Breaking News

ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಸುದ್ದಿ ಗ್ರಾಮಸ್ವರಾಜ್ಯ ಗಾಂಧಿರಥಕ್ಕೆ ಅದ್ದೂರಿ ಸ್ವಾಗತ

Advt_Headding_Middle

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮದಿನಾಚರಣೆ ಅಂಗವಾಗಿ ಸುಳ್ಯ ತಾಲೂಕಿನಾದ್ಯಂತ ಸಂಚರಿಸುತ್ತಿರುವ ಸುದ್ದಿ ಗ್ರಾಮಸ್ವರಾಜ್ಯ ಗಾಂಧಿ ರಥಕ್ಕೆ ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಸೆ.30ರಂದು ಅದ್ಧೂರಿಯಾಗಿ ಸ್ವಾಗತಿಸಲಾಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು, ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ ಯವರು ಗಾಂಧೀಜಿಯವರ ಗ್ರಾಮಸ್ವರಾಜ್ಯ ರಾಮರಾಜ್ಯದ ಕಲ್ಪನೆಯ ಕುರಿತು ಮಾತನಾಡಿ, ಶುಭಹಾರೈಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು, ಸದಸ್ಯರಾದ ಎನ್.ಎಸ್.ಡಿ.ವಿಠಲದಾಸ್, ಅನಿಲ್ ರೈ ಪುಡ್ಕಜೆ, ಶ್ರೀಮತಿ ಜಯಶ್ರೀ, ಶ್ರೀಮತಿ ನಮಿತಾ, ಭವ್ಯ, ಮೋಹಿನಿ ಕೆ.ಟಿ, ಮಣಿಕಂಠ ಕಲ್ಲೋಣಿ, ದಿನೇಶ್ಚಂದ್ರ ಹೆಗ್ಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಭವ್ಯ ಎಂ.ಬಿ, ಶ್ರೀಮತಿ ಅನುಷಾ , ಬೆಳ್ಳಾರೆ ಕೆ.ಪಿ.ಎಸ್.ನ ಉಪಪ್ರಾಂಶುಪಾಲರಾದ ಶ್ರೀಮತಿ ಉಮಾಕುಮಾರಿ, ಶಾಲಾ ಮುಖ್ಯಗುರು ಮಾಯಿಲಪ್ಪ, ಗ್ರಾಮ ಪಂಚಾಯತ್ ಲೆಕ್ಕಸಹಾಯಕಿ ಸುಶೀಲ, ಗ್ರಂಥಾಲಯ ಮೇಲ್ವಿಚಾರಕಿ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಭಾರತಿ, ಶ್ರೀಮತಿ ಇಂದಿರಾ,ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಶ್ರೀಮತಿ ಗೀತಾ ಪ್ರೇಮ್, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ನಂದಿ ವರ್ಗದವರು ಉಪಸ್ಥಿತರಿದ್ದರು.

ಸುದ್ದಿ ಜಾಹೀರಾತು ವಿಭಾಗದ ಮುಖ್ಯಸ್ಥ ರಮೇಶ ನೀರಬಿದಿರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಸರಣಾ ವಿಭಾಗದ ಮುಖ್ಯಸ್ಥ ಗಣೇಶ್ ಕುಕ್ಕುದಡಿ, ವರದಿಗಾರ ಜಗತ್ ದೇರಾಜೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.