ಸುಬ್ರಹ್ಮಣ್ಯ : ಮಲೆನಾಡು ಜನಹಿತರಕ್ಷಣಾ ವೇದಿಕೆ ವತಿಯಿಂದ ಅಭ್ಯಾಸ ವರ್ಗ ಹಾಗೂ ಮಾಹಿತಿ ಕಾರ್ಯಕ್ರಮ

Advt_Headding_Middle

 

ಸುಬ್ರಹ್ಮಣ್ಯ ಮಲೆನಾಡು ಜನಹಿತರಕ್ಷಣಾ ವೇದಿಕೆ ವತಿಯಿಂದ ಅಭ್ಯಾಸ ವರ್ಗ ಹಾಗೂ ಮಾಹಿತಿ ಕಾರ್ಯಕ್ರಮ, ತರಭೇತಿ ಕಾರ್ಯಗಾರ ಸುಬ್ರಹ್ಮಣ್ಯ ಗ್ರಾ.ಪಂ. ಸಭಾಂಗಣದಲ್ಲಿ ಸೆ.23 ರಂದು ನಡೆಯಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಭೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಪ್ರಜಾಪ್ರಭುತ್ವದಲ್ಲಿ ಪರಿಣಾಮಕಾರಿ ನಾಯಕತ್ವ ಕುರಿತು ಸವಿತಾರ ಮುಡೂರು, ವಂದೇ ಮಾತರಂ ಅಭ್ಯಾಸ ಗೀತೆ ಕುರಿತು ಸುಭಾಷಿನಿ ಅವರು ಮಾಹಿತಿ ಹಾಗೂ ತರಭೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಕೃಷಿ ಮತ್ತು ತಾಂತ್ರಿಕ ಉದ್ಯೋಗದ ಮಹತ್ವ, ನಮ್ಮ ಬದುಕು ನಮ್ಮ ಹಕ್ಕು, ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್ ಯೋಜನೆ ಬೇಕಾ ಬೇಡವಾ ಎಂಬ ಬಗ್ಗೆ ಸಂವಾದ ನಡೆಸಲಾಯಿತು.
ಮಲೆನಾಡು ಜನಹಿತರಕ್ಷಣಾ ವೇದಿಕೆಯ ರವೀಂದ್ರ ಕುಮಾರ್ ರುದ್ರಪಾದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜಾ ವಿ.ಭಟ್, ಶಿಬಿರಾಧಿಕಾರಿ ಲತಾ ಸರ್ವೇಶ್ವರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶೀರಾಡಿ, ಅಚ್ಚುತ್ತ ಗೌಡ, ಚಂದ್ರಶೇಖರ್ ಕೋನಡ್ಕ, ಶೇಖರಪ್ಪ ತಳವಾರ, ವರದರಾಜ್ ಸಂಕೇಶ, ದೀಕ್ಷಿತ್ ಐತ್ತೂರು, ಹರೀಶ್ ಕೆ.ಎಸ್., ಸುಭಾಷಿನಿ ಮಾನಾಡು, ವಾರಿಜಾ ಭಟ್, ಯಶವಂತ ಬಂಟ್ವಾಳ, ಮೋನಪ್ಪ ಮಾನಾಡು, ಬಂಕ್ಷಿತ್ ಎಂ.ಎನ್., ಸೌಜನ್ಯ ಜೆ.ಪಿ., ಮನೋಜ್ ಎಸ್. ಭಾಗವಹಿಸಿದ್ದರು. ಜಯಪ್ರಕಾಶ್ ಕೂಜುಗೋಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕಲ್ಮಡಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.