ಕನಕಮಜಲು: ರಾಷ್ಟ್ರೀಯ ಆಹಾರ ಸಪ್ತಾಹ ಮತ್ತು ಪೋಷಣ್ ಅಭಿಯಾನ ಮಾಸಾಚರಣೆ

Advt_Headding_Middle

ಕನಕಮಜಲು ಗ್ರಾಮ ಪಂಚಾಯತಿ, ಸುಳ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನಕಮಜಲಿನ ದುರ್ಗಾಶ್ರೀ ಸ್ತ್ರೀಶಕ್ತಿ ಗೊಂಚಲು ವತಿಯಿಂದ ರಾಷ್ಟ್ರೀಯ ಆಹಾರ ಸಪ್ತಾಹ ಮತ್ತು ಪೋಷಣ್ ಅಭಿಯಾನ ಕಾರ್ಯಕ್ರಮವು ಕನಕಮಜಲು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಸೆ.24ರಂದು ಜರುಗಿತು.
ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ವಲಯ ಮೇಲ್ವಿಚಾರಕಿ ಶ್ರೀಮತಿ ಶೈಲಜಾ ಅವರು ಪೋಷಣ್ ಅಭಿಯಾನದ ಕುರಿತು ಮಾತನಾಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಕಾರ್ಯದರ್ಶಿ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕನಕಮಜಲು ಗ್ರಾಮ ಪಂಚಾಯತಿ ಸದಸ್ಯ ಇಬ್ರಾಹಿಂ ಕಾಸಿಂ, ಅಂಗನವಾಡಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಪೌಷ್ಠಿಕಾಂಶಯುಕ್ತ ಆಹಾರ ತಯಾರಿಸಿ ತಂದ ತಾಯಂದಿರಿಗೆ ಬಹುಮಾನ ವಿತರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರುಗಳಾದ ವನಜ ಕಾರಿಂಜ ಸ್ವಾಗತಿಸಿ, ಶ್ರೀಮತಿ ಹೇಮಾವತಿ ವಂದಿಸಿದರು. ಶ್ರೀಮತಿ ಪಾರ್ವತಿ ಬುಡ್ಲೆಗುತ್ತು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪುಷ್ಪಾವತಿ ಮಾಣಿಮಜಲು ಕಾರ್ಯಕ್ರಮ ಸಂಯೋಜಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.