Breaking News

ಗುತ್ತಿಗಾರು ವರ್ತಕರ ಮಹಾಸಭೆ

Advt_Headding_Middle

ಅಧ್ಯಕ್ಷರಾಗಿ ಶಿವರಾಮ ಕರುವಜೆ

ಕಾರ್ಯದರ್ಶಿಯಾಗಿ ರವಿಪ್ರಕಾಶ್ ಬಳ್ಳಡ್ಕ

ಕೋಶಾಧಿಕಾರಿಯಾಗಿ ದಿನೇಶ್ ಹಾಲೆಮಜಲು ಆಯ್ಕೆ

ಗುತ್ತಿಗಾರು ವರ್ತಕರ ಮಹಾ ಸಭೆಯು ಸೆ 30 ರಂದು ನಡೆಯಿತು.

ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷೆ ರೇವತಿ ಆಚಳ್ಳಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಪಧಾದಿಕಾರಿಗಳಿಗೆ ಹಾಗೂ ಸಂಘಕ್ಕೆ ಹಿತನುಡಿಗಳನ್ನು ಹೇಳಿದರು.

ವೇದಿಕೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ವೆಂಕಟ್ರಮಣ ಕೆಂಬ್ರೋಳಿ ,ಗೌರವಾಧ್ಯಕ್ಷರಾದ ಮರಿಯಪ್ಪ ಮಾವಾಜಿ ,ಕಾರ್ಯದರ್ಶಿ ಶ್ರೀಧರ ಬಿ.ಕೆ ,ಜತೆ ಕಾರ್ಯದರ್ಶಿ ಅಬ್ದುಲ್ ರಜಾಕ್ ,ಕೋಶಾದಿಕಾರಿ ಕೇಶವ ಕಣ್ಕಲ್ ಉಪಸ್ಥಿತರಿದ್ದರು .ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬಿ.ಕೆ ಶ್ರೀಧರ್ ವರದಿ ವಾಚಿಸಿದರು. ವರ್ತಕರ ಸಂಘದಿಂದ ಕೊಠಡಿಗೆ ಗ್ರಾ.ಪಂ ಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ನೂತನ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಶಿವರಾಮ ಕರುವಜೆ ,ಉಪಾದ್ಯಕ್ಷರಾಗಿ ಲಿಜೋ ಜೋಸ್ ,ಕಾರ್ಯದರ್ಶಿಯಾಗಿ ಬಿವಿ ರವಿಪ್ರಕಾಶ್ ,ಜೊತೆಕಾರ್ಯದರ್ಶಿ ರಾಜೇಶ್ ಬಾಕಿಲ ,ಕೋಶಾಧಿಕಾರಿಯಾಗಿ ದಿನೇಶ್ ಹಾಲೆಮಜಲು ,ಸದಸ್ಯರಾಗಿ ಚಂದ್ರಶೇಖರ ಭಟ್ ,ನವೀನ್ ,ಬಿ.ಕೆ ಶ್ರೀಧರ್ ,ಶ್ರೇಯಸ್ ಮುತ್ಲಾಜೆ ,ವೆಂಕಟ್ರಮಣ ಕೆಂಬ್ರೋಳಿ ,ರಾಘವ ಅರ್ನೊಜಿ,ಲತಾಕುಮಾರಿ ಆಜಡ್ಕ,ನಾರಾಯಣ ಕುಚ್ಚಾಲ ,ಮೊಯಿದು ಕುಂಞ ಬಾಕಿಲ ,ಅನಿಲ್ ಕುಮಾರ್ ಆಯ್ಕೆ ಮಾಡಲಾಯಿತು. ಹನೀಕ್ಷಾ ಪ್ರಾರ್ಥಿಸಿದರು. ಶಿವರಾಮ ಕರುವಜೆ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ ಶ್ರೀಧರ್ ಧನ್ಯವಾದವಿತ್ತರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.