ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ವ್ಯಕ್ತಿಯೋರ್ವರು ತನ್ನದೆಂದು ಸರಕಾರದ ವಿರುದ್ಧ ಸಲ್ಲಿಸಿದ ದಾವೆಯನ್ನು ವಜಾಗೊಳಿಸಿ ಖರ್ಚು ಭರಿಸುವಂತೆ ಆದೇಶಿಸಿದ ಸುಳ್ಯ ನ್ಯಾಯಾಲಯ

Advt_Headding_Middle

ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರು ನಿವಾಸಿ ಮ್ಯಾಥ್ಯೂ ಜೋಸೆಫ್ ಎಂಬವರು ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು, ತಾನು ಅದನ್ನು ಬ್ಯಾಂಕಿನ ಏಲಂ ಪ್ರಕ್ರಿಯೆ ಮೂಲಕ ಪಡೆದುಕೊಂಡಿರುವುದಾಗಿಯೂ, ಈ ಸ್ಥಳವನ್ನು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ತಮ್ಮ ಸಿಬ್ಬಂದಿಗಳೊಂದಿಗೆ ಕಾನೂನುಬಾಹಿರವಾಗಿ ನಮ್ಮ ಜಾಗದೊಳಗೆ ಪ್ರವೇಶಿಸಿ ನಮ್ಮ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟು ಮಾಡುತ್ತಿರುವುದಾಗಿಯೂ, ಪ್ರತಿವಾದಿಗಳು ತನ್ನ ಆಸ್ತಿಗೆ ಪ್ರವೇಶ ಮಾಡಿ ತೊಂದರೆ ನೀಡದಂತೆ, ಹಾಗೂ ಅವರಿಗೆ ಶಾಶ್ವತ ನಿರ್ಬಂಧವನ್ನು ಹೇರುವಂತೆ ಸುಳ್ಯ ನ್ಯಾಯಾಲಯದಲ್ಲಿ 2013 ರಲ್ಲಿ ದಾವೆ ಹೂಡಿದ್ದರು.

ಸರ್ಕಾರದ ಪರ ವಾದಿಸಿದ ಸುಳ್ಯ ನ್ಯಾಯಾಲಯದ ಎ.ಜಿ.ಪಿ. ಜನಾರ್ಧನ್ ಬಿ. ಯವರು ಪ್ರತಿವಾದಿಗಳಾಗಿ ಜಿಲ್ಲಾಧಿಕಾರಿ, ಸುಳ್ಯತಹಸಿಲ್ದಾರ್, ಉಪ ವಲಯ ಅರಣ್ಯಾಧಿಕಾರಿ, ಹಾಗೂ ಇನ್ನೂ ಇಬ್ಬರು ಸೇರಿಸಿ ಈ ಐದು ಮಂದಿಯನ್ನು ಸೇರಿಸಿ ವಾದಿಸಿದರು.
ಬಹಳ ದೀರ್ಘ ವಿಚಾರಣೆ ನಡೆದ ಬಳಿಕ ಸುಳ್ಯದ ಸಿವಿಲ್ ನ್ಯಾಯಾಲಯದ ಕಿರಿಯ ನ್ಯಾಯಾಧೀಶ ಯಶವಂತ್ ಕುಮಾರ್ ರವರು ವಾದಿಯು ಸಲ್ಲಿಸಿರುವ ದಾವೆಯನ್ನು ವಜಾಗೊಳಿಸಿದ್ದಲ್ಲದೆ, ಪ್ರತಿವಾದಿಗಳಿಗೆ ಆಗಿರುವ ಖರ್ಚನ್ನು ನೀಡಬೇಕೆಂದು ಆದೇಶಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.