Breaking News

ಉತ್ತಮ ಆಹಾರ ಶೈಲಿ, ವ್ಯಾಯಾಮದಿಂದ ರೋಗಗಳನ್ನು ದೂರ ಮಾಡಿ: ಡಾ.ಸಿ.ಆರ್.ಭಟ್

Advt_Headding_Middle

ರೋಟರಿ ಕ್ಲಬ್ ನಿಂದ ಮಧುಮೇಹ ತಪಾಸಣಾ ಶಿಬಿರ

ಆಹಾರ ಸೇವನೆಯಲ್ಲಿ ನಿಯಂತ್ರಣ, ನಿತ್ಯ ವ್ಯಾಯಾಮ ಮತ್ತು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ರೋಗಗಳನ್ನು ದೂರ ಮಾಡಬಹುದು ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ರಾಮಚಂದ್ರ ಭಟ್ ಅಭಿಪ್ರಾಯಪಟ್ಟರು. ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್ ವತಿಯಿಂದ ವಿಶ್ವ ಹೃದಯ ದಿನದಂದು ದೇಶದಾದ್ಯಂತ ಒಂದೇ ದಿನ ಹತ್ತು ಲಕ್ಷ ಜನರ ಮಧುಮೇಹ ತಪಾಸಣೆ ನಡೆಸುವ ಬೃಹತ್ ಶಿಬಿರದ ಅಂಗವಾಗಿ ರೋಟರಿ ಕ್ಲಬ್ ಗಳ ಜಂಟಿ ಆಶ್ರಯದಲ್ಲಿ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮಧುಮೇಹ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮನುಷ್ಯನ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ ಆರೋಗ್ಯಸ್ಥಿತಿ ಹದಗೆಡುತ್ತಿದೆ. ಈಗ ಚಿಕ್ಕ ಪ್ರಾಯದಲ್ಲಿಯೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚು ಕಂಡುಬರುತ್ತಿದೆ. ಮಧುಮೇಹ, ರಕ್ತದೊತ್ತಡದಂತಹ ಸೈಲೆಂಟ್ ಕಿಲ್ಲರ್ ರೋಗಗಳು ಮಾನವದೇಹದಲ್ಲಿ ನೆಲೆ ಮಾಡಿದೆ. ಆಹಾರ ನಿಯಂತ್ರಣ, ವ್ಯಾಯಾಮ, ನಿದ್ರೆ ಮತ್ತು ಉತ್ತಮ ಜೀವನಶೈಲಿಯಿಂದ ಇದನ್ನು ತಡೆದು ಉತ್ತಮ ಆರೋಗ್ಯ ರೂಪಿಸಲು ಸಾಧ್ಯ ಎಂದರು.


ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ಶಿಬಿರವನ್ನು ಉದ್ಘಾಟಿಸಿದರು. ರೋಟರಿ ವಲಯ ೫ ರ ಅಸಿಸ್ಟೆಂಟ್ ಗವರ್ನರ್ ಎನ್.ಎ. ಜಿತೇಂದ್ರ ಮಾತನಾಡಿ ದೇಶದಾದ್ಯಂತ ಮಧುಮೇಹ ತೊಡೆದುಹಾಕುವ ಅಭಿಯಾನದ ಅಂಗವಾಗಿ ಮಧುಮೇಹದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಿ ರೋಗವನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಶಿಬಿರದಲ್ಲಿ ರಕ್ತ ಪರೀಕ್ಷೆ ನಡೆಸಿ ಮಧುಮೇಹ ಪತ್ತೆ ಹಚ್ಚಲಾಗುವುದು. ದೇಶದಾದ್ಯಂತ 10 ಲಕ್ಷ ಜನರ ರಕ್ತ ಪರೀಕ್ಷೆ ಮಾಡಿ ಮಧುಮೇಹವನ್ನು ಆರಂಭದಲ್ಲೇ ಕಂಡುಹಿಡಿಯಲು ಈ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ರೋಟರಿ ಕ್ಲಬ್ ಜಿಲ್ಲಾ ಎಕ್ಸ್ ಟೆನ್ಸನ್ ಚೆಯರ್ ಮೆನ್ ಡಾ. ಪಿ.ಕೆ.ಕೇಶವ್, ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ವಿಕ್ರಮ್ ಡಿ.ಕೆ., ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ. ಗೀತಾ ದೊಪ್ಪ, ಡಾ. ನವ್ಯ, ನರ್ಸಿಂಗ್ ಸೂಪರಿಟೆಂಡೆಂಟ್ ಪ್ರೇಮಜಾ ಉಪಸ್ಥಿತರಿದ್ದರು. ಸುಳ್ಯ ರೋಟರಿ ಸಿಟಿ ಕ್ಲಬ್ ಅಧ್ಯಕ್ಷ ಪ್ರೀತಮ್ ಡಿಕೆ ಸ್ವಾಗತಿಸಿ, ಗಿರೀಶ್ ನಾರ್ಕೋಡು ವಂದಿಸಿದರು. ರೋಟರಿ ಪದಾಧಿಕಾರಿಗಳಾದ ಗುರು ವಿಕ್ರಂ ಪ್ರಸಾದ್, ಶಿವಪ್ರಸಾದ್, ಚೇತನ್ ಮತ್ತಿತರರು ಉಪಸ್ಥಿತರಿದ್ದರು.


ಜಿಲ್ಲೆ 3181 ಕ್ಕೆ ಒಳಪಟ್ಟ ಝೋನ್ 5 ರಡಿಯಲ್ಲಿರುವ ರೋಟರಿ ಸುಳ್ಯ, ಸುಳ್ಯ ಸಿಟಿ, ರೋಟರಿ ಬೆಳ್ಳಾರೆ ಟೌನ್, ಸುಬ್ರಹ್ಮಣ್ಯ, ಕಡಬ ಇದರ ಜಂಟಿ ಆಶ್ರಯದಲ್ಲಿ ಇಂದು ಮಧುಮೇಹ ಕಾಯಿಲೆ ಬಗ್ಗೆ ವಿವಿಧ ಕಡೆ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಸುಳ್ಯ ನಗರ ವ್ಯಾಪ್ತಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಜೆಜೆ ಕಾಂಪ್ಲೆಕ್ಸ್ ಗಾಂಧಿನಗರ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕೆವಿಜಿ ಡೆಂಟಲ್ ಕಾಲೇಜು ವಠಾರ, ರೋಟರಿ ವಿದ್ಯಾಸಂಸ್ಥೆ ಆವರಣ ರಥಬೀದಿ, ಬೆಳ್ಳಾರೆ ನಗರದಲ್ಲಿ ದೇವಿ ಹೈಟ್ಸ್ ವಠಾರ, ಸುಬ್ರಹ್ಮಣ್ಯದಲ್ಲಿ ರಥಬೀದಿ ಸುಬ್ರಹ್ಮಣ್ಯ, ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರ, ಕಡಬ ತಾಲೂಕಿನಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಭವನ ಕಡಬದಲ್ಲಿ ಮದುಮೇಹ ರಕ್ತ ಪರೀಕ್ಷೆ ಆಯೋಜಿಸಲಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.