ರೋಟರಿ ಕ್ಲಬ್‌ನಿಂದ ಮಧುಮೇಹ ಆರಂಭದಲ್ಲೇ ಪತ್ತೆ ಹಚ್ಚಲು ವಿಶಿಷ್ಟ ಯೋಜನೆ

Advt_Headding_Middle

 

 

ಅ.29 ರಂದು ತಾಲೂಕಿನಲ್ಲಿ ಶಿಬಿರ ಆಯೋಜನೆ

ಶತಮಾನದ ಇತಿಹಾಸ ಹೊಂದಿರುವ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ರೋಟರಿ ಜಿಲ್ಲೆ 3181 ಕ್ಕೆ ಒಳಪಟ್ಟ ಝೋನ್ ೫ರಡಿಯಲ್ಲಿರುವ ರೋಟರಿ ಸುಳ್ಯ, ಸುಳ್ಯ ಸಿಟಿ, ಬೆಳ್ಳಾರೆ, ಸುಬ್ರಹ್ಮಣ್ಯ, ಕಡಬ ಇವರ ಜಂಟಿ ಆಶ್ರಯದಲ್ಲಿ ಸೆ.29 ಮಧುಮೇಹ ಕಾಯಿಲೆಯ ಬಗ್ಗೆ ಜನ ಸಾಮಾನ್ಯರಲ್ಲೂ ಜಾಗೃತಿ, ಅರಿವು ಮೂಡಿಸುವ ಹಾಗೂ ರಕ್ತ ಪರೀಕ್ಷೆ ನಡೆಸಲಾಗುವುದು ಎಂದು ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಎನ್.ಎ.ಜಿತೇಂದ್ರ ಹೇಳಿದರು.
ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದ ಅವರು, ದೇಶಾದ್ಯಂತ ೧೦ ಲಕ್ಷ ಜನರ ರಕ್ತ ಪರೀಕ್ಷೆ ಮಾಡಿ ಮಧುಮೇಹವನ್ನು ಆರಂಭದಲ್ಲೇ ಕಂಡು ಹಿಡಿಯಲು ಈ ಯೋಜನೆ ಹಾಕಿಕೊಳ್ಳಲಾಗಿದೆ. ಭಾರತದಲ್ಲಿ ಅತೀ ಹೆಚ್ಚು ಮಧು ಮೇಹಿಗಳಿದ್ದಾರೆ. ಶೇ.೫೦ ಮಂದಿಗೆ ಮಧುಮೇಹದ ಪತ್ತೆಯಾಗಿದ್ದರೆ ಇನ್ನೂ ಕೆಲವರಿಗೆ ಗೊತ್ತಾಗಿಲ್ಲ. ಅವರಿಗೆ ಏನಾದರೂ ಅಸೌಖ್ಯಗೊಂಡು ಆಸ್ಪತ್ರೆಗೆ ಹೊದಾಗಲೇ ಮಧುಮೇಹ ಇರುವುದು ಗೊತ್ತಾಗುತ್ತದೆ. ಆದ್ದರಿಂದ ಮಧುಮೇಹವನ್ನು ಆರಂಭದಲ್ಲೇ ಪತ್ತೆ ಮಾಡುವ ನಿಟ್ಟಿನಲ್ಲಿ ರಕ್ತ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುವುದು.
ಸೆಪ್ಟೆಂಬರ್ ೨೯ ವಿಶ್ವ ಹೃದಯದಿನ. ಆದರೆ ರೋಟರಿ ಸಂಸ್ಥೆಯಲ್ಲಿನ ಭಾರತೀಯ ನಿರ್ದೇಶಕರು ಈ ದಿನವನ್ನು ಮಧುಮೇಹವನ್ನು ಪರಾಭವಗೊಳಿಸಿ ಎಂದು ಇಡೀ ಕಾರ್ಯಕ್ರಮವನ್ನು ಒಂದು ಚಳುವಳಿಯ ರೂಪದಲ್ಲಿ, ದೇಶಾದ್ಯಂತ ಒಂದು ದೇಶ ಒಂದು ದಿನ ಒಂದು ಮಿಲಿಯ ಎಂಬ ಧ್ಯೇಯದೊಂದಿಗೆ ಕನಿಷ್ಠ ೧೦ ಲಕ್ಷ ಜನರ ರಕ್ತದ ಮಾದರಿ ಸಂಗ್ರಹಿಸಿ ಅದರಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸುವ ಗುರಿ ಹೊಂದಲಾಗಿದೆ. ಆ ಮೂಲಕ ಸೈಲೆಂಟ್ ಕಿಲ್ಲರ್ ಎನಿಸಿರುವ ಮಧುಮೇಹ ಕಾಯಿಲೆಯ ಬಗ್ಗೆ ಜನ ಸಾಮಾನ್ಯರಲ್ಲೂ ಜಾಗೃತಿ, ಅರಿವು ಮೂಡಿಸುವ ಬೃಹತ್ ದಾಖಲೆಯ ಕಾರ್ಯಕ್ರಮ ಇದಾಗಲಿದೆ. ಈ ರೀತಿಯಲ್ಲಿ ರೋಟರಿ ದಿನ ವನ್ನು ಆಚರಿಸಲಾಗುವುದು.
ಮಧುಮೇಹ ರಕ್ತ ತಪಾಸಣೆ ನಡೆಯುವ ಕೇಂದ್ರ : ಕಾರ್ಯಕ್ರಮದ ದಿನ ಬೆಳಗ್ಗೆ ೯ ಗಂಟೆಗೆ ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ.ಚಿದಾನಂದರು ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಸುಳ್ಯ ನಗರ ವ್ಯಾಪ್ತಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ,
ಜೆ.ಜೆ. ಕಾಂಪ್ಲೆಕ್ಸ್ ಗಾಂಧಿನಗರ, ಕೆ.ವಿ.ಜಿ. ಮೆಡಿಕಲ್ ಕಾಲೇಜು ಅಂಡ್ ಆಸ್ಪತ್ರೆ, ಕೆ.ವಿ.ಜಿ. ಡೆಂಟಲ್ ಕಾಲೇಜು ವಠಾರ, ರೋಟರಿ ವಿದ್ಯಾಸಂಸ್ಥೆ ಆವರಣ ರಥಬೀದಿ,
ಬೆಳ್ಳಾರೆ ನಗರ ದಲ್ಲಿ ದೇವಿ ಹೈಟ್ಸ್ ವಠಾರ, ಸುಬ್ರಹ್ಮಣ್ಯದಲ್ಲಿ ರಥಬೀದಿ ಸುಬ್ರಹ್ಮಣ್ಯ ,
ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರ ಏನೆಕಲ್ಲು, ಕಡಬ ತಾಲೂಕಿನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಭವನ ಕಡಬದಲ್ಲಿ ಮಧುಮೇಹ ರಕ್ತ ಪರೀಕ್ಷೆ ನಡೆಯುವುದು. ಪ್ರತಿ ಕೇಂದ್ರದಲ್ಲೂ ಗರಿಷ್ಟ ನೂರು ಜನರ ರಕ್ತ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ವಿನಂತಿಸಿದರು.

ಮಧುಮೇಹವನ್ನು ಆರಂಭದಲ್ಲಿ ಪತ್ತೆ ಹಚ್ಚಿದರೆ ತುಂಬಾ ಉಪಯೋಗ ಇದೆ. ಅವರಿಗೆ ಆಹಾರದಲ್ಲಿ ಅದನ್ನು ಕಂಟ್ರೋಲ್ ಮಾಡಬಹುದು ಅಲ್ಲದೆ ದೇಹದ ಮೇಲೆ ಆಗುವ ಪರಿಣಾಮವನ್ನು ತಪ್ಪಿಸಬಹುದು ಎಂದು ಕ್ಲಬ್ ಎಕ್ಸ್‌ಟೆನ್ಷನ್ ಚೆಯರ್‌ಮೆನ್ ಡಾ| ಪಿ.ಕೆ. ಕೇಶವ್ ಹೇಳಿದರು.

ಇದೊಂದು ಒಳ್ಳೆಯ ಕಾರ್ಯಕ್ರಮ. ಒಮದು ಹೊಲಿಗೆಯಿಂದ ಗುಣಾಗಬಲ್ಲ ಕಾಯಿಲೆಯನ್ನು ೯ ಹೊಲಿಗೆ ಹಾಕಿಕೊಳ್ಳುವಂತೆ ಮಾಡುವುದು ಸರಿಯಲ್ಲ. ಆದ್ದರಿಂದ ಮಧುಮೇಹ ಆರಂಭದಲ್ಲೆ ಗೊತ್ತಾದರೆ ನಮಗೆ ಒಳ್ಳೆಯದಲ್ಲವೇ. ಎಲ್ಲರೂ ಇದರ ಪ್ರಯೋಜನ ಪಡೆಯೋಣ ಎಂದು ಸುಳ್ಯ  ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರನ್ ನಾಯರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ರೋಟರಿ ಸಿಟಿ ಕ್ಲಬ್ ಅಧ್ಯಕ್ಷ ಪ್ರೀತಮ್ ಡಿ.ಕೆ., ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಪದ್ಮನಾಭ ಬೀಡು, ಸುಬ್ರಹ್ಮಣ್ಯ ಕ್ಲಬ್ ಮಾಜಿ ಅಧ್ಯಕ್ಷ ಮಾಯಿಲಪ್ಪ, ಬೆಳ್ಳಾರೆ ರೋಟರಿ ಕಾರ್ಯದರ್ಶಿ ವಿನಯಕುಮಾರ್ ಇದ್ದರು.

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.