ಅಜ್ಜಾವರ ರಾಷ್ಟ್ರೀಯ ಪೋಷಣ್ ಮಾಸಾಚರಣೆ

Advt_Headding_Middle

ಜನಮೆಚ್ಚಿದ ಅಧಿಕಾರಿಗಳಿಗೆ ಸನ್ಮಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಗ್ರಾಮ ಪಂಚಾಯಿತಿ ಅಜ್ಜಾವರ, ಶ್ರೀನಿಧಿ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಅಜ್ಜಾವರ ಇವರ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ಬಸವನಪಾದೆ ಅಧ್ಯಕ್ಷತೆ ವಹಿಸಿದ್ದರು.


ಸಿಡಿಪಿಓ ರಶ್ಮಿ ಕಾರ್ಯಕ್ರಮ ಉದ್ಘಾಟಿಸಿದರು ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾ ಮನಮೋಹನ್, ಪಂಚಾಯತ್ ಸದಸ್ಯರಾದ ಪ್ರಸಾದ ರೈ ಮೇನಾಲ ಅನಿಸಿಕೆ ವ್ಯಕ್ತಪಡಿಸಿದರು. ಸಿಡಿಪಿಓ ಇಲಾಖೆಯ ಮೇಲ್ವಿಚಾರಕಿ ಶೈಲಜಾ ಪೌಷ್ಟಿಕ ಆಹಾರದ ಮಾಹಿತಿ ತಿಳಿಸಿದರು. ಅಜ್ಜಾವರ ಶ್ರೀನಿಧಿ ಸ್ತ್ರೀಶಕ್ತಿ ಗೊಂಚಲು ಸಮೂಹದ ಅಧ್ಯಕ್ಷರಾದ ರೇವತಿ ದೊಡ್ಡೇರಿ ಅನಿಸಿಕೆ ವ್ಯಕ್ತಪಡಿಸಿದರು. ಆರೋಗ್ಯ ಸಹಾಯಕಿಯರಾದ ಜಯಶ್ರೀ ಮತ್ತು ಮಾಲಿನಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ಗ್ರಾ.ಪಂ ಪಿಡಿಒ ಜಯಮಾಲಾ, ಆಶಾ ಕಾರ್ಯಕರ್ತೆಯರಾದ ಮೋಹಿನಿ, ಜಯಶ್ರೀ,ರುಕ್ಮಿಣಿ, ಲಕ್ಷ್ಮಿ ವೇದಿಕೆಯಲ್ಲಿದ್ದರು. ಪೌಷ್ಟಿಕ ಆಹಾರದ ತಿಂಡಿಗಳನ್ನು ಸ್ತ್ರೀ ಶಕ್ತಿ ತಂಡ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಯಲ್ಲಿ ತಯಾರಿಸಿ ತಂದಿದ್ದರು. ಅವರಿಗೆ ಬಹುಮಾನ ವಿತರಣೆ ನಡೆಯಿತು. ಅಂಗನವಾಡಿ ಕಾರ್ಯಕರ್ತರಾದ ದೇವಕಿ ಮತ್ತು ಭಾಗಿರರ್ಥಿ ಪ್ರಾರ್ಥಿಸಿದರು. ಗೀತಾ ಅಡ್ಪಂಗಾಯ ಸ್ವಾಗತಿಸಿದರು. ಯಶೋಧ ವಂದಿಸಿದರು. ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ಜನಮೆಚ್ಚಿದ ಅಧಿಕಾರಿಗಳಾಗಿ ಜನರಿಂದ ಆಯ್ಕೆಗೊಂಡ ಸಿಡಿಪಿಓ ರಶ್ಮಿ ಹಾಗೂ ಇಲಾಖೆಯ ವಾಹನ ಚಾಲಕ ಯೋಗೀಶ್ ರನ್ನು ಅಭಿನಂದಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.