ಕೊ.ಸಂಪಾಜೆ: ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಅಂಗವಾಗಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ

Advt_Headding_Middle

 

ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಡಿಕೇರಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಮಡಿಕೇರಿ, ಹಾಗೂ ಭಗವಾನ್ ಸಂಘ ಚೆಂಬು ಇದರ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ 2.0 ಕಾರ್ಯಕ್ರಮವು ಕೊಡಗು ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ಸೆ.25ರಂದು ಉದ್ಘಾಟನೆಗೊಂಡಿತು.
ಮಡಿಕೇರಿ ನೆಹರೂ ಯುವ ಕೇಂದ್ರದ ಉಪನಿರ್ದೇಶಕ ಸಿದ್ಧರಾಮಪ್ಪ ಅವರು ಸ್ವಾತಂತ್ರ್ಯ ಓಟಕ್ಕೆ ಚಾಲನೆ ನೀಡಿದರು. ಬಳಿಕ ಸ್ವಾತಂತ್ರ್ಯ ಓಟವು ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿಯಿಂದ ಸಂಪಾಜೆ ಮಸೀದಿ ಬಳಿಯಿಂದಾಗಿ ಮಾರ್ಪಡ್ಕ, ಊರುಬೈಲು, ಬಾಲೆಂಬಿ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಸಮಾಪ್ತಿಗೊಂಡಿತು.
ಬಳಿಕ ಬಾಲೆಂಬಿ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟದಲ್ಲಿ ಭಾಗವಹಿಸಿದ ಎಲ್ಲರಿಗೂ ಚೆಂಬು ಭಗವಾನ್ ಸಂಘದ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.
ಫಿಟ್ ಇಂಡಿಯಾ ಸ್ವಾತಂತ್ರ್ಯೋತ್ಸವ ಓಟದಲ್ಲಿ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ.ಅನಂತ, ಕೆ.ಎಫ್.ಡಿ.ಸಿ. ಉದ್ಯೋಗಿ ಅಪ್ಪಣ್ಣ, ಟಿ.ಎಚ್.ಒ. ಮಂಜುನಾಥ, ಮಡಿಕೇರಿ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ, ಚೆಂಬು ಭಗವಾನ್ ಸಂಘದ ಅಧ್ಯಕ್ಷ ದಿನೇಶ್ ಸಣ್ಣಮನೆ ಮತ್ತು ಸದಸ್ಯರುಗಳು, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಆದಂ ಸಂಟ್ಯಾರ್, ಎಂಟಿ. ರಾಮಸ್ವಾಮಿ, ಯಶವಂತ ದೇವರಗುಂಡ, ಕೊ.ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಿರ್ಮಲ ಭರತ್, ಉಪಾಧ್ಯಕ್ಷ ಜಗದೀಶ್ ಪರಮಲೆ, ಸದಸ್ಯ ಕುಮಾರ್ ಚೆದ್ಕಾರ್, ಶ್ರೀಮತಿ ರಮಾದೇವಿ ಕಳಗಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ, ಚೆಂಬು ಗ್ರಾ.ಪಂ. ಸದಸ್ಯರುಗಳಾದ ರಮೇಶ್ ಹುಲ್ಲುಬೆಂಕಿ, ವಸಂತ ಊರುಬೈಲು, ತೀರ್ಥರಾಮ ಪೂಜಾರಿಗದ್ದೆ, ಸಂಪಾಜೆ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಕೊರಗಪ್ಪ ಅರಮನೆತೋಟ, ಮೋಹನ ಬಾಳೆಕಜೆ, ಚೆಂಬು ಗ್ರಾ.ಪಂ. ಮಾಜಿ ಸದಸ್ಯ ಶ್ರೀನಿವಾಸ ನಿಡಿಂಜಿ, ಚಂದ್ರಶೇಖರ ದೇವರಗುಂಡ, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕರಣ್ ರೈ, ಆಡಳಿತಾಧಿಕಾರಿ ಮಲ್ಲಿಕಾರ್ಜುನ, ಸಂಪಾಜೆ ಜೂನಿಯರ್ ಕಾಲೇಜು ದೈ.ಶಿಕ್ಷಣ ಶಿಕ್ಷಕ ಕುಶಾಲಪ್ಪ, ಸೇರಿದಂತೆ ಸಂಪಾಜೆ ಜೂನಿಯರ್ ಕಾಲೇಜು, ಮರುಗೋಡು, ಪೆರಾಜೆ, ಮೂರ್ನಾಡು ಭಾಗದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸುಮಾರು ಇನ್ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.