Breaking News

ಕನಕಮಜಲು: ಕಾಲು ಜಾರಿ ಬಾವಿಗೆ ಬಿದ್ದ ವ್ಯಕ್ತಿ ಮೃತ್ಯು

Advt_Headding_Middle

ಕಾಲುಜಾರಿ ಬಾವಿಗೆ ಬಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕನಕಮಜಲು ಗ್ರಾಮದ ಕಾರಿಂಜದಲ್ಲಿ ಸೆ.29ರಂದು ರಾತ್ರಿ ಸಂಭವಿಸಿದೆ.


ಕನಕಮಜಲು ಗ್ರಾಮದ ಪೆರುಂಬಾರು ನಿವಾಸಿಯಾಗಿರುವ ಜಯರಾಮ ಎಂಬವರು ಸೆ.29ರಂದು ರಾತ್ರಿ ಕಾರಿಂಜದ ಕೃಷ್ಣ ಗುರುಸ್ವಾಮಿ ಎಂಬವರ ಮನೆಯ ಸಮೀಪದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದು, ಸೆ.30ರಂದು ಮುಂಜಾನೆ ಕೃಷ್ಣ ಗುರುಸ್ವಾಮಿ ಅವರ ಪುತ್ರ ಶೇಖರ ಅವರು ಬಾವಿಯ ಬಳಿ ಬಂದು ನೋಡುವಾಗ ಬಟ್ಟೆಯೊಂದು ಬಾವಿಯೊಳಗೆ ಬಿದ್ದಿರುವುದನ್ನು ನೋಡಿದಾಗ ವ್ಯಕ್ತಿಯೋರ್ವರು ಮೃತಪಟ್ಟ ಸ್ಥಿತಿಯಲ್ಲಿ ಕಂಡರೆನ್ನಲಾಗಿದೆ.
ಅವರು ಅಕ್ಕಪಕ್ಕದವರಿಗೆ ವಿಷಯ ತಿಳಿಸಿ, ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಯಿತೆಂದು ತಿಳಿದುಬಂದಿದೆ.
ಮೃತ ಜಯರಾಮ ಅವರು ಪತ್ನಿ ಸುಶೀಲ, ಪುತ್ರ ಜೀವನ್, ಪುತ್ರಿ ನವ್ಯಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.