Breaking News

ಡಾ.ದೀಪ್ತಿ ರಾಮಕೃಷ್ಣರಿಗೆ ಬಿಲ್ಡರ್ ಆಫ್ ಎಜ್ಯುಕೇಶನ್ ಅವಾರ್ಡ್

Advt_Headding_Middle

 

ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪ್ರಾಚಾರ್ಯರಿಗೆ ಫಸ್ಟ್ ಕರ್ನಾಟಕ ಸಂಸ್ಥೆಯು ನೀಡುವ ಬಿಲ್ಡರ್ ಆಫ್ ಎಜ್ಯುಕೇಷನ್ ಆವಾರ್ಡ್ ಗೆ ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಅನನ್ಯ ಪಬ್ಲಿಕ್ ಸ್ಕೂಲ್ ನ ಪ್ರಾಚಾರ್ಯೆ ಡಾ.ದೀಪ್ತಿ ರಾಮಕೃಷ್ಣ ರವರು ಭಾಜನರಾಗಿದ್ದಾರೆ.
ಬೆಂಗಳೂರಿನ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ಸೆ.25 ರಂದು ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವೇಣುಗೋಪಾಲ್, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ವಿಧಾನ ಪರಿಷತ್ತಿನ ಸದಸ್ಯ ಪುಟ್ಟಣ್ಣ, ಸಂಸ್ಥೆಯ ಅಧ್ಯಕ್ಷ ಅಫ್ಸದ್ ಅಹಮದ್, ಪ್ರಧಾನ ಕಾರ್ಯದರ್ಶಿ ಬೀಬಿ ಆಯೇಷಾ ಮುಂತಾದವರಿದ್ದರು.
ದೀಪ್ತಿಯವರು ಬೆಂಗಳೂರಿನ ಹೇಸರಘಟ್ಟದಲ್ಲಿರುವ ಅನನ್ಯ ಪಬ್ಲಿಕ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಳ್ಯ ಗಾಂಧಿನಗರದ ನಾವೂರು ನಿವಾಸಿ ಧನಂಜಯ ಕೆ. ಮತ್ತು ಸರೋಜಿನಿ ದಂಪತಿಯ ಪುತ್ರಿಯಾಗಿರುವ ಇವರು ಸುಳ್ಯದಲ್ಲಿ ತಹಶೀಲ್ದಾರ್ ಆಗಿದ್ದು ಬಳಿಕ ಉಪ ಕಾರ್ಯದರ್ಶಿಯಾಗಿ ನವೃತ್ತರಾದ ಚೋಮ ನಾಯ್ಕ್ ರ ಪುತ್ರ ರಾಮಕೃಷ್ಣ ನಾಯ್ಕ್ ಜಿ ಯವರ ಪತ್ನಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.