ಅರೆಭಾಷೆ ಸಂಸ್ಕೃತಿ ಶಿಬಿರ ಉದ್ಘಾಟನೆ

Advt_Headding_Middle

ಸಂಸ್ಕೃತಿ, ಸಂಪ್ರದಾಯ ಉಳಿಸಿ, ಬೆಳೆಸಲು ಕರೆ

ಗೌಡ ಜನಾಂಗದ  ಅರೆಭಾಷೆಯಲ್ಲಿ ಅನ್ಯ ಭಾಷೆಗಳ ತುರುಕುವಿಕೆ ಸಲ್ಲದು. ಗೌಡ ಸಂಸ್ಕೃತಿ, ಸಮುದಾಯದ ಆಚಾರ ವಿಚಾರಗಳು ಉಳಿಯಬೇಕಾದರೆ ಸಮುದಾಯದ ಜನರು ಮನೆಯಲ್ಲೂ  ಅರೆಭಾಷೆ ಮಾತನಾಡುವಂತಾಗಬೇಕಲ್ಲದೆ ಮಕ್ಕಳೂ ಮಾತನಾಡುವಂತೆ ಹಿರಿಯರು ಪ್ರೋತ್ಸಾಹಿಸಬೇಕು ಎಂದು ಬಜಪ್ಪಿಲ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ಹೇಮಂತ್ ಕುಮಾರ್ ಗೌಡರ ಮನೆ ಹೇಳಿದರು.

ಅವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಗ್ರಾಮ ಗೌಡ ಸಮಿತಿ ಮಂಡೆಕೋಲು ಇದರ ಸಂಯುಕ್ತ ಆಶ್ರಯದಲ್ಲಿ ಮಂಡೆಕೋಲಿನ ಅಮೃತ ಸಹಕಾರ ಸದನದಲ್ಲಿ ಮೂರು ದಿನಗಳ ಅರೆಭಾಷೆ ಸಂಸ್ಕೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ‌ಗೌಡ ಸಮುದಾಯದ ಜನರು ತುಳು ಹಾಗೂ ಅರೆಭಾಷೆ ಮಾತನಾಡುವ ಜನರು ಇದ್ದರೂ ಅವರ ಪದ್ಧತಿಗಳಲ್ಲಿ ಭಿನ್ನತೆ ಇರಬಾರದು. ಈ ನಿಟ್ಟಿನಲ್ಲಿ ಸಂಸ್ಕೃತಿ ಹಾಗೂ ಪದ್ಧತಿಗಳಲ್ಲಿ ಏಕತೆ ತರುವ ನಿಟ್ಟಿನಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು ಯುವ ಜನಾಂಗ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಮಂಡೆಕೋಲು ಗ್ರಾಮ ಗೌಡ ಸಮಿತಿಯ ಅಧ್ಯಕ್ಚ ಜನಾರ್ಧನ ಬರೆಮೇಲು ಮಾತನಾಡಿ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳು ಸಂಸ್ಕೃತಿ, ಆಚಾರ, ವಿಚಾರಗಳನ್ನು ಅರಿತುಕೊಂಡು ಯಾವುದೇ ಕಾರ್ಯಕ್ರಮವನ್ನು ಮುಂದೆ ನಿಂತು ನಡೆಸುವಂತಾದರೆ ಶಿಬಿರ ಸಾರ್ಥಕತೆ ಪಡೆಯುತ್ತದೆ ಎಂದರು.

ಅರೆಭಾಷೆ ಅಕಾಡೆಮಿಯ ಸದಸ್ಯ ಎ.ಟಿ ಕುಸುಮಾಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅಕಾಡೆಮಿಯ ವತಿಯಿಂದ ಹಮ್ಮಿಕೊಂಡ ಹಲವು ಕಾರ್ಯಕ್ರಮಗಳಾದ ನಾಟಕ, ಯಕ್ಷಗಾನ ಹಾಗೂ ಸಮುದಾಯದ ಏಕೈಕ ಜನಪದ ಕಲೆ ಸಿದ್ದವೇಷಗಳ ಕುರಿತಾಗಿ ವಿವರಿಸಿದರು. ಇನ್ನೋರ್ವ ಸದಸ್ಯ ಪುರುಷೋತ್ತಮ ಕಿರ್ಲಾಯ ಅವರು ಅಕಾಡೆಮಿಯ ವತಿಯಿಂದ ಬಿಡುಗಡೆಗೊಳ್ಳುವ ತ್ರೈಮಾಸಿಕ ಪತ್ರಿಕೆ ‘ಹಿಂಗಾರ’ ಆಸಕ್ತರಿಂದ ಗೌಡ ಸಮುದಾಯದ ಆಚಾರ ವಿಚಾರಗಳ ಕುರಿತಾಗಿ ಬರವಣಿಗೆಗಳನ್ನು ಆಹ್ವಾನಿಸಿದರು 

ಮೂರು ದಿನಗಳ ಕಾಲ ನಡೆಯುವ ಈ ಸಂಸ್ಕೃತಿ ಶಿಬಿರದಲ್ಲಿ ಗೌಡ ಸಮುದಾಯದ ಶುಭ ಹಾಗೂ ಅಶುಭ ಕಾರ್ಯಕ್ರಮಗಳಲ್ಲಿ ಕೈಗೊಳ್ಳುವ ಕಟ್ಟುಕಟ್ಟಳೆ, ಆಚಾರ ವಿಚಾರಗಳ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ. ಶಿಬಿರದ ಸಮಾರೋಪ ಸಮಾರಂಭ ಸೆಪ್ಟೆಂಬರ್ ೨೫ ರಂದು ನಡೆಯಲಿದೆ.

ಅಕಾಡೆಮಿಯ ಸದಸ್ಯ ಜಯಪ್ರಕಾಶ್ ಮೋಂಟಡ್ಕ, ಸಂಪನ್ಮೂಲ ವ್ಯಕ್ತಗಳಾದ ಚಂದ್ರಶೇಖರ ನಾರಾಲು, ಕೇಶವ ಗೌಡ ಬಾಳೆಕೋಡಿ ಹಾಗೂ ಶ್ರೀಮತಿ ದಿವ್ಯಲತಾ ಚೌಟಾಜೆ ಕಾರ್ಯಕ್ರಮದಲ್ಲಿ ಹಾಜರಿದ್ದರು .

ಮಂಡೆಕೋಲು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗೌಡ ಗ್ರಾಮ ಸಮಿತಿಯ ಸದಸ್ಯ ಬಾಲಚಂದ್ರ ದೇವರಗುಂಡ ಸ್ವಾಗತಿಸಿದರು. ಗ್ರಾ.ಪಂ ಮಾಜಿ ಸದಸ್ಯ ಹಾಗೂ ಗೌಡ ಗ್ರಾಮ ಸಮಿತಿಯ ಸದಸ್ಯ ಶುಭಕರ ಬೊಳುಗಲ್ಲು ವಂದಿಸಿದರು. 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.