Breaking News

ಎಪಿಎಂಸಿ ಯಾರ್ಡ್ ನಲ್ಲಿ ಬ್ಯಾಂಕ್ ಮತ್ತು ಸೂಪರ್ ಮಾರ್ಕೆಟ್ : ಸದಸ್ಯರ ಸಲಹೆ

Advt_Headding_Middle

ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರಿಗೆ ನೋಟಿಸ್ : ನಿರ್ಣಯ

ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆಯ ಸಾಮಾನ್ಯ ಸಭೆಯು ಅಧ್ಯಕ್ಷ ವಿನಯ್ ಕುಮಾರ್ ಮುಳುಗಾಡುರವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.
ಉಪಾಧ್ಯಕ್ಷ ನವೀನ್ ಸಾರಕೆರೆ, ಕಾರ್ಯದರ್ಶಿ ರವೀಂದ್ರ, ಮಾಜಿ ಅಧ್ಯಕ್ಷರುಗಳಾದ ಅಡ್ಡಂತಡ್ಕ ದೇರಣ್ಣ ಗೌಡ, ದೀಪಕ್ ಕುತ್ತಮೊಟ್ಟೆ, ನಿರ್ದೇಶಕರುಗಳಾದ ಸಂತೋಷ್ ಜಾಕೆ, ಗಣೇಶ್ ಭಟ್ ಇಡ್ಯಡ್ಕ, ಮೋನಪ್ಪ ಬೊಳ್ಳಾಜೆ, ಆದಂ ಹಾಜಿ ಕಮ್ಮಾಡಿ, ಜಯಪ್ರಕಾಶ್ ಕುಂಚಡ್ಕ, ನಾರಾಯಣ ಬಂಟ್ರಬೈಲು, ಉಮೇಶ್ ಅಡ್ಕ ಬಳೆ, ಬಾಲಕೃಷ್ಣ ಗುತ್ತಿಗಾರು, ಜಯಲಕ್ಷ್ಮಿ ಚಿಕ್ಮುಳಿ, ಸುಕನ್ಯಾ ಭಟ್ ಇದ್ದರು.

ಪಂಬೆತ್ತಾಡಿಯಲ್ಲಿ ಎಪಿಎಂಸಿ ವತಿಯಿಂದ ಮಾಡಲಾಗಿರುವ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಕಳಪೆಯಾಗಿರುವ ಕುರಿತು ನಿರ್ದೇಶಕ ಸಂತೋಷ ಜಾಕೆ ಪ್ರಸ್ತಾಪಿಸಿದರು. ಆಗ ದೀಪಕ್ ಕುತ್ತಮೊಟ್ಟೆಯವರು, “ತೊಡಿಕಾನದಲ್ಲಿ ಆಗಿರುವ ಕಾಮಗಾರಿಯು ಕಳಪೆಯಾಗಿರುವ ಮತ್ತು ವಿಳಂಬ ಕುರಿತು ಪ್ರಸ್ತಾಪಿಸಿದರು. `’ನಾವು ಗುತ್ತಿಗೆದಾರರಿಗೆ ತಿಳಿಸಿದರೂ ಅವರು ವಿಳಂಬ ತೋರುತ್ತಿದ್ದಾರೆ. ಇವಿಷ್ಟೇ ಅಲ್ಲದೇ ಮಡಪ್ಪಾಡಿ ಗ್ರಾಮದ ಶೀರಡ್ಕ-ಬಾಳೆಗುಡ್ಡೆ ರಸ್ತೆ, ಕೊಲ್ಲಮೊಗ್ರ ದಲ್ಲಿ ಆಗಬೇಕಾದ ಕಾಮಗಾರಿ, ಎಪಿಎಂಸಿ ಒಳಗಡೆ ಚರಂಡಿ ನಿರ್ಮಾಣ, ಪೈಂಟ್ ಕೆಲಸಗಳನ್ನು ಆ ಗುತ್ತಿಗೆದಾರರು ಬಾಕಿ ಮಾಡಿದ್ದಾರೆ ಎಂದು ಅಧ್ಯಕ್ಷ ವಿನಯ್ ಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು ಈ ಕುರಿತು ಚರ್ಚೆ ನಡೆದು ಆ ಗುತ್ತಿಗೆದಾರನಿಗೆ ಗಡುವು ನೀಡಿ ನೋಟಿಸ್ ಜಾರಿಮಾಡಬೇಕು ಎಂದು ನಿರ್ದೇಶಕರು ಸಲಹೆ ನೀಡಿದ ಮೇರೆಗೆ ಅದರಂತೆ ನಿರ್ಣಯ ಕೈಗೊಳ್ಳಲಾಯಿತು.

ನ.ಪಂ. ಗೆ ಬರೆಯಲು ನಿರ್ಣಯ

ಎಪಿಎಂಸಿ ಯಾರ್ಡ್ ನೊಳಗೆ ಗೋದಾಮು, ಅಡಿಕೆ ವ್ಯಾಪಾರಸ್ಥರಿದ್ದಾರೆ. ಇಲ್ಲಿ ವಾರದಲ್ಲಿ ಸಂತೆ ನಡೆಯುತ್ತಿದೆ. ಸ್ವಚ್ಛತೆಯ ನಿಟ್ಟಿನಲ್ಲಿ ನ.ಪಂ. ಕಸದ ವಾಹನ ಬರಬೇಕು. ಆದರೆ ಬರುತ್ತಿಲ್ಲ ಎಂದು ವಿನಯ ಕುಮಾರ್ ಪ್ರಸ್ತಾಪಿಸಿದರಲ್ಲದೆ, ನಾವು ವರ್ಷಕ್ಕೆ ೧ ಲಕ್ಷದ ೨೩ ಸಾವಿರ ತೆರಿಗೆ ಪಾವತಿ ಮಾಡುತ್ತಿವೆ ಎಂದು ಹೇಳಿದರು. ನ.ಪಂ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದು ಈ ಕುರಿತು ತಿಳಿಸಿ ಎಂದು ನಿರ್ದೇಶಕರ ಸಲಹೆಯ ಮೇರೆಗೆ ಅದರಂತೆ ನಿರ್ಣಯ ಕೈಗೊಳ್ಳಲಾಯಿತು.

ಬ್ಯಾಂಕ್ ಮತ್ತು ಸೂಪರ್ ಮಾರ್ಕೆಟ್‌ಗೆ ಸಲಹೆ

ಸುಳ್ಯದ ಎ.ಪಿ.ಎಂ.ಸಿ. ಯಾರ್ಡ್‌ನೊಳಗೆ ಬ್ಯಾಂಕ್ ಮತ್ತು ಸೂಪರ್ ಮಾರ್ಕೇಟ್ ಆಗಬೇಕು ನಾವು ಈ ಹಿಂದೆ ಚರ್ಚೆ ನಡೆಸಿರುವ ವಿಚಾರದ ಫಾಲೋ ಅಪ್ ಏನಾಯಿತು? ಎಂದು ನಿರ್ದೇಶಕ ಸಂತೋಷ್ ಜಾಕೆ ಪ್ರಶ್ನಿಸಿದಾಗ, “ಈ ಹಿಂದಿನ ಅವಧಿಯಲ್ಲಿ ಈ ಯೋಜನೆಗಳನ್ನಿಟ್ಟುಕೊಂಡು ಮಂಜೂರಾತಿ ಬರೆಯಲಾಗಿತ್ತು. ಆದರೆ ಗೋದಾಮು ಕಟ್ಟಡ ಹೊರತು ಪಡಿಸಿ ಉಳಿದವುಗಳಿಗೆ ಮಂಜೂರಾತಿ ದೊರೆತಿಲ್ಲ” ಎಂದು ಅಧ್ಯಕ್ಷ ವಿನಯ ಕುಮಾರ್ ಹೇಳಿದರು. “ನೀವು ಮತ್ತೊಮ್ಮೆ ಡೈರೆಕ್ಟರ್ ಜತೆ ಮಾತನಾಡಿ. ಇಲ್ಲಿ ಬ್ಯಾಂಕ್ – ಸೂಪರ್ ಮಾರ್ಕೆಟ್ ಅಗತ್ಯತೆಯ ಕುರಿತು ತಿಳಿಸಿ. ಅಗತ್ಯ ಬಿದ್ದರೆ ಸಚಿವರಿಮದಲು ಶಿಫಾರಸು ಮಾಡಿಸಿ” ಎಂದು ನಿರ್ದೇಶಕರು ಸಲಹೆ ನೀಡಿದರು.

ಅಗರ್‌ವುಡ್ ಕೃಷಿ : ಚರ್ಚೆ
ಈ ಹಿಂದೆ ಅಗರ್‌ವುಡ್ ಕೃಷಿಗೆ ತೋಟಗಾರಿಕೆಯಿಂದ ಸಬ್ಸಿಡಿ ದೊರೆತಿತ್ತು. ಆ ಸಬ್ಸಿಡಿ ಪಡೆದು ಕೆಲವು ಕೃಷಿಕರು ಕರಷಿ ಬೆಳೆದಿದ್ದಾರೆ. ಅದನ್ನು ಕಟಾವಿಗೂ ಅದೇ ಸಂಸ್ಥೆಯವರು ಬರುವುದಾಗಿ ಹೇಳಿದ್ದರು. ಈ ಬಗ್ಗೆ ಸುಳ್ಯದ ತೋಟಗಾರಿಕಾ ಸಹಾಯಕ ನಿರ್ದೇಶಕರ ಗಮನಕ್ಕೆ ತಂದರೂ ಅವರು ಏನೂ ಮಾಡುತ್ತಿಲ್ಲ. ಸಭೆ ಕರೆಯಿರಿ ಎಂದರೂ ಕೇಳುತ್ತಿಲ್ಲ. ಈಗ ಅಗರ್‌ವುಡ್ ಬೆಳೆದ ಕೃಷಿಕರು ಏನು ಮಾಡಲು ಆಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಸಚಿವರಿಗೆ ಎಪಿಎಂಸಿ ಕಡೆಯಿಂದ ಪತ್ರ ಬರೆದು ಸಮಸ್ಯೆಯ ವಿವರ ನೀಡುವಂತೆ ನಿರ್ದೇಶಕ ದೇರಣ್ಣ ಗೌಡರು ಒತ್ತಾಯಿಸಿದರು. “ಎಡಿಎ ಸಭೆ ಕರೆಯದಿದ್ದರೆ ಸಚಿವರಿಗೆ ತಿಳಿಸಿ. ಇಲ್ಲವೋ ತೋಟಗಾರಿಕಾ ಸಚಿವರಿಗೆ ಪತ್ರ ಮುಖೇನ ತಿಳಿಸಿ” ಎಂದು ಸಂತೋಷ್ ಜಾಕೆ ಯಾದಿಯಾಗಿ ನಿರ್ದೇಶಕರು ಸಲಹೆ ನೀಡಿದರು.

ಯಾರ್ಡ್‌ನೊಳಗಿನ ಅಭಿವೃದ್ಧಿ ಕಾಮಗಾಡಿಗೆ ನಬಾರ್ಡ್‌ನಿಂದ ೫ ಕೋಟಿ ರೂ ಹಾಗೂ ಇತರೆ ೧ ಕೋಟಿ ೫ ಲಕ್ಷ ರೂ ಅನುದಾನ ಬರಲಿದೆ ಎಂದು ಅಧ್ಯಕ್ಷ ವಿನಯ ಮುಳುಗಾಡು ತಿಳಿಸಿದರು. ಕಂಪೌಂಡ್ ಕುಸಿತಗೊಂಡಿದ್ದು ಅದನ್ನು ಮರು ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚೆಯಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.