ಬೆಳ್ಳಾರೆ ಸ್ನೇಹಿತರ ಕಲಾ ಸಂಘದ  ವಾರ್ಷಿಕ ಮಹಾಸಭೆ 

Advt_Headding_Middle

ಬೆಳ್ಳಾರೆ ಸ್ನೇಹಿತರ ಕಲಾ ಸಂಘ  ಇದರ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು  ಸೆ.25 ರಂದು ಬೆಳ್ಳಾರೆಯ ಸ್ನೇಹಿತರ ಕಲಾ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸಂಜಯ್ ನೆಟ್ಟಾರು ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ಕಾರ್ಯದರ್ಶಿ ವಸಂತ ಗೌಡ ಪಡ್ಪು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಶ್ರೀನಿವಾಸ ಕುರುಂಬುಡೇಲು ವಾರ್ಷಿಕ ಜಮಾ ಖರ್ಚು ಲೆಕ್ಕಪತ್ರ ಮಂಡಿಸಿದರು. ನಂತರ ಗತ ವರ್ಷ ನಡೆದ ಕಾರ್ಯಕ್ರಮಗಳ ಅವಲೋಕನ ನಡೆಯಿತು. ಸಂಘಕ್ಕೆ ಸಿದ್ದಪಡಿಸಲಾದ ನೂತನ ಕಾರ್ಯಕ್ರಮಗಳನ್ನು ಅಂಗೀಕರಿಸಲಾಯಿತು. ಸಭೆಯಲ್ಲಿ ಸೇರಿದ ಸದಸ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ನಂತರ 2021-22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಸಂಜಯ್ ನೆಟ್ಟಾರು, ನಿಕಟ ಪೂರ್ವಾಧ್ಯಕ್ಷರಾಗಿ ಕೊರಗಪ್ಪ ನಾಯ್ಕ ಕುರುಂಬುಡೇಲು, ಉಪಾಧ್ಯಕ್ಷರಾಗಿ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ ಕಾರ್ಯದರ್ಶಿಯಾಗಿ ವಸಂತ ಉಲ್ಲಾಸ್, ಕೋಶಾಧಿಕಾರಿಯಾಗಿ ಸುಪ್ರಿತ್ ಬಸ್ತಿಗುಡ್ಡೆ, , ಜತೆ ಕಾರ್ಯದರ್ಶಿಯಾಗಿ ಆನಂದ ಮಣಿಯಾಣಿ ಉಮಿಕ್ಕಳ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಚೀಮುಳ್ಳು ಹಾಗೂ ವಸಂತ ಗೌಡ ಪಡ್ಪು, ಚಿದಾನಂದ ಪನ್ನೆ , ಶ್ರೀನಿವಾಸ ಕುರುಂಬುಡೇಲು, , ಮಹಾಲಿಂಗ ಕುರುಂಬುಡೇಲು ,ಉಮೇಶ್ ಕಜೆ, ಶಶಿಧರ ಮಣಿಯಾಣಿ ಬೀಡು, ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಸದಸ್ಯರ ಸೂಚನೆ ಹಾಗು ಅನುಮೋದನೆಯೋಂದಿಗೆ ಆರಿಸಲಾಯಿತು. ನಿಕಟಪೂರ್ವಾಧ್ಯಕ್ಷ ಕೊರಗಪ್ಪ ನಾಯ್ಕ ಕುರುಂಬುಡೇಲು ಉಪಾಧ್ಯಕ್ಷರಾದ ಶಶಿಧರ ಮಣಿಯಾಣಿ ಬೀಡು ಜತೆ ಕಾರ್ಯದರ್ಶಿ ಸುಪ್ರಿತ್ ಬಸ್ತಿಗುಡ್ಡೆ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಉಮೇಶ್ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀನಿವಾಸ ಕುರುಂಬುಡೇಲು ಸ್ವಾಗತಿಸಿ, ಕಾರ್ಯದರ್ಶಿ ವಸಂತ ಗೌಡ ಪಡ್ಪು ವಂದಿಸಿದರು, ವಸಂತ ಉಲ್ಲಾಸ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.