ಸುಬ್ರಹ್ಮಣ್ಯ : ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಫುಟ್ ಪಾತಿನಲ್ಲಿ ಮೃತ್ಯು

Advt_Headding_Middle

ಸುಬ್ರಹ್ಮಣ್ಯ ಆಸುಪಾಸಿನಲ್ಲಿ ತಿರುಗಾಡುತ್ತಾ ಕೂಲಿ ಕೆಲಸ ಮಾಡುತ್ತಿದ್ದ ಸತೀಶ ಎಂಬ ವ್ಯಕ್ತಿಯ ಮೃತದೇಹ ಸುಬ್ರಹ್ಮಣ್ಯದ ಅಂಗಡಿಗುಡ್ಡೆ ರಸ್ತೆಬದಿಯಲ್ಲಿ ಪತ್ತೆಯಾಗಿದೆ.


ಇಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ರಸ್ತೆಬದಿಯ ಫುಟ್ ಪಾತಿನಲ್ಲಿ ನರಳಾಡುತ್ತಿದ್ದ ವ್ಯಕ್ತಿ ಸ್ವಲ್ಪ ಹೊತ್ತಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳ ಮಹಜರು ನಡೆಸಿ ಮೃತದೇಹವನ್ನು ರವಿ ಕಕ್ಕೆಪದವುರವರ ಸಹಾಯದೊಂದಿಗೆ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ವ್ಯಕ್ತಿಯ ಹೆಸರು ಸತೀಶ್ ಎಂದು ತಿಳಿದುಬಂದಿದ್ದು ಅವರು ಎಲ್ಲಿಯವರು ಎಂಬ ಬಗ್ಗೆ ಮಾಹಿತಿ ಇಲ್ಲ. ಇವರ ಬಗ್ಗೆ ತಿಳಿದವರು ಅಥವಾ ಸಂಬಂಧಿಕರು ಸುಬ್ರಹ್ಮಣ್ಯ ಠಾಣೆಯನ್ನು ಸಂಪರ್ಕಿಸಬೇಕೆಂದು ಪೋಲಿಸರು ವಿನಂತಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.