ಸುಳ್ಯ ಎಫ್.ಪಿ. ಒ. ಅಧ್ಯಕ್ಷರಾಗಿ ವೀರಪ್ಪ ಗೌಡ ಕಣ್ಕಲ್ ಆಯ್ಕೆ

Advt_Headding_Middle

 

ರೈತರ ಬೆಳೆಗೆ ಬೆಲೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರದ ಮಾರ್ಗದರ್ಶನದಡಿ ತಾಲೂಕು ಪ್ರತಿ ತಾಲೂಕುಗಳಲ್ಲಿ ಫಾರ್ಮಸ್ಸ್ ಪ್ರೊಡ್ಯೂಸರ್‍ಸ್ ಆರ್ಗನೈಸೇಶನ್ ರಚನೆಗೊಳ್ಳುತ್ತಿದ್ದು, ಸುಳ್ಯ ತಾಲೂಕಿನಲ್ಲಿ ರಚನೆಗೊಂಡಿರುವ ರೈತ ಉತ್ಪಾದಕರ ಸಂಸ್ಥೆ (ಎಫ್.ಪಿ.ಒ.) ಇದರ ಅಧ್ಯಕ್ಷರಾಗಿ ಕೃಷಿಕ ಹಾಗೂ ನಿವೃತ್ತ ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪ ಗೌಡ ಕಣ್ಕಲ್ ಆಯ್ಕೆಯಾಗಿದ್ದಾರೆ.
ಇಂದು ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ನಡೆದ ಎಫ್.ಪಿ.ಒ. ನಿರ್ದೇಶಕರ ಸಭೆಯಲ್ಲಿ ವೀರಪ್ಪಗೌಡರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷತೆಗೆ ಅವರ ಹೆಸರನ್ನು ಎಫ್.ಪಿ.ಒ. ನಿರ್ದೇಶಕ ಜಯರಾಮ ಮುಂಡೋಳಿಮೂಲೆ ಸೂಚಿಸಿ, ನಿರ್ದೇಶಕರುಗಳಾದ ನೂಜಾಲು ಪದ್ಮನಾಭ ಗೌಡ ಮತ್ತು ದೇವರಾಜ ಆಳ್ವ ಅನುಮೋದಿಸಿದರು.

ನಿಟ್ಟೆ ಯುನಿವರ್ಸಿಟಿಯ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಡಾ. ಎ.ಪಿ.ಆಚಾರ್ ರವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರ ಶೆಟ್ಟಿ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಹನಾ ಕುಮಾರಿ ಉಪಸ್ಥಿತರಿದ್ದರು.


ಡಾ.ಎ.ಪಿ.ಆಚಾರ್ ರವರು ಎಫ್.ಪಿ.ಒ. ಗಳು ಕಾರ್ಯನಿರ್ವಹಿಸಬೇಕಾದ ವಿಧಾನದ ಬಗ್ಗೆ ವಿವರ ನೀಡಿದರೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರಶೆಟ್ಟಿ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಸುಹನಾರವರು ಶುಭ ಹಾರೈಸಿ ಮಾತನಾಡಿದರು.


ಸಭೆಯಲ್ಲಿ ನಿರ್ದೇಶಕರುಗಳಾದ ಅಮೃತ್ ಕುಮಾರ್ ರೈ ಮರ್ಕಂಜ, ಭಾಸ್ಕರನ್ ನಾಯರ್ ಆಲೆಟ್ಟಿ , ಸಂತೋಷ್ ಕುಮಾರ್ ಸೂಂತೋಡು ಉಬರಡ್ಕ, ಸುರೇಶ್ ರೈ ಅಗಲ್ಪಾಡಿ ಬಾಳಿಲ, ರೋಹಿತ್ ಪಿ.ಎನ್. ಕೊಡಿಯಾಲ, ನೇತ್ರಕುಮಾರ್ ಕನಕಮಜಲು, ರಾಮಕೃಷ್ಣ ಪ್ರಭು ಬೆಳ್ಳಾರೆ, ಶ್ರೀಶ ಕುಮಾರ್ ಅಮರಮುಡ್ನೂರು, ಶ್ರೀಮತಿ ಮಧುರ ಮಂಡೆಕೋಲು, ಎಂ.ಡಿ.ವಿಜಯಕುಮಾರ್ ಮಡಪ್ಪಾಡಿ ಭಾಗವಹಿಸಿದ್ದರು.
ಸತ್ಯಪ್ರಸಾದ್ ಪುಳಿಮಾರಡ್ಕ ಅಮರಮುಡ್ನೂರು ಅಸೌಖ್ಯದ ಕಾರಣದಿಂದ ಸಭೆಗೆ ಬಂದಿರಲಿಲ್ಲ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.