Breaking News

ಬಳ್ಳಕ್ಕದಲ್ಲಿ ಗಾಂಧಿ ರಥಯಾತ್ರೆಗೆ ಅದ್ದೂರಿ ಸ್ವಾಗತ

Advt_Headding_Middle

 

ಸುದ್ದಿ ಸಮೂಹ ಸಂಸ್ಥೆಯ ಆಶಯದ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯ ರಥಕ್ಕೆ ಗುತ್ತಿಗಾರು ಗ್ರಾಮದ ಬಳ್ಳಕ್ಕದಲ್ಲಿ ನಾಗರಿಕರಿಂದ ಅಭೂತಪೂರ್ವ ಸ್ವಾಗತ ದೊರೆಯಿತು.

ಸ್ಥಳೀಯ ಸ್ತ್ರೀ ಶಕ್ತಿ ಸಂಘದ ಸದಸ್ಯರು ಗಾಂಧೀಜಿ ಭಾವಚಿತ್ರಕ್ಕೆ ಆರತಿ ಬೆಳಗುವುದರ ಮೂಲಕ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಮೊಗ್ರ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದ ಆಡಳಿತ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಎಪಿಎಂಸಿ ನಿರ್ದೇಶಕಿ ಶ್ರೀಮತಿ ಜಯಲಕ್ಷ್ಮೀ ಚಿಕ್ಮುಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶಾರದಾ ಮುತ್ಲಾಜೆ, ಲತಾಕುಮಾರಿ ಆಜಡ್ಕ, ಬಳ್ಳಕ್ಕ ಅಂಗನವಾಡಿ ಕಾರ್ಯಕರ್ತೆ ಲತಾ ಅಂಬೆಕಲ್ಲು, ಸುದ್ದಿ ಪತ್ರಿಕಾ ವಿತರಕ ಪದ್ಮಯ್ಯ ಬಳ್ಳಕ್ಕ, ಗಾಂಧಿ ಚಿಂತನಾ ವೇದಿಕೆಯ ಕಾರ್ಯದರ್ಶಿ ಉಜಿತ್ ಶಾಮ್ ಚಿಕ್ಮುಳಿ, ಪೃತ್ವಿಶ್ ಕೋಡ್ತುಗುಳಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಪಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ದ್ವಾರದ ಹತ್ತಿರ ದಿಂದ ಗ್ರಾಮ ಭಾರತ ತಂಡದ ಸದಸ್ಯರಾದ ಉಜಿತ್ ಶಾಮ್ ಚಿಕ್ಮುಳಿ ಹಾಗೂ
ಪೃಥ್ವಿಶ್ ಕೋಡ್ತುಗುಳಿ ತಮ್ಮ
ದ್ವಿಚಕ್ರ ವಾಹನದಲ್ಲಿ ರಥವನ್ನು ಸ್ವಾಗತಿಸಿ ದ್ವಾರದಿಂದ ಬಳ್ಳಕ್ಕದವರೆಗೆ ಜೊತೆಯಲ್ಲಿ ಸಾಗಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.