ಶಿಕ್ಷಣ ಮುಂದುವರೆಸದ ಮಕ್ಕಳಿಬ್ಬರನ್ನು ಶಾಲೆಗೆ ಸೇರಿಸಿದ ಗ್ರಾ.ಪಂ ಸದಸ್ಯರು

Advt_Headding_Middle

ಸ್ಮಾರ್ಟ್ ಪೋನ್ ಕೊಡಿಸಿ ನೆರವಾಗಲು ಮುಂದಾದ ಸುಬ್ರಹ್ಮಣ್ಯ ಪಂಚಾಯತ್

ದಾಂಪತ್ಯದ ಕಲಹದಿಂದ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದ ಮಹಿಳೆಯ ಇಬ್ಬರು ಮಕ್ಕಳ ಶಿಕ್ಷಣ ಮೊಟಕುಗೊಳಿಸಿದನ್ನು ಮನಗಂಡು ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರು ಮತ್ತು ಪಂಚಾಯತ್ ಸೇರಿ ಶಾಲೆಗೆ ಸೇರಿಸಿ ಉತ್ತಮ ಕಾರ್ಯ ಮಾಡಿರುವುದು ವರದಿಯಾಗಿದೆ.


ಸುಬ್ರಹ್ಮಣ್ಯದ ದೇವರಗದ್ದೆ ಮಾನಾಡು ಪ್ರದೇಶದ ಪರಿಶಿಷ್ಟ ಜಾತಿಯ ಶ್ರೀಮತಿ ಮಮತಾ ಅವರನ್ನು ಪುತ್ತೂರು ತಾಲೂಕಿನ ಆರ್ಲಪದವಿಗೆ ಮದುವೆ ಮಾಡಿಕೊಡಲಾಗಿತ್ತು. ಮನೆಯ ಆಂತರಿಕ ಕಲಹದಿಂದ ಪತಿ ಮನೆ ಬಿಟ್ಟು ತವರು ಮನೆ ಸೇರಿದ್ದರಿಂದ ಅವರ ಮಕ್ಕಳಾದ ರಾಧಿಕ ಮತ್ತು ಸುಚಿತ್ರ ನಾಲ್ಕನೆಯ ಹಾಗೂ ಐದನೆಯ ತರಗತಿಯಲ್ಲಿ ಕಲಿಯುತ್ತಿದ್ದ ಮಕ್ಕಳ ಶಿಕ್ಷಣ ಮೊಟಕುಗೊಳಿಸಿದ್ದರು. ಮನೆಯಲ್ಲಿ ತೀವ್ರ ಬಡತನ, ಆರ್ಥಿಕ ಸಂಕಷ್ಟ, ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿಯ ಕೊರತೆಯಿಂದ ಶಾಲೆಯನ್ನು ತ್ಯಜಿಸಿ ಮಕ್ಕಳು ಮನೆಯಲ್ಲೇ ಇದ್ದರು. ಇದನ್ನು ಗಮನಿಸಿದ ಸ್ಥಳೀಯ ಗ್ರಾ. ಪಂ. ಸದಸ್ಯರಾದ ಹರೀಶ ಇಂಜಾಡಿ, ಸೌಮ್ಯ ಹಾಗೂ ಸವಿತಾ ಭಟ್ ರವರು ವಿಶೇಷ ಮುತುವರ್ಜಿ ವಹಿಸಿ ಮಕ್ಕಳನ್ನು ಮತ್ತು ಪೋಷಕರನ್ನು ಸುಬ್ರಹ್ಮಣ್ಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರೆತಂದು ಮರುಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಯಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲ ರವರು ಸುಳ್ಯ ಕ್ಷೇತ್ರ ಶಿಕ್ಷಣ ಇಲಾಖೆಯ ಬಿ .ಆರ್.ಸಿ.ಯವರ ಮುಖಾಂತರ ಪುತ್ತೂರು ತಾಲೂಕಿನ ಆರ್ಲಪದವಿನ ಸರಕಾರಿ ಶಾಲೆಯಿಂದ ವಿದ್ಯಾರ್ಥಿನಿಯರ ವರ್ಗಾವಣೆಯ ಪತ್ರ ತರಿಸಿ ಸುಬ್ರಹ್ಮಣ್ಯದ ಶಾಲೆಗೆ ದಾಖಲು ಮಾಡಿಕೊಳ್ಳುವುದಾಗಿ ತಿಳಿಸಿದರು. ಇದಲ್ಲದೆ ವಿದ್ಯಾರ್ಥಿನಿಯರ ಆನ್ ಲೈನ್ ಶಿಕ್ಷಣಕ್ಕೆ ಅಗತ್ಯವಾದ ಸ್ಮಾರ್ಟ್ ಫೋನ್ ಇತ್ಯಾದಿ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿಯ ಸ್ವಂತ ನಿಧಿಯ ಶೇ.25 ಪರಿಶಿಷ್ಟ ಜಾತಿಯ ಮೀಸಲಾದ ಹಣ ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರಲ್ಲಿ ಸಹಾಯಧನ ಕ್ರೋಢೀಕರಿಸಿ ಖರೀದಿಸಿ ನೀಡುವುದೆಂದು ತೀರ್ಮಾನಿಸಲಾದೆ ಎಂದು ತಿಳಿದು ಬಂದಿದೆ. ಗ್ರಾ. ಪಂ. ಸದಸ್ಯರಾದ ಗಿರೀಶ ಪೈಲಾಜೆ, ಅಭಿವೃದ್ಧಿ ಅಧಿಕಾರಿ ಯು.ಡಿ. ಶೇಖರ್ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.