Breaking News

ಪಂಜ: ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ರವರಿಗೆ ನಿವೃತ್ತಿ-ಬೀಳ್ಕೊಡುಗೆ

Advt_Headding_Middle

ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ , ರಾಜ್ಯದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಕಿರಿಭಾಗ ರವರು ಸೆ.30 ರಂದು
ಸೇವೆಯಿಂದ ವಯೋ ನಿವೃತ್ತಿ ಹೊಂದಿದ್ದು ಅವರಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು.ಸಭಾಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚೀನಪ್ಪ ಕಾಣಿಕೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದುಗ್ಗಪ್ಪ ಯನ್, ಹಿರಿಯ ಉಪನ್ಯಾಸಕ ವೆಂಕಪ್ಪ ಕೇನಾಜೆ,ಹಳೆ ವಿದ್ಯಾಥಿ೯ ಸಂಘದ ಅಧ್ಯಕ್ಷ ಸವಿತಾರ ಮುಡೂರು, ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಟೈಟಾಸ್ ವರ್ಗಿಸ್ ,ಪ್ರಭಾಕರರವರ ಪತ್ನಿ ಶ್ರೀಮತಿ ಉಷಾ ಪ್ರಭಾಕರ ಕಿರಿಭಾಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ರವರು ದ್ವಿತೀಯ ಪಿಯುಸಿ
ಪರೀಕ್ಷೆಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕ ವಿದ್ಯಾರ್ಥಿಗಳಿಗೆ 30 ಸಾವಿರ ರೂ.ಶಾಶ್ವತ ದತ್ತಿ ನಿಧಿ ಸ್ಥಾಪಿಸಿ ಕಾಲೇಜಿಗೆ ಹಸ್ತಾಂತರಿಸಿದರು.


ಉಪನ್ಯಾಸಕರಾದ ಕಮಲಾಕ್ಷ ಆನಡ್ಕ, ಚಿದಾನಂದ,ಶ್ರೀಮತಿ ಭವ್ಯ,ಕು.ರಜನಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸದಾನಂದ ಹಾಗೂ ವಿದ್ಯಾರ್ಥಿಗಳು ಶುಭಹಾರೈಸಿದರು. ಪ್ರೌಢಶಾಲಾ ಶಿಕ್ಷಕರಾದ ಪುರಂದರ ಪನ್ಯಾಡಿ, ಶ್ರೀಮತಿ ವಿದ್ಯಾ, ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಸದಸ್ಯ ಮಹಾಬಲ ಮಾಳಪ್ಪಮಕ್ಕಿ ,ಪ್ರಭಾಕರ ಕಿರಿಭಾಗ ಪುತ್ರರಾದ ಹಾರ್ದಿಕ್ ಕಿರಿಭಾಗ, ಸಾರ್ಥಕ್ ಕಿರಿಭಾಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಶ್ರೀಮತಿ ರೂಪಕಲಾ ಸ್ವಾಗತಿಸಿದರು. ಉಪನ್ಯಾಸಕ ವೆಂಕಪ್ಪ ಕೇನಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪನ್ಯಾಸಕಿ ಶ್ರೀಮತಿ ಭವ್ಯ ನಿರೂಪಿಸಿದರು. ಉಪನ್ಯಾಸಕಿ ಕು.ರಜನಿ ವಂದಿಸಿದರು.
.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.