Breaking News

ಜಿಲ್ಲೆಯಲ್ಲೇ ಪ್ರಪ್ರಥಮವಾಗಿ ಅಸ್ತಿತ್ವಕ್ಕೆ ಬಂದ ದ.ಕ.ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ

Advt_Headding_Middle

 

ತೆಂಗು ಬೆಳೆಗಾರರ ಹಿತ ಕಾಪಾಡುವ ಹಾಗೂ ಬೆಳೆದ ಬೆಳೆಯನ್ನು ಅತ್ಯುತ್ತಮ ರೀತಿಯಲ್ಲಿ ಉತ್ತಮ ದರದೊಡನೆ ಖರೀದಿಸುವ ಮೂಲಕ , ತೆಂಗು ರೈತರಿಗೆಂದೇ ಹುಟ್ಟಿಕೊಂಡ ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ ತನ್ನ ಕೇಂದ್ರ ಕಛೇರಿಯನ್ನು ವಿಟ್ಲದ ಮಂಗಳ ಮಂಟಪ ಕಟ್ಟಡದಲ್ಲಿ ಆರಂಭಿಸಿದೆ.

ಇತ್ತೀಚೆಗೆ ಕೇಂದ್ರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಕಂಪನಿಯ ಎಲ್ಲಾ ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.

ತೆಂಗು ರೈತರಿಗೆ ಹಲವಾರು ಸವಲತ್ತು ಜೊತೆ ಆರೋಗ್ಯವನ್ನು ಕೂಡ ಕಾಪಾಡುವ ನಿಟ್ಟಿನಲ್ಲಿ ಸಂಸ್ಥೆಯು ಪ್ರಮುಖ ಪಾತ್ರ ನಿರ್ವಹಿಸಲಿದ್ದು ,
ಇದರ ವ್ಯಾಪ್ತಿಯು ದಕ್ಷಿಣ ಕನ್ನಡ ಜಿಲ್ಲೆ ಯ 8 ತಾಲ್ಲೂಕುಗಳಿಗೂ ವಿಸ್ತಾರಗೊಳ್ಳಲಿದೆ.
ಈಗಾಗಲೇ ಸಂಸ್ಥೆಯ ಸಿಬ್ಬಂದಿಗಳು ಎಲ್ಲಾ ತಾಲ್ಲೂಕು ಗಳಲ್ಲಿ ರೈತ ನೋಂದಣಿ ಕಾರ್ಯವನ್ನು ಅರಂಭಿಸಿದ್ದಾರೆ. ತೆಂಗಿನ ಕಾಯಿ ಮತ್ತು ತೆಂಗಿನ ಮರವನ್ನು ಮೌಲ್ಯ ವರ್ದಿಸಿ ತೆಂಗಿನ ಕಾಯಿಗೆ ಉತ್ತಮ ರೀತಿಯ ಬೆಲೆ ಸಿಗುವಂತೆ ಯೋಜನೆ ಕಂಪನಿ ಇಟ್ಟು ಕೊಂಡಿದೆ. ಪ್ರಕೃತಿ ವಿಕೋಪ ವೇಳೆ ಪರಿಹಾರ ,ತೆಂಗು ಕೃಷಿ ಮಾಡುವ ರೈತನಿಗೆ ಸರಕಾರದ ಸಹಯೋಗದಲ್ಲಿ ಸಬ್ಸಿಡಿ ಸಸಿ ,ಸದಸ್ಯತನ ಪಡೆದ ರೈತರಿಗೆ ಶೇ.15 ವರೆಗೆ ಉತ್ಪನ್ನದಲ್ಲಿ ರಿಯಾಯಿತಿ ,ಶೇ.15 ಕಡಿತದಲ್ಲಿ ಸರಕಾರದ ರಸಗೊಬ್ಬರ ಪೂರೈಕೆ ,ಅಸಹಜ ಮರಣಕ್ಕೆ 2 ಲಕ್ಷ ಮೊತ್ತದ ತನಕ ವಿಮೆ ,ಪ್ರತಿಷ್ಥಿತ ಆಸ್ಪತ್ರಯಲ್ಲಿ ಒಳರೋಗಿ ವಿಮೆಯಾಗಿ 35 ಸಾವಿರದವರೆಗೆ ಪರಿಹಾರ ಮತ್ತು ಬೆಳೆಗೆ ಸಂಬಧಿಸಿದ ಎಲ್ಲಾ ರೀತಿಯ ತರಬೇತಿಗಳೂ ಸಿಗಲಿದೆ.
ಶೀಘ್ರದಲ್ಲಿ ಜಿಲ್ಲೆಯುದ್ಧಕ್ಕೂ ಖರೀದಿ ಕೇಂದ್ರ ವನ್ನು ತೆರೆಯಲಿದ್ದು ,
ಎಲ್ಲಾ ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತರು ಸದುಪಯೋಗ ಪಡೆದುಕೊಳ್ಳಬಹುದು
ಎಂದು ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದನಾ ಕಂಪನಿಯ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ
ಕೇಂದ್ರ ಕಛೇರಿ ಯ
7338567763 ಸಂಖ್ಯೆಯನ್ನು ಸಂಪರ್ಕಿಸ ಬಹುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.