Breaking News

ಪೆರಾಜೆ : ಜ್ಯೋತಿ ಪ್ರೌಢಶಾಲೆಯಲ್ಲಿ ಪೋಷಕರ ಸಮಿತಿ ರಚನೆ ಮತ್ತು ಪೋಷಣ ಅಭಿಯಾನ ಕಾರ್ಯಕ್ರಮ

Advt_Headding_Middle

ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ಪೋಷಕರ ಸಮಿತಿ ರಚನೆ ಮತ್ತು ಪೋಷಣ ಅಭಿಯಾನ ಕಾರ್ಯಕ್ರಮವು ಸೆ.24 ರಂದು ನಡೆಯಿತು. ಪೋಷಕರ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ವಿದ್ಯಾಕುಮಾರಿ ಬಂಗಾರಕೋಡಿ, ಉಪಾಧ್ಯಕ್ಷರಾಗಿ ಮೀನಾಕ್ಷಿ ಕೆ.ಎಲ್., ಕಾರ್ಯದರ್ಶಿಯಾಗಿ ರಾಜಶೇಖರ ನಿಡ್ಯಮಲೆ, ಜೊತೆ ಕಾರ್ಯದರ್ಶಿ ಯಾಗಿ ಪುಂಡರೀಕ ಅರಂಬೂರು, ಪೋಷಕ ಸಮಿತಿಯ ಸದಸ್ಯರಾಗಿ ಡೀಶಾ ಪ್ರಸಾದ್ ಕುಂಬಳಚೇರಿ, ಅಶೋಕ ಕೊಳಂಗಾಯ, ಕುಂಞಕಣ್ಣ ಕುಂಬಳಚೇರಿ, ಪ್ರೇಮ ಬಂಗಾರ ಕೋಡಿ ಚಂದ್ರವತಿ ವ್ಯಾಪಾರೆ, ರಾಧಾಕೃಷ್ಣ ಪೇರುಮುಂಡ, ಪ್ರಭಾವತಿ ಬಂಗಾರ ಕೋಡಿ, ಗೀತಾ ಪೆರಂಗಾಜೆ, ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 

ಪೋಷಣಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಕೆವಿಜಿ ಆಯುರ್ವೇದ ಕಾಲೇಜಿನ ಪಂಚಕರ್ಮ ವಿಭಾಗದ ಮುಖ್ಯಸ್ಥರಾದ ಡಾ.ಸನತ್ ದೇರಾಜೆ ಯವರು ಪೌಷ್ಟಿಕ ಆಹಾರ ಅಪೌಷ್ಟಿಕತೆ, ಪಥ್ಯ, ಅಪಥ್ಯ ಪದಾರ್ಥ ಸೇವನೆಯ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ರಾದ ವೇಣುಗೋಪಾಲ ಕೊಯಿಂಗಾಜೆ ವಹಿಸಿದ್ದರು. ವಿಜ್ಞಾನ ಶಿಕ್ಷಕ ಜಿ.ಆರ್.ನಾಗರಾಜ್ ಎಲ್ಲರನ್ನೂ ಸ್ವಾಗತಿಸಿದರು. ಶಾಲಾ ಕಚೇರಿ ಸಹಾಯಕಿ ಶ್ರೀಮತಿ ಚಂದ್ರಮತಿಯವರು ಕುಂಬಳಚೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.