ಸುಳ್ಯದಲ್ಲಿ ಹಿಂದಿ ದಿವಸ್ ಕಾರ್ಯಕ್ರಮ ಆಚರಣೆ

Advt_Headding_Middle

 

ಸೆಪ್ಟೆಂಬರ್ 14 ಬಿ ಆರ್ ಸಿಂಹ ರವರ ಹುಟ್ಟುಹಬ್ಬದ ಆಚರಣೆ ಅಂಗವಾಗಿ ಸುಳ್ಯ ತಾಲೂಕು ಮಟ್ಟದ ಹಿಂದಿ ದಿವಸ್ ಕಾರ್ಯಕ್ರಮ ಇಂದು ಸುಳ್ಯ ಸಂಧ್ಯಾ ರಶ್ಮಿ ಭವನ ದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಪ್ರೊಫೆಸರ್ ದಾಮೋದರ ಕೆ. ವಿ. ನಿರ್ವಹಿಸಿದರು. ಪ್ರಸನ್ನ ಕುಮಾರ್ ವೈ.ಡಿ. ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಳ್ಯ ಕ್ಷೇತ್ರ ಸಂಪನ್ಮೂಲ ಕಛೇರಿ ಸಮನ್ವಯ ಅಧಿಕಾರಿ ವೀಣಾ ಎಂ ಟಿ, ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ನಳಿನಿ ಕೆ., ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಿನ್ನಪ್ಪಗೌಡ, ಎಣ್ಮೂರು ಪ್ರೌಢಶಾಲಾ ಮುಖ್ಯಶಿಕ್ಷಕಿ ಶೀತಲ್ ಯು. ಕೆ., ಉಪಸ್ಥಿತರಿದ್ದರು.

ಮುಖ್ಯ ಪ್ರಭಾಷಣ ಕಾರರಾಗಿ ಸರಕಾರಿ ಪದವಿ ಕಾಲೇಜಿನ ಹಿಂದಿ ಪ್ರೊಫೆಸರ್ ರಾಮಕೃಷ್ಣ ಮಾತನಾಡಿ ರಾಷ್ಟ್ರೀಯ ಭಾಷೆಗಳಲ್ಲಿ ಮುಖ್ಯವಾದ ಸ್ಥಾನವನ್ನು ಹಿಂದಿ ಭಾಷೆಗೆ ಇದ್ದು ಹಿಂದಿ ಭಾಷೆಯು ಏಕತೆ ಮತ್ತು ಒಗ್ಗಟ್ಟಿಗೆ ಪ್ರಾಮುಖ್ಯತೆಯನ್ನು ನೀಡುವ ಭಾಷೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ಹಿಂದಿ ಅಧ್ಯಾಪಕರುಗಳು ಭಾಗವಹಿಸಿದ್ದರು.
ಹಿಂದಿ ಪ್ರಾಧ್ಯಾಪಕರಾದ ಅಸ್ಲಂ ಮಕಾನ್ದಾರ್ ಸ್ವಾಗತಿಸಿ, ಸತ್ಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ್ ಬಾಳಿಲ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.