ಬಿಲ್ಡಪ್ ಕಾಸರಗೋಡು ವತಿಯಿಂದ ಎಂಡೋ ಸಲ್ಫಾನ್ ದುರಂತ ಬಾಧಿತ ಮಕ್ಕಳಿಗೆ ಸ್ವ-ಉದ್ಯೋಗ ಯೋಜನೆ ಕಾರ್ಯಕ್ರಮ

Advt_Headding_Middle

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಸಂಭವಿಸಿದ ಎಂಡೋಸಲ್ಫಾನ್ ದುರಂತದಿಂದ ಸಮಸ್ಯೆಗೊಳಗಾದ ಕುಟುಂಬಗಳಿಗೆ ಹಾಗೂ ವಿಶೇಷ ಅಗತ್ಯವಿರುವ ಮಕ್ಕಳಿಗಾಗಿ ಸ್ವ ಉದ್ಯೋಗ ಯೋಜನೆ ಎಂಬ ಕಾರ್ಯಕ್ರಮವು ಸೆ. 23 ರಂದು ಕಾಸರಗೋಡಿನ ಎಣ್ಮಕಜೆಯಲ್ಲಿರುವ ಬಟ್ಸ್ ಸ್ಕೂಲ್‌ನಲ್ಲಿ ನಡೆಯಿತು.


ಬಿಲ್ಡಪ್ ಕಾಸರಗೋಡು ಪೇಪರ್ ಸೀಡ್ ಪೆನ್ ಯೋಜನೆಯ ಪ್ರಯುಕ್ತ ಕಾರ್ಯಕ್ರಮ ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಉದ್ಘಾಟಿಸಿ, ಗ್ರಾಮದಲ್ಲಿ ಸರಕಾರ ಅನುಷ್ಠಾನ ಗೊಳಿಸಲು ನಿಶ್ಚಯಿಸಿದ ಹಲವು ಪದ್ಧತಿಗಳ ಬಗ್ಗೆ ವಿವರಿಸಿದರು. ಬಿಲ್ಡಪ್ ಕಾಸರಗೋಡು ಕಾರ್ಯನಿರತ ಅಧ್ಯಕ್ಷ ಕೋಕಲ್ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ವ್ಯಾಪಾರ ಮತ್ತು ವಾಣಿಜ್ಯ ವಿಭಾಗ ಕಾರ್ಯದರ್ಶಿ ರವೀಂದ್ರನ್ ಕಣಂಕೈ ಅಧ್ಯಯನ ತರಗತಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು ಇನ್ನಿತರ ಸಾಮಾಜಿಕ ನಾಯಕರು ಉಪಸ್ಥಿತರಿದ್ದರು. ಬಿಲ್ಡಪ್ ಕಾಸರಗೋಡು ಪ್ರಧಾನ ಕಾರ್ಯದರ್ಶಿ ಡಾ. ಶೇಖ್ ಭಾವ ಎಂಡೋ ಪೀಡಿತರ ಬಗ್ಗೆ ಅವರ ಕಾರ್ಯವೈಖರಿಗಳ ಬಗ್ಗೆ ಮಾಹಿತಿಯನ್ನು ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಮಾನವ ಸಂಪನ್ಮೂಲ ವಿಭಾಗ ಕಾರ್ಯದರ್ಶಿ ಡಾ.ರಶ್ಮಿ ಪ್ರಕಾಶ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.