ್ಣಪುಟ್ಟ ಗಾಯಗೊಂಡಿದ್ದ ಶ್ರೇಯಸ್ ಅವರು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆಂದು ತಿಳಿದುಬಂದಿದೆ.
ಅಪಘಾತ ನಡೆದ ಸಂದರ್ಭದಲ್ಲಿ ಸುಣ್ಣಮೂಲೆಯ ಹಸನ್ ಗೌಸಿಯಾ, ರಫೀಕ್, ಯಹಿಯಾ, ಶಾಕೀರ್ ಕಂಚಿಲ್ಪಾಡಿ, ಸಹದ್, ಕುಟ್ಟಿಆಲಿ, ಅಬ್ದುಲ್ಲ, ಮಹಮ್ಮದ್ ಸೇರಿದಂತೆ ಸ್ಥಳೀಯರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು ಎಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.