Breaking News

ಪಂಜ ಜೂನಿಯರ್ ಕಾಲೇಜ್ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ನಿವೃತ್ತಿ

Advt_Headding_Middle

ಪಂಜ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ರವರು ಸೆ.30ರಂದು ನಿವೃತ್ತಿಗಿದ್ದಾರೆ .ಸುಳ್ಯ ತಾಲ್ಲೂಕು ಬಾಳುಗೋಡು ಗ್ರಾಮದ ಕಿರಿಭಾಗ ಶಿವಪ್ಪ ಮಾಸ್ತರ್ ಮತ್ತು ಅಮ್ಮಣಿ ದಂಪತಿಗಳ ಪುತ್ರರಾದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಳುಗೋಡು ಪಂಜ ಸುಬ್ರಹ್ಮಣ್ಯ ದಲ್ಲಿ ಪಡೆದು, ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಬಿಎ ಪದವಿ ,ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಬಳಿಕ 1984 ರಲ್ಲಿ ಉಪನ್ಯಾಸಕರಾಗಿ ಪುಂಜಾಲಕಟ್ಟೆ, ಹಳೆಯಂಗಡಿ, ಸುಳ್ಯ, ಎರ್ಮಾಳು ಬಡ, ಬೆಳ್ಳಾರೆ ಜ್ಯೂನಿಯರ್ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿ, 2017 ರಲ್ಲಿ ಪ್ರಾಂಶುಪಾಲರಾಗಿ ಪಂಜ ಜೂನಿಯರ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುತ್ತಾರೆ. ಬೆಳ್ಳಾರೆ ಜೂನಿಯರ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಯಾಗಿ 18 ವಾರ್ಷಿಕ ಶಿಬಿರಗಳನ್ನು ನಡೆಸಿ ನಾಯಕತ್ವ, ಸಂಘಟನೆ, ಸ್ವಾವಲಂಬನೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. 2013-14 ನೇ ಸಾಲಿನ ರಾಜ್ಯದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2000 ರ ಸಾಲಿನ ಬೆಳ್ಳಾರೆ ಜೇಸಿಐ ಅಧ್ಯಕ್ಷರಾಗಿ ವ್ಯಕ್ತಿತ್ವ ವಿಕಸನ ತರಬೇತಿ, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.


ಬೆಳ್ಳಾರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ, ತಾಲೂಕು ಮಟ್ಟದ ಯುವಜನ ಮೇಳ, ತುಳು ಮಿನದನ, ತಾಲೂಕು ಮಟ್ಟದ ಕ್ರೀಡಾಕೂಟ ಮುಂತಾದ ಹಲವಾರು ಕಾರ್ಯಕ್ರಮಗಳ ಸಂಘಟಕರಾಗಿ ದುಡಿದಿದ್ದಾರೆ. ಪಂಜ ಜೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಂಸ್ಥೆಗೆ MRPL ನಿಂದ 11 ಲಕ್ಷ 42 ಸಾವಿರ ವೆಚ್ಚದಲ್ಲಿ ಬಾಲಕರ ಮತ್ತು ಬಾಲಕಿಯರ ಶೌಚಾಲಯ ನಿರ್ಮಾಣ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರ ಪತ್ನಿ ಉಷಾ ಪ್ರಭಾಕರ ಗೃಹಿಣಿಯಾಗಿ ಹಿರಿಯ ಮಗ ಹಾರ್ದಿಕ್ ಕಿರಿಭಾಗ B E ಪದವಿ ಪಡೆದು ಮಂಗಳೂರಿನ ಕುಪ್ಪೆಪದವು Bank of Baroda ದಲ್ಲಿ ಉದ್ಯೋಗಿಯಾಗಿದ್ದಾರೆ. ಇನ್ನೋರ್ವ ಪುತ್ರ ಸಾರ್ಥಕ್ ಕಿರಿಭಾಗ MSc in Horticultural ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ senior research fellowship ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.