ಬಿಜೆಪಿಗೆ ಅಭಿವೃದ್ಧಿ ಇಚ್ಛಾಶಕ್ತಿಯ ಕೊರತೆ : ಟಿ.ಎಂ.ಶಹೀದ್ ಟೀಕೆ

Advt_Headding_Middle

27 ವರ್ಷದಿಂದ ಸುಳ್ಯದಲ್ಲಿ ಅಂಗಾರರೇ ಶಾಸಕರು

110 ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಯಾಕೆ ಮಾಡಿಸಿಲ್ಲ ?

 

ಸುಳ್ಯದ ಬಿಜೆಪಿಗರಿಗೆ ಹಾಗೂ ಇಲ್ಲಿಯ ಶಾಸಕರು ಈಗ ಸಚಿವರಾಗಿರುವ ಅಂಗಾರರಿಗೆ ಅಭಿವೃದ್ಧಿಯ ಇಚ್ಚಾಶಕ್ತಿಯ ಕೊರತೆ ಇದೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಚುನಾವಣೆ ಸಂದರ್ಭ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಹೋಗಿ ಓಟು ಕೇಳುತ್ತಾರೆ. ೨೭ ವರ್ಷಗಳಿಂದ ಸುಳ್ಯದ ಶಾಸಕರಾಗಿದ್ದು, ಈಗ ಸಚಿವರಾಗಿರುವ ಎಸ್.ಅಂಗಾರರು ಸುಳ್ಯಕ್ಕೆ ೧೧೦ ಕೆ.ವಿ. ಸಬ್‌ಸ್ಟೇಶನ್ ಮಾಡಿಸಲು ಯಾಕೆ ಸಾಧ್ಯವಾಗಿಲ್ಲ” ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್ ಹೇಳಿದರು.
ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಶಾಸಕ ಅಂಗಾರರು ಸಚಿವರಾದ ಬಳಿಕ ಸುಳ್ಯದ ಅಭಿವೃದ್ಧಿ ಆಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಸಮಸ್ಯೆಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಗುತ್ತಿಗಾರಿನಲ್ಲಿ ೩೩ ಕೆ.ವಿ. ಸಬ್‌ಸ್ಟೇಶನ್ ಕಾರ್ಯಾರಂಭ ಮಾಡಿಲ್ಲವೆಂದು ಅವರ ಪಕ್ಷದವರೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಸುಳ್ಯದ ೧೧೦ ಕೆ.ವಿ. ಸಬ್‌ಸ್ಟೇಶನ್‌ಗೆ ಹೋರಾಟಗಳು ನಡೆಯುತ್ತಿದೆ. ಆದರೆ ಶಾಸಕರು ಇಚ್ಚಾಶಕ್ತಿ ತೋರಿಸುತ್ತಿಲ್ಲ. ಮೊನ್ನೆ ಇಂಧನ ಸಚಿವರನ್ನು ನಾನು ಭೇಟಿಯಾಗಿ ಮನವಿ ಮಾಡಿದಾಗ ಅವರು ಅರಣ್ಯ ಸಮಸ್ಯೆಯ ಬಗ್ಗೆ ಮಾತನಾಡುತ್ತಾರೆ. ಈ ದೇಶದಲ್ಲಿ ಬಾಬರಿ ಮಸೀದಿ – ಅಯೋದ್ಯೆ ವಿಚಾರವೇ ಇತ್ಯರ್ಥವಾಗಿರುವಾಗ ಈ ಸಮಸ್ಯೆಯನ್ನು ಪರಿಹರಿಸಲು ಇವರಿಂದ ಆಗುತ್ತಿಲ್ಲವೇ?. ಇದಿಷ್ಟೆ ಅಲ್ಲದೆ ಇಲ್ಲಿಯ ರಸ್ತೆಗಳು ಸೇರಿದಂತೆ ಮೂಲ ಭೂತ ಸೌಕರ್ಯಗಳು ಜನರಿಗೆ ಆಗಬೇಕಾಗಿದೆ. ಅದನ್ನು ಇವರು ಮಾಡುತ್ತಿಲ್ಲ. ನಾವು ಅಭಿವೃದ್ಧಿಯ ಕುರಿತು ಪ್ರಶ್ನಿಸಿದರೆ ಜನರ ದಾರಿ ತಪ್ಪಿಸುವ ನಿಟ್ಟಿನಲ್ಲಿ ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಅವರ ವಿಫಲತೆಯನ್ನು ಮರೆ ಮಾಚಲು ಬಿಜೆಪಿ ಹಾಗೂ ಸಂಘ ಪರಿವಾರ ವ್ಯವಸ್ಥಿತ ಸಂಚು ಮಾಡುತ್ತದೆ. ಕೋಲ್ಚಾರಿನಲ್ಲಿ ತಾಲಿಬಾನಿ ಎಂದು ಹೇಳಿ ಕೋಮು ಸಂಘರ್ಷ ಮೂಡಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಮಾಡಿರುವ ಅಭಿವೃದ್ಧಿ ಕೆಲಸವನ್ನೊಮ್ಮೆ ಬಿಜೆಪಿಗರು ನೋಡಿಕೊಳ್ಳಲಿ.
ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ ಸಚಿವರು ಸುಳ್ಯದಲ್ಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ಇಲ್ಲೇ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ನಾವು ಸಭೆ ನಡೆಸಿದರೆ ಶಾಸಕರು ನಮ್ಮ ವಿರುದ್ಧವೇ ಹಕ್ಕುಚ್ಯುತಿ ಮಂಡಿಸುವುದನ್ನು ಕಂಡಿದ್ದೇವೆ. ಆದರೆ ನಾವು ಪ್ರಯತ್ನ ಬಿಡದೇ ಹೋರಾಟ ಮುಂದುವರಿಸಿದ್ದೇವೆ ಎಂದರು.
ಡಿ.ಕೆ.ಶಿ ಸುಳ್ಯಕ್ಕೆ : ಸೆ.೨೯ರಂದು ಸುಳ್ಯಕ್ಕೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರು ಸುಳ್ಯಕ್ಕೆ ಆಗಮಿಸಲಿದ್ದಾರೆ ಎಂದು ಟಿ.ಎಂ. ಶಹೀದ್ ಹೇಳಿದರು.
ಹಿಂದೂ ಪರ ಸರಕಾರ ಮಾಡಿದ್ದೇನು ? : ನಮ್ಮ ಸರಕಾರ ಹಿಂದೂ ಪರ ಸರಕಾರ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಮಾಡಿದ್ದೇನು ? ಎಂದು ಬ್ಲಾಕ್ ಉಪಾಧ್ಯಕ್ಷ ಸದಾನಂದ ಮಾವಾಜಿ ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶ ಇದೆಯೆಂದು ಹೇಳಿಕೊಂಡು ರಾತ್ರೋ ರಾತ್ರಿ ಜಿಲ್ಲಾಧಿಕಾರಿಗಳಿಗೆ ಪಟ್ಟಿ ಕಳುಹಿಸಿ ದೇವಸ್ಥಾನ ತೆರವಿಗೆ ಸೂಚನೆ ನೀಡುತ್ತಾರೆ. ಬಾಯಲ್ಲಿ ದೇವಸ್ಥಾನ ತೆಗೆಯಲು ಬಿಡುವುದಿಲ್ಲ ಎಂದು ಹೇಳುತ್ತಾರೆ ಹೊರತು ಆ ರೀತಿ ನಡೆದುಕೊಳ್ಳುವುದಿಲ್ಲ. ದ.ಕ. ದಲ್ಲಿಯೂ ಪಟ್ಟಿ ಸಿದ್ಧಗೊಂಡಿದೆ. ಅದನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಯಾವುದೇ ದೇವಸ್ಥಾನ ತೆಗೆಯಲು ನಾವು ಬಿಡುವುದಿಲ್ಲ ಎಂದು ಹೇಳಿದರು.
ನ.ಪಂ. ಸದಸ್ಯ ಶರೀಫ್ ಕಂಠಿ, ಚರಣ್ ಕಾಯರ, ಸಿದ್ದಿಕ್ ಕೊಕ್ಕೊ ಪತ್ರಿಕಾಗೋಷ್ಠಿಯಲ್ಲಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.