ಅಜಾದೀಕಾ ಮಹೋತ್ಸವ ಅ. 2 ರಂದು ಸುಬ್ರಹ್ಮಣ್ಯದಲ್ಲಿ ಬೃಹತ್ ಸ್ವಚ್ಚಾಹೀಸೇವಾ ಶ್ರಮದಾನ ಕಾರ್ಯಕ್ರಮ

Advt_Headding_Middle

ಸ್ವಚ್ಚತಾ ರಥದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ, ವರ್ಷಪೂರ್ತಿ ಸ್ವಚ್ಚವಾಗಿಡಲು ತಯಾರಿ

ಆಜಾದಿ ಕಿ ಮಹೋತ್ಸವ ಸ್ವಾತಂತ್ರೋತ್ಸವದ 75ನೆ ಅಮೃತ ಮಹೋತ್ಸವ ಕಾರ್ಯಕ್ರಮದ ಅನುಷ್ಠಾನದ ಹಿನ್ನೆಲೆ ಯಲ್ಲಿ ವರ್ಷಪೂರ್ತಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಗಳನ್ನು ನಡೆಸುವ ಸಲುವಾಗಿ ಸೆ.28 ರಂದು ಸುಬ್ರಹ್ಮಣ್ಯ ಗ್ರಾ. ಪಂ. ನಲ್ಲಿ ಸಾರ್ವಜನಿಕರು, ಸಂಘಟನೆಗಳಿದ್ದು ಸಭೆ ನಡೆಸಲಾಯಿತು. ಅಧ್ಯಕ್ಷತೆಯನ್ನು ಗ್ರಾ. ಪಂ. ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು.


ಎಲ್ಲಾ ಸಂಘ ಸಂಸ್ಥೆಗಳ ನೆರವಿನೊಂದಿಗೆ ಅ. 2 ರಂದು ಬೃಹತ್ ಸ್ವಚ್ಛತಾ ಅಭಿಯಾನ ಹಾಗೂ ಸ್ವಚ್ಛತಾ ಪಲಕಗಳ ಅನಾವರಣ ಸ್ವಚ್ಚತಾ ರಥ ಚಾಲನೆ ಮೂಲಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು. ಪ್ರತಿ ತಿಂಗಳ ಮೊದಲ ಆದಿತ್ಯವಾರ ಪೂರ್ವಾಹ್ನ 7.00ರಿಂದ 9.30ರ ತನಕ ಸ್ವಚ್ಛತಾ ಅಭಿಯಾನ, ಶ್ರಮಾದಾನ ಕಾರ್ಯ ಕ್ರಮಗಳನ್ನು ಪ್ರತಿತಿಂಗಳ ಮೊದಲ ಆದಿತ್ಯವಾರದಂದು, ಹೀಗೆ ವರ್ಷಪೂರ್ತಿ ಹಮ್ಮಿಕೊಳ್ಳುವುದಾಗಿ ತೀರ್ಮಾನಿಸಲಾಯಿತು. ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ ಮತ್ತು ಪ್ರತಿ ಮನೆಯಲ್ಲು ನರೇಗ ಯೋಜನೆಯಲ್ಲಿ ಇಂಗುಗುಂಡಿಗಳ ನಿರ್ಮಾಣಕ್ಕೆವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಪ್ರಾರಂಭದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಗಳ ಬಗ್ಗೆ ಪೂರ್ವಭಾವಿ ಮಾತುಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್ ಯು.ಡಿ ವಿವರವಾಗಿ ಸಭೆಗೆ ತಿಳಿಸಿದರು. ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸವಿತಾ ಭಟ್, ಗ್ರಾ.ಪಂ ಸದಸ್ಯರು, ಸಂಜೀವಿನಿಯ ಪದಾಧಿಕಾರಿಗಳು, ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪಂಚಾಯತ್ ಸಿಬ್ಬಂದಿ ರಘು ಸ್ವಾಗತಿಸಿ,  ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.