Breaking News

ಕೊಳ್ತಿಗೆ : ಅನ್ಯಕೋಮಿನ ಯುವಕನ ಮನೆಯಲ್ಲಿ ಹಿಂದು ಯುವತಿ ಇರುವ ಶಂಕೆ

Advt_Headding_Middle

ಮನೆ ಮುಂದೆ ಜಮಾಯಿಸಿದ ಸಾರ್ವಜನಿಕರು

ಯುವಕನ ವಶಕ್ಕೆ ಪಡೆದ ಬೆಳ್ಳಾರೆ ಪೊಲೀಸರು

ಜಾಲ್ಸೂರಿನಲ್ಲಿ ಯುವತಿ ಪತ್ತೆ – ಪೊಲೀಸ್ ವಶ

ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿ ಇದ್ದಾಳೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಯುವಕನ ಮನೆ ಮುಂದೆ ಸಾರ್ವಜನಿಕರು ಜಮಾಯಿಸಿದ ಘಟನೆ ಕೊಳ್ತಿಗೆ ಗ್ರಾಮದ ಕುಂಟಿಕಾನ ಎಂಬಲ್ಲಿ ಸೆ.29 ರಂದು ನಡೆದಿದೆ.

ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿಯೊಬ್ಬಳು ಇದ್ದಾಳೆ ಎನ್ನುವ ಬಗ್ಗೆ ಮಾಹಿತಿ ದೊರೆತ ಸ್ಥಳೀಯರು ಮನೆ ಬಳಿ ತೆರಳಿ ನೋಡಿದಾಗ ಯುವತಿಯೊಬ್ಬಳಿದ್ದಳೆಂದು ಸಾರ್ವಜನಿಕರು ತಿಳಿಸಿದ್ದಾರೆ.

ಈ ಬಗ್ಗೆ ತಿಳಿಯುತ್ತಿದಂತೆ ಅನ್ಯಕೋಮಿನ ಯುವಕನೋರ್ವನ ಮನೆ ಬಳಿ ಸಾರ್ವಜನಿಕರು ದೌಡಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು.

ಗಂಟೆಗಳ ಕಾಲ ಬಾಗಿಲು ತೆಗೆಯದೆ, ನಂತರ ಬಾಗಿಲು ತೆಗೆದಿದ್ದು ಮನೆಯೊಳಗೆ ಹುಡುಕಾಡಿದಾಗ ಯುವತಿ ಮನೆಯಲ್ಲಿ ಇಲ್ಲದ ಕಾರಣ ಯುವತಿಯನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಕೆಲವರ ಪ್ರಕಾರ ಬೆಳಿಗ್ಗೆ ಯುವತಿಯನ್ನು ಕರೆತಂದು ಬಳಿಕ ಬೇರೆ ಕಡೆ ಬಿಟ್ಟು ಬಂದಿರಬಹುದು ಎಂದು ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ಯುವಕ ದೇಲಂಪಾಡಿ ಕಡೆ ಕೆಲಸಕ್ಕೆ ತೆರಳುತ್ತಿದ್ದು, ಈ ಸಂದರ್ಭದಲ್ಲಿ ಯುವತಿಯ ಪರಿಚಯವಾಗಿ ಅವಳನ್ನು ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಮನೆಗೆ ಕರೆ ತಂದಿದ್ದಾನೆ ಎನ್ನಲಾಗಿದೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಸಾರ್ವಜನಿಕರ ಗುಂಪನ್ನು ಚದುರಿಸಿ, ಅನ್ಯಕೋಮಿನ ಸಿದ್ದೀಕ್ ಎಂಬ ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಿಸಿರುವುದಾಗಿ ತಿಳಿದು ಬಂದಿದೆ.

ಆದರೆ ಆತನ ಮನೆಯಲ್ಲಿ ಯುವತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಜಾಲ್ಸೂರಲ್ಲಿ ಯುವತಿ ಪತ್ತೆ – ಯುವಕ ಯುವತಿಯನ್ನು ಕರೆದೊಯ್ದ ಆದೂರು ಪೊಲೀಸರು

ಯುವಕನ ಮನೆಯಲ್ಲಿ ಇದ್ದಳೆನ್ನಲಾದ ಯುವತಿ ಜಾಲ್ಸೂರಲ್ಲಿ ಪತ್ತೆಯಾಗಿದ್ದು ಪೊಲೀಸರು ಜಾಲ್ಸೂರಿಗೆ ತೆರಳಿ ಯುವತಿಯನ್ನು ವಶಕ್ಕೆ ಪಡೆದು
ಬಳಿಕ ಯುವತಿಯನ್ನು ಠಾಣೆಗೆ ಕರೆದೊಯ್ಯಲಾಯಿತು.
ಜಾಲ್ಸೂರಿನಲ್ಲಿ ರಿಕ್ಷಾ ಸ್ಟಾಂಡಿನಲ್ಲಿ ಯುವತಿ ರಿಕ್ಷಾದವರ ಜೊತೆ ದೇಲಂಪಾಡಿಗೆ ಬಿಡಲು ಹೇಳಿದಾಗ ರಿಕ್ಷಾದವರಿಗೆ ಸಂಶಯ ಬಂತೆನ್ನಲಾಗಿದೆ.
ಆಗ ಅಲ್ಲಿ ಸುತ್ತಮುತ್ತಲಿನವರು ಜಮಾಯಿಸಿ ವಿಚಾರಿಸಿದರೆನ್ನಲಾಗಿದೆ.
ಅಷ್ಟರಲ್ಲಿ ಬೆಳ್ಳಾರೆ ಪೊಲೀಸರು ಬಂದು ಯುವತಿಯನ್ನು ಠಾಣೆಗೆ ಕರೆದೊಯ್ದರೆನ್ನಲಾಗಿದೆ.

ಈಕೆ ದೇಲಂಪಾಡಿಯವಳಾಗಿದ್ದು ಮನೆಯಿಂದ ಕಾಣೆಯಾಗಿದ್ದು ಈ ಬಗ್ಗೆ ಯುವತಿಯ ತಂದೆ ಆದೂರು ಠಾಣೆಯಲ್ಲಿ ದೂರು ನೀಡಿದ್ದರು.

ಈ ವಿಷಯ ತಿಳಿದ ಬೆಳ್ಳಾರೆ ಪೊಲೀಸರು ಆದೂರು ಠಾಣೆಗೆ ಯುವತಿ ಪತ್ತೆಯಾದ ವಿಷಯ ತಿಳಿಸಿದ್ದು ಆದೂರು ಪೊಲೀಸರು ರಾತ್ರಿ ಬೆಳ್ಳಾರೆ ಠಾಣೆಗೆ ಬಂದು ಯುವಕ ಯುವತಿಯನ್ನು ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.