ಜಯನಗರ : ಆಡುಗಳ ವಿಷಯದಲ್ಲಿ ಹೊಡೆದಾಟ

Advt_Headding_Middle

 

 

ಆಟೋ ಜಖಂ

ಜಯನಗರ ಆಟೋ ಚಾಲಕ ಹನೀಫ್ ಎಂಬವರ ಮನೆಯ ಆಡುಗಳು ಸ್ಥಳೀಯ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಸುತ್ತಾಡಿಕೊಂಡು ಇರುತ್ತಿದ್ದವು. ಇಂದು ಮಧ್ಯಾಹ್ನ ಆಡುಗಳು ಜಯನಗರ ನಿವಾಸಿ ಇಬ್ರಾಹಿಂ ಎಂಬವರ ಮನೆಯ ಅಂಗಳದಲ್ಲಿ ಕಂಡುಬಂದಿದ್ದು ತನ್ನ ಮನೆಯ ಸುತ್ತಮುತ್ತಲಿನ ಗಿಡಗಳನ್ನು ತಿಂದಿವೆ ಎಂದು ಇಬ್ರಾಹಿಂ ಮತ್ತು ಅವರ ಸ್ನೇಹಿತರು ಸೇರಿ ಕಟ್ಟಿ ಹಾಕಿದ್ದರು. ವಿಷಯ ತಿಳಿದ ಆಡಿನ ಮಾಲಕ ಹನೀಫ್ ಸ್ಥಳಕ್ಕೆ ಧಾವಿಸಿ ಇದನ್ನು ಪ್ರಶ್ನಿಸಿದರೆಂದೂ, ಅವರೊಳಗೆ ಮಾತಿನ ಚಕಮಕಿ ನಡೆದು ಹೊಡೆದಾಟ ನಡೆಯಿತೆನ್ನಲಾಗಿದೆ. ಘಟನೆಯಿಂದ ಹನೀಫ್ ರವರ ಆಟೋದ ಮುಂಭಾಗದ ಗಾಜು ಸಂಪೂರ್ಣ ಪುಡಿಯಾಗಿದೆ. ಘಟನೆಯ ನಂತರ ಎರಡು ಕಡೆಯವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ ಹನೀಫ್ ರವರು ನನ್ನ ಆಡು ಮರಿಗಳನ್ನು ಕಟ್ಟಿಹಾಕಿರುವ ಬಗ್ಗೆ ವಿಚಾರಿಸಲು ಬಂದಾಗ ಇಬ್ರಾಹಿಂ ಜಯನಗರ, ವಸಂತ ಕುತ್ಪಾಜೆ ಮತ್ತು ಅವರ ಸಹೋದರರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ನಾನು ಅಲ್ಲಿಂದ ತಪ್ಪಿಸಲು ಓಡಿದಾಗ ಪುನಃ ನನ್ನಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಇಬ್ರಾಹಿಂರವರು ಸಂಪರ್ಕಕ್ಕೆ ಲಭ್ಯರಾಗಿಲ್ಲ.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.