ನ್ಯಾಯಾಲಯಕ್ಕೆ ಹಾಜರಾಗದ ಡಿ.ಕೆ.ಶಿ. : ನ. 06ಕ್ಕೆ ವಾರೆಂಟ್

Advt_Headding_Middle

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಡಿ. ಕೆ. ಶಿವಕುಮಾರ್ ಅವರು ಕರ್ನಾಟಕದ ಇಂಧನ ಸಚಿವರಾಗಿದ್ದಾಗ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಕೇಸಿನ ವಿಚಾರದಲ್ಲಿ ಸಾಕ್ಷ್ಯ ಹೇಳಲು ನಿನ್ನೆ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದು, ಆದರೆ ಅವರು ಹಾಜರಾಗದ ಹಿನ್ನಲೆಯಲ್ಲಿ ನ.06ಕ್ಕೆ ಮತ್ತೆ ವಾರೆಂಟ್ ಆಗಿರುವುದಾಗಿ ತಿಳಿದುಬಂದಿದೆ.


2016ನೇ ಫೆಬ್ರವರಿ 28 ರಂದು ರಾತ್ರಿ ಬೆಳ್ಳಾರೆಯ ಸಾಯಿ ಗಿರಿಧರ ರೈಯವರು ಅಂದಿನ ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗೆ ಫೋನ್ ಮಾಡಿ ಸುಳ್ಯದ ವಿದ್ಯುತ್ ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸಿ ಬೈದಿದ್ದರು. ಇದರಲ್ಲಿ ಅವಾಚ್ಯ ಶಬ್ದಗಳಿದ್ದವೆಂದು ವ್ಯಗ್ರರಾದ ಶಿವಕುಮಾರ್, ಮೆಸ್ಕಾಂ ಎಂ.ಡಿ.ಗೆ ಹೇಳಿ ಸುಳ್ಯ ಮೆಸ್ಕಾಂ ಎಇಇ ಮೂಲಕ ಸುಳ್ಯ ಪೊಲೀಸ್ ಠಾಣೆಯಲ್ಲಿ ಗಿರಿಧರ ರೈ ವಿರುದ್ಧ ದೂರು ಕೊಡಿಸಿದ್ದರು. ಈ ಕೇಸಿನಲ್ಲಿ ಡಿ.ಕೆ. ಶಿವಕುಮಾರ್ ರನ್ನು ಕೂಡ ಸಾಕ್ಷಿಯಾಗಿ ತೋರಿಸಲಾಗಿತ್ತು.
ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯತೊಡಗಿತ್ತು. ಮೆಸ್ಕಾಂ ಎಂ.ಡಿ. ಚಿಕ್ಕಮುತ್ತಯ್ಯ ಮತ್ತಿತರ ಹಲವರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದಿದ್ದರು. ಆದರೆ ಶಿವಕುಮಾರ್ ಗೆ ಸಮನ್ಸ್ ಗಳಾಗಿದ್ದರೂ, ಅವು ಅವರಲ್ಲಿಯ ವರೆಗೆ ತಲುಪದೇ ಇದ್ದುದರಿಂದಲೇ ಅಥವಾ ಅವರಿಗೆ ಸಮಯವಿಲ್ಲದ ಕಾರಣವೋ ಅವರಿಗೆ ನ್ಯಾಯಾಲಯಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಈ ಬಾರಿ ಸುಳ್ಯ ನ್ಯಾಯಾಧೀಶ ಸೋಮಶೇಖರ್ ರವರು ಡಿ. ಕೆ. ಶಿವಕುಮಾರ್ ಅವರಿಗೆ ವಾರೆಂಟ್ ಜಾರಿಗೊಳಿಸಿದ್ದಲ್ಲದೆ, ರಾಜ್ಯದ ಐಜಿಪಿ ಮತ್ತು ಡಿಐಜಿಗೆ ನೋಟಿಸ್ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಆದರೆ ಖಾಸಗಿ ಕಾರಣಗಳಿಗಾಗಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಡಿಕೆಶಿಯವರು ಇಮೇಲ್ ಮೂಲಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ನ.06 ರಂದು ಹಾಜರಾಗಲು ಡಿಕೆಶಿಯವರಿಗೆ ಮತ್ತೆ ವಾರೆಂಟ್ ಹೊರಡಿಸಲಾಗಿದ್ದು, ಅವರನ್ನು ಹಾಜರುಪಡಿಸಬೇಕೆಂದು ಪೊಲೀಸ್ ನಿರ್ದೇಶಕರಿಗೂ ವಾರೆಂಟ್ ಹೊರಡಿಸಿದ್ದಾರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.