Breaking News

ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನದ ನಾಮನಿರ್ದೇಶಿತ ಸದಸ್ಯರ ಸಮಿತಿ ರದ್ದುಗೊಳಿಸಿ ಚೊಕ್ಕಾಡಿ ಮುನ್ನೂರು ಒಕ್ಕಲಿನ ಮೊಕ್ತೇಸರರಿಗೆ ಅವಕಾಶ ನೀಡುವಂತೆಯೂ, ಶಾಸಕ ಅಂಗಾರರಿಗೆ ಮುಖ್ಯ ಜವಾಬ್ದಾರಿ ನೀಡುವಂತೆಯೂ ಮನವಿ

Advt_Headding_Middle

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನದ ಆಡಳಿತಕ್ಕೆ ಸರಕಾರ ಘೋಷಿಸಿರುವ ನಾಮನಿರ್ದೇಶಿತ ಸಮಿತಿಯನ್ನು ರದ್ದುಗೊಳಿಸಿ ದೇವಸ್ಥಾನದ ಆಡಳಿತವನ್ನು ಪುರಾತನ ಕಾಲದಿಂದಲೂ ನಡೆಸಿಕೊಂಡು ಬರುತ್ತಿದ್ದ ಮುನ್ನೂರು ಒಕ್ಕಲು ಮನೆತನದ ಮೊಕ್ತೇಸರರಿಗೆ ವಹಿಸುವಂತೆ ಮತ್ತು ಶಾಸಕ ಅಂಗಾರ ಅವರಿಗೆ ದೇವಸ್ಥಾನದ ಮುಖ್ಯ ಜವಾಬ್ದಾರಿ ನೀಡುವಂತೆ ಗ್ರಾಮಸ್ಥರೊಬ್ಬರು ಸರಕಾರವನ್ನು ವಿನಂತಿಸಿಕೊಂಡಿದ್ದಾರೆ.
ಈ ಬಗ್ಗೆ ಗ್ರಾಮಸ್ಥರಾದ ಪಿ.ಮಂಜುನಾಥ ಕುಕ್ಕುಜೆ ಪೈಲೂರು ಎಂಬವರು ಸಲ್ಲಿಸಿರುವ ಮನವಿಯನ್ನು ಅಮರಮುಡ್ನೂರು ಗ್ರಾಮ ಪಂಚಾಯತ್ ನವರು ಪುತ್ತೂರು ಎ.ಸಿ.ಗೆ ಕಳುಹಿಸಿಕೊಟ್ಟಿದ್ದಾರೆ.
ಸರ್ಕಾರ ನೇಮಕ ಮಾಡಿದ ನಾಮನಿರ್ದೇಶಿತ ಸಮಿತಿ ಅಂತಿಮವೆಂದಾದರೆ, ಸರಕಾರವು ತಕ್ಷಣವೇ ಅನುದಾನ ಬಿಡುಗಡೆಗೊಳಿಸಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಬೇಕು. ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಶೀಘ್ರವೇ ಆರಂಭವಾಗಬೇಕಾಗಿದೆ. ದೇವಸ್ಥಾನದ ಮುನ್ನೂರು ಒಕ್ಕಲಿನ ಮೊಕ್ತೇಸರರಿಗೆ ಆಡಳಿತವನ್ನು ಬಿಟ್ಟುಕೊಟ್ಟರೆ ಮುನ್ನೂರು ಒಕ್ಕಲಿನ ಸದಸ್ಯರು ದೇಣಿಗೆ ನೀಡಿ ದೈವಸ್ಥಾನವನ್ನು ಅಭಿವೃದ್ಧಿಪಡಿಸಲು ಸಹಾಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.