Breaking News

ಸುಳ್ಯ ತಾಲೂಕು ಪಂಚಾಯಿತಿ ಜಮಾಬಂಧಿ ಅಮೃತ್ ಯೋಜನೆಗೆ ವಸತಿ ರಹಿತರ ಪಟ್ಟಿ ಕಳುಹಿಸಲು ಡಾ| ಕುಮಾರ್ ಸೂಚನೆ

Advt_Headding_Middle

 

 

ಗ್ರಾಮಗಳಲ್ಲಿ ಇರುವ ಪ್ರತಿ ಕಡೆಗಳಿಗೆ ಹೋಗಿ ವಸತಿ ರಹಿತರನ್ನು ಪತ್ತೆ ಹಚ್ಚಿ ಅವರನ್ನು ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಿ ಫಲಾನುಭವಿಗಳು ಬಿಟ್ಟು ಹೋಗದ ರೀತಿ ಅಮೃತ್ ಯೋಜನೆಗೆ ಪಟ್ಟಿ ಕಳುಹಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸೂಚನೆ ನೀಡಿದ್ದಾರೆ.
ಅವರು ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ೨೦೨೦-೨೧ನೇ ಸಾಲಿನ ಜಮಾಬಂಧಿಯನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿ ವಸತಿ ರಹಿತರ ಸಂಖ್ಯೆ ಹೆಚ್ಚಿದೆ. ಅಮೃತ್ ಯೋಜನೆಯಡಿ ಎಲ್ಲರಿಗೂ ಮನೆ ಕಲ್ಪಿಸಬೇಕು. ಗ್ರಾಮದ ಎಲ್ಲಿಯೂ ಪಟ್ಟಿಯಿಂದ ಹೊರಗುಳಿಯದಂತೆ ಪಟ್ಟಿ ನೀಡಬೇಕು ಎಂದು ಸೂಚಿಸಿದರು.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಾಗಿ ಕಮ್ಯೂಟಿನಿ ಅಭಿವೃದ್ದಿ ಯೋಜನೆಗಳಿಗೆ ಮಹತ್ವ ನೀಡಬೇಕು. ತಾಲೂಕಿನಲ್ಲಿ ೧೬೦೦೦ ಮನೆಗಳಿವೆ ಇದರಲ್ಲಿ ಕೇವಲ ೬೮೪ ಮನೆಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗೆ ಸೋಪ್ ಫಿಟ್ ಗಳನ್ನು ಮಾಡಲಾಗಿದೆ. ಎಲ್ಲಾ ಮನೆಗಳಿಗೂ ಕಡ್ಡಾಯವಾಗಿ ಸೋಪ್ ಫಿಟ್‌ಗಳನ್ನು ರಚನೆ ಮಾಡಿ ೧೦೦ ಶೇ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು. ಇದಕ್ಕಾಗಿ ಪಿಡಿಒಗಳು ಗಮನ ಹರಿಸಬೇಕು ಎಂದು ಹೇಳಿದರು.
ನರೇಗಾದಲ್ಲಿ ಸ್ವಚ್ಚ ಸಂಕೀರ್ಣ ಘಟಕಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲದೇ ಕಸ ಸಾಗಾಟ ವಾಹನಗಳು ಪ್ರತಿ ಗ್ರಾ.ಪಂಗಳಲ್ಲಿ ಸಂಚಾರಿಸುವ ರೀತಿ ಮಾಡಬೇಕು ಎಂದು ಹೇಳಿದರು.
ಜಾಗದ ಸಮಸ್ಯೆಯಿಂದ ನಿರೀಕ್ಷಿತ ಮಟ್ಟದಲ್ಲಿ ಬೋರ್ ವೆಲ್ ಕೊರೆಯುವ ಕೆಲಸ ಆಗುತ್ತಿಲ್ಲ. ಕೆಲವು ಕಡೆ ಬೋರ್ ವೆಲ್ ಕೊರೆಯುವ ಕಡೆ ನೀರು ಸಿಗದೇ ವ್ಯರ್ಥ ಆಗುತ್ತಿದೆ. ೧೦೦ರಲ್ಲಿ ೪೬ ಕಡೆ ಕೆಲಸ ಆಗಿದೆ ಎಂದು ಇಲಾಖೆಯ ಇಂಜಿನಿಯರ್ ಜನಾರ್ಧನ್ ಹೇಳಿದರು. ಇದಕ್ಕೆ ಉತ್ತರಿಸಿದ ಸಿಎಸ್ ನೀರಾವರಿ ಇಲಾಖೆಯಿಂದ ಕೊರೆಯುವ ಬೋರ್ ವೆಲ್ ಗಳಿಗೆ ಸ್ಥಳಕ್ಕೆ ಹೋಗಿ ಡಿ.ಪಿ.ಆರ್ ಮಾಡಬೇಕು. ಕೆಲಸಗಳು ಕಂಠಿತಗೊAಡಿದೆ ವೇಗ ಪಡೆಯಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ ೩೨ ಅಂಗನವಾಡಿ ರಿಪೇರಿಗೆ ಪಟ್ಟಿ ಕಳುಹಿಸಲಾಗಿದೆ. ಅಮೃತ್ ಯೋಜನೆಯಡಿ ೩ ಅಂಗನವಾಡಿಗಳನ್ನು ದುರಸ್ತಿ ಮಾಡಲಾಗಿದೆ ಎಂದು ಸಿಡಿಪಿಒ ರಶ್ಮೀ ನೆಕ್ರಾಜೆ ಹೇಳಿದರು. ಹೊಸ ಅಂಗನವಾಡಿಗಳನ್ನು ನಿರ್ಮಿಸಲು ಸೂಕ್ತ ಜಾಗ ಇದ್ದರೆ ಪಟ್ಟಿ ಕೊಡಿ ಅನುಮೋದನೆ ನೀಡಲಾಗುವುದು ಎಂದು ಡಾ. ಕುಮಾರ್ ಹೇಳಿದರು.

ಜಮಾಬಂಧಿಯಲ್ಲಿ ತಾ.ಪಂ. ಕಾರ್ಯನಿರ್ವಣಾಧಿಕಾರಿ ಎನ್. ಭವಾನಿಶಂಕರ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಾ.ಪಂ. ಸಿಬ್ಬಂಧಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.