Breaking News

ಕಾಯರ್ತೋಡಿ : ಹದಿಹರೆಯದ ಮಕ್ಕಳಿಗೆ ಸ್ವಚ್ಛತೆ, ರಕ್ತಹೀನತೆ ಬಗ್ಗೆ ತರಬೇತಿ

Advt_Headding_Middle

ಜೇಸಿಐ ಸುಳ್ಯ ಪಯಸ್ವಿನಿ ಮತ್ತು ಕಾಯರ್ತೋಡಿ ಅಂಗನವಾಡಿ ಕೇಂದ್ರದಲ್ಲಿ ಹದಿಹರೆಯದ ಮಕ್ಕಳಿಗೆ ಸ್ವಚ್ಛತೆ ಮತ್ತು ರಕ್ತಹೀನತೆ ತರಬೇತಿಯನ್ನು ಸೆ. 28ರಂದು ಕಾಯರ್ತೋಡಿ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.


ಈ ತರಬೇತಿಯನ್ನು ಜೆಸಿಐ ವಲಯ ಉಪಾಧ್ಯಕ್ಷರು, ವಲಯ ತರಬೇತುದಾರರಾದ ಜೆಸಿ ಹೇಮಲತಾ ಪ್ರದೀಪ್ ಬಾಕಿಲ ರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ತರಬೇತಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಜೇಸಿಐ ಸುಳ್ಯ ಪಯಸ್ವಿನಿ ಘಟಕದ ವಲಯಾಧಿಕಾರಿ ಜೇಸಿ ದೇವರಾಜ ಕುದ್ಪಾಜೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಕನಕಾಂಗಿ, ಆರೋಗ್ಯ ಸಹಾಯಕಿ ಕುಮಾರಿ ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಶಾರದಾ ಜಯರಾಮ ಬೊಳಿಯಮಜಲು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀ ಮತಿ ರಾಧಾಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕಿಶೋರಿಯರಾದ ಕುಮಾರಿ ಶ್ರೇಯ ಮತ್ತು ಪೂರ್ವಿಕ ಪ್ರಾರ್ಥಿಸಿದರು. ಈ ಕಾರ್ಯಕ್ರಮದಲ್ಲಿ ಹದಿಹರೆಯದ ಮಕ್ಕಳು ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.